ಲೋಧಾ ಎಫೆಕ್ಟ್ : ಸಂಜಯ್ ದೇಸಾಯಿ ಕೆಎಸ್ ಸಿಎ ಹೊಸ ಅಧ್ಯಕ್ಷ

Posted By:
Subscribe to Oneindia Kannada

ಬೆಂಗಳೂರು, ಜನವರಿ 05: ಸುಪ್ರೀಂಕೋರ್ಟ್ ನಿರ್ದೇಶನದಂತೆ ನ್ಯಾ.ಆರ್ ಎಂ ಲೋಧಾ ಸಮಿತಿ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಕರ್ನಾಟಕ ಕ್ರಿಕೆಟ್ ನಿಯಂತ್ರಣ ಮಂಡಳಿ (ಕೆಎಸ್ ಸಿಎ) ಮುಂದಾದ ಬೆನ್ನಲ್ಲೇ ಹೊಸ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳನ್ನು ಗುರುವಾರ ನೇಮಿಸಲಾಗಿದೆ. ಸಂಜಯ್ ದೇಸಾಯಿ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕೆಎಸ್ ಸಿಎ ಅಧ್ಯಕ್ಷ ಪಿಆರ್ ಅಶೋಕ್ ಆನಂದ್, ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಹಾಗೂ ಖಜಾಂಚಿ ದಯಾನಂದ್ ಪೈ ಅವರು ತಮ್ಮ ಹುದ್ದೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಹುದ್ದೆಗೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದರು. [ಲೋಧಾ ಸಮಿತಿ ಎಫೆಕ್ಟ್: ಬ್ರಿಜೇಶ್ ಪಟೇಲ್ ರಾಜೀನಾಮೆ]

 Lodha Panel effect: KSCA gets new president, secretary and treasurer

ಇದಾದ ಬಳಿಕ ಸಭೆ ಸೇರಿದ ಕೆ ಎಸ್ ಸಿಎ ವ್ಯವಸ್ಥಾಪಕ ಸಮಿತಿ, ಸಭೆಯಲ್ಲಿ ಸಂಜಯ್ ದೇಸಾಯಿ ಅವರನ್ನು ಅಧ್ಯಕ್ಷರಾಗಿ, ಸುಧಾಕರ್ ರಾವ್ ಅವರನ್ನು ಕಾರ್ಯದರ್ಶಿಯಾಗಿ, ಶ್ರೀನಿವಾಸ್ ಮೂರ್ತಿ ಅವರನ್ನು ಖಜಾಂಚಿಯಾಗಿ ಆಯ್ಕೆ ಮಾಡಲಾಯಿತು ಎಂದು ಕೆಎಸ್ ಸಿಎಯ ವಕ್ತಾರ ವಿನಯ್ ಮೃತ್ಯುಂಜಯ್ ಅವರು ಗುರುವಾರ ತಿಳಿಸಿದರು.

ಸುಧಾಕರ್ ರಾವ್ ಹಾಗೂ ಸಂಜಯ್ ದೇಸಾಯಿ ಅವರಿಬ್ಬರು ಕೆಎಸ್ ಸಿಎಯ ಆಯ್ಕೆ ಸಮಿತಿಗೆ ರಾಜೀನಾಮೆ ಸಲ್ಲಿಸಿದ್ದು, ರಘುರಾಮ್ ಭಟ್ ಹಾಗೂ ತಿಲಕ್ ನಾಯ್ಡು ಅವರನ್ನು ರಾಜ್ಯ ಹಿರಿಯರ ಆಯ್ಕೆದಾರರಾಗಿ ನೇಮಿಸಲಾಗಿದೆ

ನ್ಯಾ. ಲೋಧಾ ಸಮಿತಿ ಶಿಫಾರಸುಗಳನ್ನು ಅನುಷ್ಠಾನಗಳನ್ನು ವಿಫಲವಾದ ಹಿನ್ನಲೆಯಲ್ಲಿ ಅನುರಾಗ್ ಠಾಕೂರ್ ಹಾಗೂ ಅಜಯ್ ಶಿರ್ಕೆ ಅವರನ್ನು ಅವರ ಸ್ಥಾನದಿಂದ ಕೆಳಗಿಳಿಸಲಾಗಿದ್ದು, ಇಬ್ಬರಿಗೂ ನೋಟಿಸ್ ಜಾರಿಗೊಳಿಸಲಾಗಿದೆ. ಹಾಲಿ ಉಪಾಧ್ಯಕ್ಷ ಸ್ಥಾನದಲ್ಲಿರುವ ಹಿರಿಯರೊಬ್ಬರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂಬ ಸುದ್ದಿ ಕ್ರೀಡಾಪ್ರೇಮಿಗಳಿಗೆ ಹೊಸತೇನಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Karnataka State Cricket Association (KSCA) today (January 5) elected its 3 new office bearers at an Emergent Managing Committee meeting. Sanjay Desai is new President and Sudhakar Rao is new Secretary
Please Wait while comments are loading...