ಬಿಸಿಸಿಐಗೆ ಮತ್ತೆ ಹಿನ್ನಡೆ, ವೀಕ್ಷಕರಾಗಿ ಪಿಳ್ಳೈ ನೇಮಕ

Posted By:
Subscribe to Oneindia Kannada

ನವದೆಹಲಿ, ನವೆಂಬರ್ 22: ನ್ಯಾ. ಲೋಧಾ ಸಮಿತಿಯ ಶಿಫಾರಸುಗಳನ್ನು ಅಳವಡಿಸಿಕೊಳ್ಳಲು ವಿಫಲವಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೇಲೆ ಮತ್ತೆ ಹಿನ್ನಡೆಯಾಗಿದೆ.

ಕೇಂದ್ರ ಗೃಹ ಇಲಾಖೆಯ ನಿವೃತ್ತ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಅವರನ್ನು ಬಿಸಿಸಿಐಗೆ ವೀಕ್ಷಕರನ್ನಾಗಿ (Observer) ನೇಮಕ ಮಾಡಬೇಕು ಎಂದು ಸುಪ್ರೀಂಕೋರ್ಟಿಗೆ ನಿವೃತ್ತ ನ್ಯಾಯಮೂರ್ತಿ ಆರ್‌.ಎಂ. ಲೋಧಾ ಸಮಿತಿ ಶಿಫಾರಸು ಮಾಡಿದೆ.

Lodha Panel to Supreme Court: Disqualify BCCI office bearers

ನ್ಯಾ. ಲೋಧಾ ಸಮಿತಿ ಶಿಫಾರಸು ಸಲ್ಲಿಸಿರುವ ಮೂರನೇ ವರದಿ ಜಾರಿಗೊಂಡರೆ ಬಿಸಿಸಿಐನ ಪ್ರತಿಯೊಂದು ಚಟುವಟಿಕೆಗಳು ವೀಕ್ಷಕರಾದ ಜಿಕೆ ಪಿಳ್ಳೈ ಅವರ ಮಾರ್ಗದರ್ಶನದಲ್ಲೇ ನಡೆಯಬೇಕಾಗುತ್ತದೆ.

70 ವರ್ಷದ ವಯಸ್ಸು ಮೀರಿದವರು, ಸಚಿವರು, ರಾಜಕಾರಣಿಗಳು ಅಥವಾ ಸರ್ಕಾರಿ ಅಧಿಕಾರಿಗಳು, ನೌಕರರು ಬಿಸಿಸಿಐ ಮತ್ತು ರಾಜ್ಯ ಸಂಸ್ಥೆಗಳ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಬಾರದು ಎಂದು ಲೋಧಾ ಸಮಿತಿಯು ಮಾಡಿದ್ದ ಶಿಫಾರಸಿಗೆ ಬಿಸಿಸಿಐ ಆಕ್ಷೇಪ ವ್ಯಕ್ತಪಡಿಸಿತ್ತು.

ಇದಲ್ಲದೆ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಅವರು ಹಾಲಿ ಅಧ್ಯಕ್ಷ ಅನುರಾಗ್ ಠಾಕೂರ್ ಹಾಗೂ ಅಧಿಕಾರಿಗಳ ನಿರ್ದೇಶನವನ್ನು ಪಾಲಿಸುವಂತಿಲ್ಲ ಎಂದು ಶಿಫಾರಸಿನಲ್ಲಿ ಹೇಳಲಾಗಿದೆ. ನ.14ರಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್ ನೇತೃತ್ವದ ನ್ಯಾಯಪೀಠಕ್ಕೆ ಸಮಿತಿ ವರದಿ ಸಲ್ಲಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Justice R M Lodha panel today (November 21) sought the disqualification of all office bearers in the Board of Control for Cricket in India (BCCI).
Please Wait while comments are loading...