303ರನ್ ಬಾರಿಸಿ, ಕರುಣ್ ಮುರಿದ ದಾಖಲೆಗಳು ಒಂದಾ, ಎರಡಾ!

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 19: ಕರ್ನಾಟಕದ ರಣಜಿ ಆಟಗಾರ ಕರುಣ್ ನಾಯರ್ ಅವರು ತಮ್ಮ ಚೊಚ್ಚಲ ಟೆಸ್ಟ್ ಸರಣಿಯಲ್ಲೇ ಭರ್ಜರಿ ಆಟ ಪ್ರದರ್ಶಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಅಜೇಯ ತ್ರಿಶತಕ ಬಾರಿಸುವ ಮೂಲಕ ಅನೇಕ ದಾಖಲೆಗಳನ್ನು ಧೂಳಿಪಟ ಮಾಡಿದ್ದಾರೆ. ಸೆಹ್ವಾಗ್, ರಾಹುಲ್, ಸಚಿನ್ ರಂಥ ದಿಗ್ಗಜ ಸಾಧನೆ ಮೀರಿ ನಿಂತಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು 25 ವರ್ಷದ ಆಟಗಾರ ಕರುಣ್ ಅವರು ಚೊಚ್ಚಲ ತ್ರಿಶತಕ ಸಿಡಿಸಿದರು. ಅಜೇಯ 303ರನ್ (381 ಎಸೆತಗಳು, 32X4, 4X6) ಸ್ಕೋರ್ ಮಾಡುವ ಮೂಲಕ ಸೆಹ್ವಾಗ್ ಅವರ ಜತೆಗೂಡಿಕೊಂಡಿದ್ದಾರೆ. ಸೆಹ್ವಾಗ್ ಅವರು ಎರಡು ಬಾರಿ ತ್ರಿಶತಕ ಬಾರಿಸಿದ್ದರು. 309 ಹಾಗೂ 319ರನ್ ಗಳಿಸಿದ್ದರು.

5th Test: List of records set by Karun Nair after scoring an epic 303*

2016ರ ಜೂನ್ ತಿಂಗಳಿನಲ್ಲಿ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಡಿದ್ದ ಕರುಣ್ ಅವರು ನವೆಂಬರ್ 26, 2016ರಂದು ಮೊಹಾಲಿಯಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವಾಡಿದ್ದರು. ಮೂರನೇ ಟೆಸ್ಟ್ ಪಂದ್ಯದಲ್ಲೇ, ಮೊದಲ ಟೆಸ್ಟ್ ಸರಣಿಯಲ್ಲೇ, ಅತಿ ಕಡಿಮೆ ಇನ್ನಿಂಗ್ಸ್ ಗಳಲ್ಲೇ ತ್ರಿಶತಕ ಗಳಿಸಿದ ಸಾಧನೆ ಕರುಣ್ ಅವರ ಹೆಸರಿನಲ್ಲಿ ಬರೆಯಲಾಗಿದೆ.

ರಾಜಸ್ಥಾನದ ಜೋಧ್ ಪುರ್ ದಲ್ಲಿ ಜನಿಸಿ, ಕರ್ನಾಟಕದ ಪರ ರಣಜಿ ಆಡುವ ಕರುಣ್ ನಾಯರ್ ಅವರು ಭಾರತ ಪರ ಚೊಚ್ಚಲ ತ್ರಿಶತಕ ಗಳಿಸುವ ಮೂಲಕ ಮುರಿದ ದಾಖಲೆಗಳ ಪಟ್ಟಿ ಹೀಗಿದೆ:
* ವೀರೇಂದ್ರ ಸೆಹ್ವಾಗ್ ನಂತರ ತ್ರಿಶತಕ ಬಾರಿಸಿದ ಭಾರತದ ಎರಡನೇ ಆಟಗಾರ.
* 5 ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಬಂದು ಭಾರತೀಯ ಆಟಗಾರನೊಬ್ಬ ಗಳಿಸಿದ ವೈಯಕ್ತಿಕ ಗರಿಷ್ಠ ಇದಾಗಿದೆ. ಈ ಮುಂಚೆ ಮಹೇಂದ್ರ ಸಿಂಗ್ ಧೋನಿ 224 ಹೊಡೆದಿದ್ದು ದಾಖಲೆಯಾಗಿತ್ತು.
* ಚೊಚ್ಚಲ ಸರಣಿಯಲ್ಲೇ ಗರಿಷ್ಠ ಮೊತ್ತ ಗಳಿಸಿದ್ದ ವಿನೋದ್ ಕಾಂಬ್ಳಿ ಅವರ 224ರನ್ ದಾಖಲೆಯನ್ನು ಮುರಿದ ಕರುಣ್.
* 300 ಪ್ಲಸ್ ರನ್ ಅತಿ ಕಡಿಮೆ ಇನ್ನಿಂಗ್ಸ್ ಗಳಲ್ಲಿ ಗಳಿಸಿ ಆಟಗಾರ. (3 ಇನ್ನಿಂಗ್ಸ್)
* 5ನೇ ಕ್ರಮಾಂಕದಲ್ಲಿ ಆಡಿ 200ಪ್ಲಸ್ ರನ್ ಗಳಿಸಿದ ಭಾರತದ ಐದನೇ ಆಟಗಾರ. ವಿವಿಎಸ್ ಲಕ್ಷ್ಮಣ್ ಹಾಗೂ ಧೋನಿ ಅವರು ಈ ಸಾಧನೆ ಮಾಡಿದ್ದಾರೆ.
* ವೈಯಕ್ತಿಕ ಗರಿಷ್ಠ ಮೊತ್ತ ಸಾಧಿಸಿದ ಭಾರತದ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಹಾಗೂ ಲಕ್ಷ್ಮಣ್ ಅವರ ವೈಯಕ್ತಿಕ ಗರಿಷ್ಠ ಮೊತ್ತದ ದಾಖಲೆ ಮುರಿದ ಕರುಣ್.
* ಪ್ರಥಮ ದರ್ಜೆಯಲ್ಲಿ ಎರಡನೇ ತ್ರಿಶತಕ ಸಿಡಿಸಿದ ಕರುಣ್, ಈ ಮುಂಚೆ ಕಳೆದ ರಣಜಿ ಸೀಸನ್ ನಲ್ಲಿ ತಮಿಳುನಾಡು ವಿರುದ್ಧ ಕರ್ನಾಟಕ ಪರ 329ರನ್ ಚೆಚ್ಚಿದ್ದರು.
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Records tumbled at the MA Chidambaram Stadium here today (December 19) as Karun Nair hit an epic 303 not out (381 balls, 32x4, 4x6) in the 5th Test against England
Please Wait while comments are loading...