ವಿಸ್ಡನ್‌ ಸಾರ್ವಕಾಲಿಕ ಶ್ರೇಷ್ಠ ತಂಡಕ್ಕೆ ಧೋನಿ ನಾಯಕ!

Written By: Ramesh
Subscribe to Oneindia Kannada

ನವದೆಹಲಿ,ಸೆ.22 : ಭಾರತ ಕ್ರಿಕೆಟ್ ತಂಡ 500ನೇ ಟೆಸ್ಟ್ ಸಂಭ್ರಮದಲ್ಲಿರುವ ಹಿನ್ನಲೆಯಲ್ಲಿ ಪ್ರತಿಷ್ಠಿತ ಕ್ರಿಕೆಟ್‌ ನಿಯತಕಾಲಿಕೆ ವಿಸ್ಡನ್‌ ಸಾರ್ವಕಾಲಿಕ ಬಾರತ ಟೆಸ್ಟ್ ಶ್ರೇಷ್ಠ ಇಲೆವೆನ್ ತಂಡವನ್ನು ಪ್ರಕಟಿಸಿದೆ. ಈ ಶ್ರೇಷ್ಠ ಇಲೆವೆನ್ ತಂಡಕ್ಕೆ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಕಾನ್ಪರದಲ್ಲಿ ಭಾರತ 500ನೇ ಟೆಸ್ಟ್ ಪಂದ್ಯವನ್ನು ಆಡುತ್ತಿದೆ ಇದರಿಂದ ಕ್ರಿಕೆಟ್‌ ನಿಯತಕಾಲಿಕೆ ವಿಸ್ಡನ್‌ ಈ ತಂಡವನ್ನು ಪ್ರಕಟಿಸಿದೆ. ತಂಡದಲ್ಲಿ ಟೀಂ ಇಂಡಿಯಾದ ಮಾಜಿ ಟೆಸ್ಟ್ ನಾಯಕ ಸುನಿಲ್‌ ಗವಾಸ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಜೋಡಿ ಆರಂಭಿಕ ಆಟಗಾರರಾಗಿ ಆಯ್ಕೆಗೊಂಡಿದ್ದಾರೆ.

ms dhoni

ಇನ್ನು ದಿ ವಾಲ್ ರಾಹುಲ್‌ ದ್ರಾವಿಡ್, ಸಚಿನ್‌ ತೆಂಡೂಲ್ಕರ್‌, ವಿವಿಎಸ್ ಲಕ್ಷ್ಮಣ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳಾಗಿ ಸ್ಥಾನ ಪಡೆದಿದ್ದಾರೆ. ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಈ ವಶೇಷ ತಂಡದ ವಿಕೆಟ್ ಕೀಪರ್ ಆಗಿದ್ದಾರೆ.

ಈ ಡ್ರೀಮ್ ತಂಡದಲ್ಲಿ ಭಾರತದ ಮಾಜಿ ಕ್ರಿಕೆಟರ್ ಕಪಿಲ್ ದೇವ್, ಟೀಂ ಇಂಡಿಯಾದ ಮುಖ್ಯ ಕೋಚ್ ಅನಿಲ್‌ ಕುಂಬ್ಳೆ ಮತ್ತು ವೇಗಿ ಜಾವಗಲ್ ಶ್ರೀನಾಥ್ ಸ್ಥಾನ ಪಡೆದಿದ್ದಾರೆ. ಮಹಮ್ಮದ್ ಅಜರುದ್ಧೀನ್ 12ನೇ ಆಟಗಾರನಾಗಿ ಆಯ್ಕೆಯಾಗಿದ್ದಾರೆ.

ವಿಸ್ಡನ್‌ ಇಲೆವೆನ್ ತಂಡ ಇಂತಿದೆ: ಮಹೇಂದ್ರ ಸಿಂಗ್ ಧೋನಿ (ನಾಯಕ ಹಾಗೂ ವಿಕೆಟ್‌ ಕೀಪರ್), ಸುನಿಲ್ ಗಾವಸ್ಕರ್, ವೀರೇಂದ್ರ ಸೆಹ್ವಾಗ್, ರಾಹುಲ್‌ ದ್ರಾವಿಡ್, ಸಚಿನ್‌ ತೆಂಡೂಲ್ಕರ್‌, ವಿವಿಎಸ್ ಲಕ್ಷ್ಮಣ್‌, ಕಪಿಲ್‌ ದೇವ್‌, ಅನಿಲ್‌ ಕುಂಬ್ಳೆ, ಜಾವಗಲ್ ಶ್ರೀನಾಥ್‌, ಜಹೀರ್ ಖಾನ್‌, ಬಿಷನ್ ಸಿಂಗ್ ಬೇಡಿ ಮತ್ತು ಜಹೀರ್ ಖಾನ್‌.(ಅಜರುದ್ದೀನ್ 12ನೇ ಆಟಗಾರ).

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India's limited-overs skipper Mahendra Singh Dhoni on Wednesday was named the captain of reputed cricket magazine Wisden's all-time India Test XI.
Please Wait while comments are loading...