ಅಡಿಲೇಡ್ ಪಿಚ್ ಜೊತೆ ವಿರಾಟ್ ಕೊಹ್ಲಿ ಲವ್ ಅಫೇರ್

Posted By:
Subscribe to Oneindia Kannada

ಅಡಿಲೇಡ್, ಜ.26: 'ವಿರಾಟ್ ಕೊಹ್ಲಿ ಇದೇ ರೀತಿ ಆಡುತ್ತಿದ್ದರೆ ಆಸ್ಟ್ರೇಲಿಯಾದ ಸ್ಟೇಡಿಯಂ ಗ್ಯಾಲರಿಯೊಂದಕ್ಕೆ ಕೊಹ್ಲಿ ಹೆಸರು ಇಟ್ಟರೆ ಅಚ್ಚರಿಯೇನಿಲ್ಲ' ಎಂದು ನಾಯಕ ಧೋನಿ ಅವರು ಹೊಗಳಿದ್ದು ಕೇಳಿಸಿರಬಹುದು. ಅಡಿಲೇಡ್ ಮೈದಾನದಲ್ಲಿ ಕೊಹ್ಲಿ ಅವರ ಆರ್ಭಟ ಆ ರೀತಿ ಇತ್ತು. ಕೊಹ್ಲಿಗೂ ಅಡಿಲೇಡ್ ಪಿಚ್ ಗೂ ಬಿಡಿಸಲಾರದ ನಂಟು. ಕೊಹ್ಲಿ ಪಾಲಿಗೆ ಅಡಿಲೇಡ್ ಓವಲ್ ಅದೃಷ್ಟದ ಮೈದಾನ.[ಆಸ್ಟ್ರೇಲಿಯಾದಲ್ಲಿ ಗೆಲುವಿನ ಹಾದಿ ಹಿಡಿದ ಟೀಂ ಇಂಡಿಯಾ]

ಪಂದ್ಯದ ಸ್ಕೋರ್ ಕಾರ್ಡ್ | ಪಂದ್ಯದ ವರದಿ | ಸರಣಿ ವೇಳಾಪಟ್ಟಿ

ಅಡಿಲೇಡ್ ಓವಲ್​ನಲ್ಲಿ ಕೊಹ್ಲಿ ಮತ್ತೊಮ್ಮೆ ಮಿಂಚಿದ್ದಾರೆ. ಕೊಹ್ಲಿ ಟಿ20 ಶ್ರೇಷ್ಠ ಪ್ರದರ್ಶನದಿಂದಾಗಿ ಭಾರತ 20 ಓವರ್ ಗಳಲ್ಲಿ 188/3 ಸ್ಕೋರ್ ಮಾಡಿತು. ಇದಕ್ಕೆ ಪ್ರತಿಯಾಗಿ ಆಸ್ಟ್ರೇಲಿಯಾ 19.4 ಓವರ್ ಗಳಲ್ಲಿ 151ಕ್ಕೆ ಆಲೌಟ್ ಆಗಿ ಸೊಲೊಪ್ಪಿಕೊಂಡಿತು. 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದ ಮುನ್ನಡೆ ಪಡೆದಿದ್ದು, ಎರಡನೇ ಟಿ20ಐ ಪಂದ್ಯ ಮೆಲ್ಬೋರ್ನ್ ನಲ್ಲಿ ಜನವರಿ 29 (ಶುಕ್ರವಾರ) ನಡೆಯಲಿದೆ. [ದಯವಿಟ್ಟು ಮಾಸ್ಟರ್ ಬ್ಲಾಸ್ಟರ್ ಗೆ ಹೋಲಿಸ್ಬೇಡಿ: ಕೊಹ್ಲಿ]

ಈ ಹಿಂದೆ ಇದೇ ಮೈದಾನದಲ್ಲಿ 27ವರ್ಷ ವಯಸ್ಸಿನ ಕೊಹ್ಲಿ ಅವರು 3 ಟೆಸ್ಟ್ ಶತಕಗಳನ್ನು ಬಾರಿಸಿದ್ದಾರೆ. ಒಂದೇ ಪಂದ್ಯದ ಎರಡೂ ಇನಿಂಗ್ಸ್​ನಲ್ಲಿ(115 ಹಾಗೂ 141) ಶತಕ ಬಾರಿಸಿದ್ದ ದೆಹಲಿ ಬ್ಯಾಟ್ಸ್​ಮನ್ 2012ರಲ್ಲಿ 116ರನ್ ಗಳಿಸಿದ್ದರು. ಕಳೆದ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ಶತಕ (107 ರನ್) ಬಾರಿಸಿ ಗೆಲುವಿಗೆ ಕಾರಣರಾಗಿದ್ದರು.

ಕೊಹ್ಲಿ ಪಾಲಿಗೆ ಅಡಿಲೇಡ್ ಓವಲ್ ಅದೃಷ್ಟದ ಮೈದಾನ

ಕೊಹ್ಲಿ ಪಾಲಿಗೆ ಅಡಿಲೇಡ್ ಓವಲ್ ಅದೃಷ್ಟದ ಮೈದಾನ

ಇದೇ ಮೈದಾನದಲ್ಲಿ 27ವರ್ಷ ವಯಸ್ಸಿನ ಕೊಹ್ಲಿ ಅವರು 3 ಟೆಸ್ಟ್ ಶತಕಗಳನ್ನು ಬಾರಿಸಿದ್ದಾರೆ. ಒಂದೇ ಪಂದ್ಯದ ಎರಡೂ ಇನಿಂಗ್ಸ್​ನಲ್ಲಿ(115 ಹಾಗೂ 141) ಶತಕ ಬಾರಿಸಿದ್ದ ದೆಹಲಿ ಬ್ಯಾಟ್ಸ್​ಮನ್ 2012ರಲ್ಲಿ 116ರನ್ ಗಳಿಸಿದ್ದರು. ಕಳೆದ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ಶತಕ(107 ರನ್) ಬಾರಿಸಿ ಗೆಲುವಿಗೆ ಕಾರಣರಾಗಿದ್ದರು.

ಅಡಿಲೇಡ್ ಬಗ್ಗೆ ಕೊಹ್ಲಿ ಹೇಳಿದ್ದು ಹೀಗೆ

ಅಡಿಲೇಡ್ ಬಗ್ಗೆ ಕೊಹ್ಲಿ ಹೇಳಿದ್ದು ಹೀಗೆ

ನಾನು ಎಲ್ಲಿ ಹೋದರೂ ಈ ಮೈದಾನದ ನೆನಪು ನನ್ನ ಜೊತೆಗಿರುತ್ತದೆ. ಇಲ್ಲಿ ಮತ್ತೆ ಮತ್ತೆ ಆಟವಾಡಲು ಮನಸ್ಸು ಹಾತೊರೆಯುತ್ತದೆ. ಇಲ್ಲಿನ ಅಭಿಮಾನಿಗಳ ಶುಭ ಹಾರೈಕೆಯಿಂದ ನನ್ನ ಹೃದಯ ತುಂಬಿ ಬಂದಿದೆ. ನನ್ನ ಫೇವರೀಟ್ ಮೈದಾನಗಳ ಪೈಕಿ ಅಡಿಲೇಡ್ ಅಗ್ರಸ್ಥಾನದಲ್ಲಿ ಇರುತ್ತದೆ ಎಂದು ಪಂದ್ಯದ ನಂತರ ವಿರಾಟ್ ಕೊಹ್ಲಿ ಹೇಳಿದರು.

ಮೈದಾನದಲ್ಲಿ ಉತ್ಸಾಹ ತುಂಬಿದ ಕೊಹ್ಲಿ

ಮೈದಾನದಲ್ಲಿ ಉತ್ಸಾಹ ತುಂಬಿದ ಕೊಹ್ಲಿ

ಮೈದಾನದಲ್ಲಿ ಇತರೆ ಆಟಗಾರರಿಗೆ ಉತ್ಸಾಹ ತುಂಬಿದ ಕೊಹ್ಲಿ ಅವರು ಯುವ ಆಟಗಾರರಿಗೆ ಪದೇ ಪದೇ ಸಲಹೆ ನೀಡುತ್ತಿದ್ದರು. ಜಡೇಜ ಹಾಗೂ ಅಶ್ವಿನ್ ಅವರು ಕೂಡಾ ಉತ್ತಮ ಬೌಲಿಂಗ್ ಮೂಲಕ ಮನಸೆಳೆದರು.

ಕೊಹ್ಲಿ ಸೆಲ್ಫಿ ಮೋಹ

ಕೊಹ್ಲಿ ಸೆಲ್ಫಿ ಮೋಹ

ಅಡಿಲೇಡ್ ಮೈದಾನದಲ್ಲಿ ಕೊಹ್ಲಿ ಅಭ್ಯಾಸ ನಡೆಸುತ್ತಿದ್ದಾಗ ಅವರೊಂದಿಗೆ ಸೆಲ್ಪಿ ತೆಗೆಸಿಕೊಳ್ಳಲು ಮಹಿಳಾ ಅಭಿಮಾನಿಗಳ ದಂಡು ನೆರದಿತ್ತು.ಆದರೆ, ಇವರೆಲ್ಲ ಅಭಿಮಾನಿಗಳಲ್ಲದೆ ಮಹಿಳಾ ಟಿ20 ತಂಡದ ಸದಸ್ಯರಾಗಿದ್ದರು. ಆಸ್ಟ್ರೇಲಿಯಾದ ಪಿಚ್​ಗಳ ಬಗ್ಗೆ ಕೊಹ್ಲಿ ಮತ್ತು ಇತರ ಆಟಗಾರರಿಂದ ಮಾಹಿತಿಯನ್ನೂ ಪಡೆದುಕೊಂಡಿದ್ದರು. ನಂತರ ಆಸ್ಟ್ರೇಲಿಯಾದ ಮಹಿಳಾ ತಂಡವನ್ನು ಬಗ್ಗುಬಡಿದರು

ಅಡಿಲೇಡ್ ಪಿಚ್ ಬಗ್ಗೆ ಕೊಹ್ಲಿ ಟ್ವೀಟ್

ಅಡಿಲೇಡ್ ಪಿಚ್ ಬಗ್ಗೆ ಕೊಹ್ಲಿ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಹೀಗೆ...

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Virat Kohli continued his love affair with the Adelaide Oval as he struck an unbeaten 90 to steer India to a 37-run victory over Australia in the opening Twenty20 International here on Republic Day today (January 26).
Please Wait while comments are loading...