ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2016ರಲ್ಲಿ ವಿರಾಟ್ ಕೊಹ್ಲಿ ಸಾಧನೆ, ದಾಖಲೆಗಳು

By Mahesh

ಬೆಂಗಳೂರು, ಮೇ 30: ಐಪಿಎಲ್ 9ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋತಿರಬಹುದು. ಆದರೆ, ಫೈನಲ್ ಹಂತದವರೆಗೂ ತಂಡವನ್ನು ಸಮರ್ಥವಾಗಿ ಮುನ್ನಡೆಸುವ ಮೂಲಕ ವಿರಾಟ್ ಕೊಹ್ಲಿ ಗಮನ ಸೆಳೆದಿದ್ದಾರೆ.

ವೈಯಕ್ತಿಕವಾಗಿ ಹತ್ತು ಹಲವು ಟಿ20 ದಾಖಲೆಗಳನ್ನು ಧ್ವಂಸಗೊಳಿಸಿದ್ದಲ್ಲದೆ 'ರನ್ ಯಂತ್ರ' ಎನಿಸಿಕೊಂಡರು. ಐಪಿಎಲ್ 2016ರಲ್ಲಿ ಕೊಹ್ಲಿ ಮುರಿದ ಪ್ರಮುಖ ದಾಖಲೆಗಳ ಕ್ವಿಕ್ ರೌಂಡಪ್ ಇಲ್ಲಿದೆ...[ಐಪಿಎಲ್ ವೈಯಕ್ತಿಕ ದಾಖಲೆಗಳು 2008-2015]

ಐಪಿಎಲ್ ನಲ್ಲಿ 1,000 ರನ್ ಹೊಡೆಯುವ ನಿರೀಕ್ಷೆ ಮೂಡಿಸಿದ್ದ ವಿರಾಟ್ ಕೊಹ್ಲಿಗೆ 27ರನ್ ಕಡಿಮೆಯಾಯಿತು. ಆದರೆ, ಐಪಿಎಲ್ ನಲ್ಲಿ 4 ಶತಕ, 7 ಅರ್ಧಶತಕ ಹೊಡೆದಿದ್ದು ಅದ್ಭುತ ಸಾಧನೆ. ಅತಿ ಹೆಚ್ಚು ರನ್ ಗಳಿಸಿ ಕಿತ್ತಳೆ ಟೋಪಿ ಧರಿಸಿದ್ದಲ್ಲದೆ, ಟೂರ್ನಿಯ ಮೌಲ್ಯಯುತ ಆಟಗಾರ ಎನಿಸಿಕೊಂಡರು. [ಐಪಿಎಲ್ 9: ಯಾರಿಗೆ ಯಾವ ಪ್ರಶಸ್ತಿ, ಕಿರೀಟ, ಪುರಸ್ಕಾರ]

List of records broken by 'run machine' Virat Kohli during IPL 2016

1. ಒಂದು ಐಪಿಎಲ್ ಸೀಸನ್ ನಲ್ಲಿ ಅತಿಹೆಚ್ಚು ರನ್ ಗಳಿಕೆ: ವಿರಾಟ್ ಕೊಹ್ಲಿ ಈ ಸೀಸನ್ ನಲ್ಲಿ 973ರನ್ ಗಳಿಸಿ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ. []

2. ಟಿ20ಐನಲ್ಲಿ ಅತಿ ಹೆಚ್ಚು ರನ್ (ಒಂದು ಸೀಸನ್): ಐಪಿಎಲ್ 9ರಲ್ಲಿ ಕೊಹ್ಲಿ ಗಳಿಸಿರುವ 973 ಮೊತ್ತವು 16 ಇನ್ನಿಂಗ್ಸ್ ಗಳಲ್ಲಿ ಇಲ್ಲಿ ತನಕ ಯಾವುದೇ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಯಾವೊಬ್ಬ ಆಟಗಾರನು ಗಳಿಸಿಲ್ಲ.

3. ಬ್ರಾಡ್ ಮನ್ ದಾಖಲೆ ಜಸ್ಟ್ ಮಿಸ್ : 1930ರಲ್ಲಿ ಆಷ್ಯಸ್ ಟೆಸ್ಟ್ ಸರಣಿಯಲ್ಲಿ 974ರನ್ ಗಳಿಸಿದ್ದರು. ಈ ಸಾಧನೆ ಸರಿಗಟ್ಟಲು ಕೊಹ್ಲಿ 1 ರನ್ ಕೊರತೆ ಎದುರಾಯಿತು. [ಕಪ್ ಎತ್ತಿದ ವಾರ್ನರ್ ಪಡೆ]

4. ಐಪಿಎಲ್ ನಲ್ಲಿ ಹೆಚ್ಚು ರನ್ ಸ್ಕೋರರ್: ರೈನಾ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದ ಕೊಹ್ಲಿ ಅವರು 4110ರನ್ ಗಳಿಸಿ ಈಗ ಅತಿ ಹೆಚ್ಚು ರನ್ ಸ್ಕೋರರ್ ಆಗಿದ್ದಾರೆ.

5. ಒಂದು ಐಪಿಎಲ್ ನಲ್ಲಿ ಅತಿ ಹೆಚ್ಚು ಶತಕ: ವಿರಾಟ್ ಕೊಹ್ಲಿ ಈ ಐಪಿಎಲ್ ನಲ್ಲಿ ನಾಲ್ಕು ಶತಕ ಬಾರಿಸಿದ್ದು ಹೊಸ ದಾಖಲೆಯಾಗಿದೆ. ಜೊತೆಗೆ ಐಪಿಎಲ್ ತಂಡದ ನಾಯಕರೊಬ್ಬರು ನಾಲ್ಕು ಶತಕ ಬಾರಿಸಿದ್ದು ಹೊಸ ಸಾಧನೆ.

6. ಒಂದು ಓವರ್ ನಲ್ಲಿ ಅತಿ ಹೆಚ್ಚು ರನ್ ಗಳಿಕೆ: ಗುಜರಾತ್ ಲಯನ್ಸ್ ವಿರುದ್ಧ ಶಿವಿಲ್ ಕೌಶಿಕ್ ಓವರ್ ನಲ್ಲಿ 30ರನ್ ಗಳಿಕೆ.



7. ಐಪಿಎಲ್ ಟೂರ್ನಿಯೊಂದರಲ್ಲಿ ಹೆಚ್ಚು ಸಿಕ್ಸ್ ಗಳಿಕೆ: ಕೊಹ್ಲಿ ಅವರು 16 ಪಂದ್ಯಗಳಿಂದ 38 ಸಿಕ್ಸ್ ಸಿಡಿಸಿದ್ದಾರೆ.

8. ಐಪಿಎಲ್ ನಲ್ಲಿ ಉತ್ತಮ ರನ್ ಸರಾಸರಿ : ಕೊಹ್ಲಿ ಅವರು ಟೂರ್ನಮೆಂಟ್ ಅಂತ್ಯಕ್ಕೆ 81.08 ರನ್ ಸರಾಸರಿ ಹೊಂದಿದ್ದರು.

9. 500 ಪ್ಲಸ್ ರನ್ ಹೆಚ್ಚು ಬಾರಿ ಗಳಿಸಿದ ನಾಯಕ: 2013ರಲ್ಲಿ 534ರನ್, 2015ರಲ್ಲಿ 505 ಹಾಗೂ 2016ರಲ್ಲಿ 973ರನ್ ಗಳಿಕೆ.

10.ಟಿ20 ಹೆಚ್ಚು ರನ್ ಗಳಿಕೆ: 6554ರನ್ ಗಳಿಸಿರುವ ಕೊಹ್ಲಿ ಅವರು ಟಿ20 ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ.
(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X