100 ಡಾಲರ್ಸ್ ಗೆ ಮಲ್ಯ ಖರೀದಿಸಿದ ತಂಡ ಯಾವುದು?

Posted By:
Subscribe to Oneindia Kannada

ನವದೆಹಲಿ, ಏಪಿರ್ಲ್ 12: ಉದ್ಯಮಿ, ಕ್ರೀಡಾಪ್ರೇಮಿ ವಿಜಯ್ ಮಲ್ಯ ಅವರಿಲ್ಲದೆ ಇಂಡಿಯನ್ ಪ್ರಿಮಿಯರ್ ಲೀಗ್ ನ 9ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣಕ್ಕಿಳಿಯುತ್ತಿದೆ. ಈ ನಡುವೆ ದೇಶ ತೊರೆದ ಮಲ್ಯ ಅವರು ಕೇವಲ 100 ಯುಎಸ್ ಡಾಲರ್ ನೀಡಿ ಕೆರಿಬಿಯನ್ ತಂಡವೊಂದನ್ನು ಖರೀದಿಸಿರುವ ಸುದ್ದಿ ಬಂದಿದೆ.[ರಾಯಲ್ ಚಾಲೆಂಜರ್ಸ್‌ಗೆ ವಿಜಯ್ ಮಲ್ಯ ಗುಡ್ ಬೈ]

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಕೆರಿಬಿಯನ್ ಕ್ರಿಕೆಟ್ ಲೀಗ್ ಆದ ಕೆರಿಬಿಯನ್ ಪ್ರೀಮಿಯರ್ ಟಿ20 ಲೀಗ್ ನಲ್ಲಿ ಆಡುವ ಬಾರ್ಬಡೋಸ್ ಟ್ರೈಂಡೆಂಟ್ಸ್ ತಂಡವನ್ನು 100 ಡಾಲರ್ ನೀಡಿ ಮಲ್ಯ ಪಡೆದಿದ್ದಾರಂತೆ. 9,000ಕೋಟಿ ರು ಗೂ ಅಧಿಕ ಮೊತ್ತದ ಸಾಲವನ್ನು ತೀರಿಸಲು ಆಗದೆ ಪರದಾಡುತ್ತಿರುವ ಮಲ್ಯ ಅವರು ಸಿಪಿಎಲ್ ತಂಡವನ್ನು ಫೆಬ್ರವರಿ ತಿಂಗಳಲ್ಲೇ ಖರೀದಿಸಿದ್ದಾರೆ.[ಬಿಕಿನಿ ಬ್ಯೂಟಿ ಕೊಟ್ಟು, ಸಾಲದಿಂದ ಮುಕ್ತರಾಗಿ ಮಲ್ಯಗೆ ವರ್ಮಾ ಸಲಹೆ]

Vijay Mallya says he paid 'just $100' to acquire CPL team Barbados Tridents

ಯುನೈಟೆಡ್ ಸ್ಪಿರೀಟ್ಸ್ ನ ಚೇರ್ಮನ್ ಹುದ್ದೆಯಿಂದ ಕೆಳಗಿಳಿಯುವುದಕ್ಕೂ ಮುನ್ನ ಈ ಖರೀದಿ ನಡೆಸಿದ್ದಾರೆ. ಸದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲಿನ ಹಿಡಿತವನ್ನು ಮಲ್ಯ ಕಳೆದುಕೊಂಡಿದ್ದಾರೆ.[ಆರ್ಟ್ ಆಫ್ ಲೀವಿಂಗ್: ಮಲ್ಯರಿಗೂ ಮುಂಚೆ ದೇಶ ತೊರೆದವರು]

ಸಿಪಿಎಲ್ ನಲ್ಲಿ ಫ್ರಾಂಚೈಸಿ ಹಕ್ಕು 100 ಯುಎಸ್ ಡಾಲರ್ ಗಳಿಗೆ ಸಿಕ್ಕಿದ್ದರೂ, ತಂಡದ ನಿರ್ವಹಣೆಗೆ ಅಂದಾಜು 2 ಮಿಲಿಯನ್ ಯುಎಸ್ ಡಾಲರ್ ಖರ್ಚಾಗಲಿದೆ ಎಂದು ಮಲ್ಯ ತಿಳಿಸಿದ್ದಾರೆ. ಐಪಿಎಲ್ ನಲ್ಲಿ ಬರುವಂತೆ ಸಿಪಿಎಲ್ ನಲ್ಲಿ ಆದಾಯ ನಿರೀಕ್ಷಿಸಲು ಸಾಧ್ಯವಿಲ್ಲ. ಎಲ್ಲವೂ ಪ್ರಾಯೋಜಕತ್ವ, ಟಿಕೆಟ್ ಮರಾಟದ ಮೇಲೆ ನಿರ್ಧಾರವಾಗಲಿದೆ. ಹೀಗಾಗಿ ಸಿಪಿಎಲ್ ನ ತಂಡವನ್ನು ಭಾರಿ ಮೊತ್ತಕ್ಕೇನು ನಾನು ಖರೀದಿಸಿಲ್ಲ ಎಂದು ಮಲ್ಯ ಅವರು ಸ್ಪಷ್ಟಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Troubled businessman Vijay Mallya has claimed that he paid mere USD 100 to buy Barbados Tridents, a franchise in the Caribbean Premier T20 League (CPL).
Please Wait while comments are loading...