ಮುಂಬೈ ಇಂಡಿಯನ್ಸ್ ಗೆ ಮುಖ್ಯ ಕೋಚ್ ಆಗಿ ಮಹೇಲ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 18: ಶ್ರೀಲಂಕಾದ ಮಾಜಿ ನಾಯಕ ಮಹೇಲ ಜಯವರ್ದನೆ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮುಂಬೈ ತಂಡದ ಕೋಚ್ ಆಗಿ ಶುಕ್ರವಾರ (ನವೆಂಬರ್ 18) ನೇಮಕಗೊಂಡಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ಸ್ಥಾನವನ್ನು ಮಹೇಲ ಜಯವರ್ದನೆ ತುಂಬಲಿದ್ದಾರೆ. ಈ ಬಗ್ಗೆ ಮುಂಬೈ ಇಂಡಿಯನ್ಸ್ ತಂಡ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಘೋಷಿಸಿದೆ. [ಐಸಿಸಿ ಕ್ರಿಕೆಟ್ ಸಮಿತಿಗೆ ಮಹೇಲ -ರಾಹುಲ್ ನೇಮಕ]

Mahela Jayawardene named Mumbai Indians' head coach

39 ವರ್ಷ ವಯಸ್ಸಿನ ಜಯವರ್ದನೆ ಅವರು ಡೆಲ್ಲಿ ಡೇರ್ ಡೆವಿಲ್ಸ್, ಕಿಂಗ್ಸ್ XI ಪಂಜಾಬ್, ಹಾಗೂ ಕೊಚ್ಚಿ ಟಸ್ಕರ್ ತಂಡದ ಪರ ಆಡಿದ ಅನುಭವ ಹೊಂದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 25,000ಕ್ಕೂ ಅಧಿಕ ರನ್ ಗಳಿಸಿದ್ದಾರೆ.

ಕೋಚ್ ಆಗಿ ಇದು ಜಯವರ್ದನೆ ಅವರ ಮೊಟ್ಟ ಮೊದಲ ಅನುಭವ. ಈ ಮುಂಚೆ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. 2015ರಲ್ಲಿ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಇಂಗ್ಲೆಂಡ್ ಪರ ತರಬೇತುದಾರ ತಂಡದಲ್ಲಿದ್ದರು.
(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Sri Lankan captain Mahela Jayawardene was today (November 18) appointed as the head coach of the Indian Premier League (IPL) team Mumbai Indians (MI). He replaces former Australian skipper Ricky Ponting.
Please Wait while comments are loading...