"ವಿರಾಟ್ ಕೊಹ್ಲಿರನ್ನು ಕ್ಯಾಪ್ಟನ್ ಮಾಡಲು ಇದು ಸಕಾಲ"

Posted By:
Subscribe to Oneindia Kannada

ನವದೆಹಲಿ, ಜ. 22: ಕ್ರಿಕೆಟ್ ಕ್ಷೇತ್ರದ ಶ್ರೇಷ್ಠ ಸ್ಪಿನ್ನರ್ ಗಳಲ್ಲಿ ಒಬ್ಬರೆನಿಸಿರುವ ಇಎಎಸ್ ಪ್ರಸನ್ನ ಅವರು ವಿರಾಟ್ ಕೊಹ್ಲಿ ಪರ ಚೆಂಡು ಎಸೆದಿದ್ದಾರೆ. ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ಯಾಪ್ಟನ್ ಆಗಿ ಉತ್ತಮ ನಿರ್ವಹಣೆ ತೋರಿದ್ದಾರೆ. ಬ್ಯಾಟಿಂಗ್ ನಲ್ಲೂ ಮಿಂಚುತ್ತಿದ್ದಾರೆ. ಅವರನ್ನು ಎಲ್ಲಾ ಮಾದರಿಯ ತಂಡಕ್ಕೂ ನಾಯಕರನ್ನಾಗಿಸಲು ಇದು ಸಕಾಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಂಎಸ್ ಧೋನಿ ಅವರು ಏಕದಿನ ಕ್ರಿಕೆಟ್ ಹಾಗೂ ಟಿ20 ನಾಯಕರಾಗಿ ಸದ್ಯಕ್ಕೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ವಿಶ್ವ ಟಿ 20 ತನಕ ಧೋನಿ ಅವರು ನಾಯಕರಾಗಿ ಉಳಿಯುವ ಎಲ್ಲಾ ಲಕ್ಷಣಗಳಿವೆ. [25ನೇ ಶತಕ ಸಿಡಿಸಿ, ವಿರಾಟ್ ಕೊಹ್ಲಿರಿಂದ ದಾಖಲೆ]

ಆದರೆ, ಭಾರತ ಇದೇ ರೀತಿ ಸೋಲುತ್ತಿದ್ದರೆ ತಂಡದಲ್ಲಿ ಆತ್ಮಸ್ಥೈರ್ಯ ಕುಗ್ಗುತ್ತದೆ. ಹೀಗಾಗಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಬಲ್ಲ ಸಮರ್ಥ ನಾಯಕ ಬೇಕಾಗಿದ್ದಾರೆ ಎಂದು ಪ್ರಸನ್ನ ಹೇಳಿದ್ದಾರೆ.[ವಾಸಿಂ ಅಕ್ರಂಗೆ ಕೊಟ್ಟ ಮಾತು ಉಳಿಸಿಕೊಂಡ ಕೊಹ್ಲಿ]

Make Virat Kohli captain in all 3 formats right away: EAS Prasanna

ಇದಲ್ಲದೆ, ಬ್ಯಾಟಿಂಗ್ ನಿಂದಲೂ ಧೋನಿ ಅವರು ಹೆಚ್ಚಿನ ಕೊಡುಗೆ ನೀಡುತ್ತಿಲ್ಲ. ವಯಸ್ಸು ಕೂಡಾ 33-34ರ ಆಸುಪಾಸಿನಲ್ಲಿರುವುದರಿಂದ ಯುವ ಆಟಗಾರರನ್ನು ಹುರಿದುಂಬಿಸಲು ಸೋಲುತ್ತಿದ್ದಾರೆ. [ಭಾರತದ ಸೋಲಿಗೆ ನಾನೇ ಕಾರಣ ಎಂದವರು ಯಾರು?]

ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ವಿಕೆಟ್ ಕೀಪರ್ ಆಗಿ ತಂಡದಲ್ಲಿ ಉಳಿಸಿಕೊಳ್ಳಬಹುದು. ಕೊಹ್ಲಿ ನಾಯಕತ್ವದಲ್ಲಿ ಕೀಪರ್ ಆಗಿ ಆಡಿದರೆ ತಪ್ಪೇನು. ವ್ಯಕ್ತಿಗಿಂತ ತಂಡ, ತಂಡಕ್ಕಿಂತ ದೇಶ ಮುಖ್ಯ ಎಂದು ಪ್ರಸನ್ನ ಅವರು ಪಿಟಿಐಗೆ ಶುಕ್ರವಾರ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.[ಭಾರತ ವಿರುದ್ಧ ಸರಣಿ ವೈಟ್ ವಾಶ್ ಗೆ 'ಮಳೆ' ಸಾಥ್?]

ಆರ್ ಅಶ್ವಿನ್ ಡ್ರಾಪ್ ಮಾಡಿದ್ದು ತಪ್ಪು: ತಂಡದದಲ್ಲಿ ಆಟಗಾರರ ಕ್ರಮಾಂಕ ಹಾಗೂ ಆಯ್ಕೆ ಬಗ್ಗೆ ನನಗೆ ಅಸಮಾಧಾನವಿದೆ. ತಂಡದ ಪ್ರಮುಖ ಬ್ಯಾಟ್ಸ್ ಮನ್ ಆರ್ ಅಶ್ವಿನ್ ಅವರನ್ನು ಕಳೆದ ಎರಡು ಪಂದ್ಯಕ್ಕೆ ಆಯ್ಕೆ ಮಾಡದಿರುವುದು ಯಾವ ಲಾಜಿಕ್ ಇನ್ನೂ ತಿಳಿದಿಲ್ಲ. ಜಡೇಜಕ್ಕೆ ಸರಿಯಾದ ಸಾಥ್ ನೀಡುವ ಬೌಲರ್ ಕಾಣಿಸಲಿಲ್ಲ ಎಂದು 75 ವರ್ಷ ವಯಸ್ಸಿನ ಪ್ರಸನ್ನ ಅವರು ಹೇಳಿದರು.

ಭಾರತ ಪರ 49 ಟೆಸ್ಟ್ ಪಂದ್ಯಗಳನ್ನಾಡಿ 189 ವಿಕೆಟ್ ಗಳನ್ನು ಪ್ರಸನ್ನ ಪಡೆದಿದ್ದಾರೆ. ಮನೀಶ್ ಪಾಂಡೆಗೆ ಹೆಚ್ಚಿನ ಅವಕಾಶ ನೀಡಬೇಕಿತ್ತು. ಗುರ್ ಕೀರತ್ ಸಿಂಗ್ ಹಾಗೂ ರಿಶಿ ಧವನ್ ಅವರ ಆಯ್ಕೆಯಿಂದ ಹೆಚ್ಚಿನದ್ದೇನು ಸಾಧಿಸಲಾಗಿಲ್ಲ. ಭಾರತದ ರಿಸರ್ವ್ ಆಟಗಾರರು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೊಂದುವಂತಿಲ್ಲ. ಅಶ್ವಿನ್ ಡ್ರಾಪ್ ಮಾಡಿ ರಿಶಿ ಧವನ್ ಆಯ್ಕೆ ಮಾಡುವುದು ಮೂರ್ಖತನ ಎಂದಿದ್ದಾರೆ. ಭಾರತದ ಗೆಲುವಿಗಾಗಿ ಯಾರೂ ಸ್ಲೋ ಟರ್ನಿಂಗ್ ಪಿಚ್ ರೆಡಿ ಮಾಡಿ ಇಟ್ಟಿರುವುದಿಲ್ಲ ಎಂಬುದು ಮ್ಯಾನೇಜ್ಮೆಂಟ್ ಗೆ ಬೇಗ ಅರಿವಾಗಲಿ ಎಂದು ಪ್ರಸನ್ನ ಎಚ್ಚರಿಸಿದ್ದಾರೆ. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Spin great Erapalli Prasanna feels time has come to make Virat Kohli the India captain in all three formats and MS Dhoni, whose leadership skills are on the wane, can continue playing as a wicketkeeper-batsman in the limited-overs format.
Please Wait while comments are loading...