ಸಿಂಹಗಳ ಜತೆ ಸೆಲ್ಫಿ ತೆಗೆದುಕೊಂಡ ಜಡೇಜಾಗೆ ಸಂಕಷ್ಟ

Written By:
Subscribe to Oneindia Kannada

ಅಹಮದಾಬಾದ್,, ಜುಲೈ, 16: ಸಿಂಹಗಳ ಜತೆ ಫೋಟೋ ತೆಗೆಸಿಕೊಂಡು ಬೀಗಿದ್ದ ಕ್ರಿಕೆಟಿಗ ರವೀಂದ್ರ ಜಡೇಜಾ ಇದೀಗ ಸಂಕಷ್ಟ ಎದುರಿಸಬೇಕಾಗಿ ಬಂದಿದೆ. ಸಿಂಹಗಳ ಜತೆ ಸೆಲ್ಫಿ ತೆಗೆದುಕೊಂಡ ಜಡೇಜಾ ಹೇಳಿಕೆಯನ್ನು ಅರಣ್ಯ ಅಧಿಕಾರಿಗಳು ದಾಖಲು ಮಾಡಿಕೊಂಡಿದ್ದು ವರದಿ ನಂತರ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಗಿರ್ ಅರಣ್ಯದಲ್ಲಿನ ಸಫಾರಿಗೆ ತೆರಳಿದ್ದ ಸಂದರ್ಭದಲ್ಲಿ ಜೀಪ್ ನಿಂದ ಕೆಳಗಿಳಿದು ಸಿಂಹಗಳ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದ ಚಿತ್ರ ವಿವಾದಕ್ಕೆ ಕಾರಣವಾಗಿತ್ತು. ನಿಯಮವನ್ನು ಉಲ್ಲಂಘಿಸಿದ್ದ ಜಡೇಜಾ ಜೀಪ್ ನಿಂದ ಇಳಿದು ಫೋಟೊಕ್ಕೆ ಪೋಸ್ ನೀಡಿದ್ದರು.[ಸಿಂಹಗಳ ಜತೆ ಸೆಲ್ಫಿ, ಕ್ರಿಕೆಟರ್ ಜಡೇಜ ವಿರುದ್ಧ ತನಿಖೆ!]

cricket

ಈ ಪೋಟೋಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡಿದ ನಂತರ ಜಡೇಜಾಗೆ ಹೇಳಿಕೆ ನೀಡುವಂತೆ ಕೇಳಿ ಸಮನ್ಸ್ ಜಾರಿ ಮಾಡಲಾಗಿತ್ತು. ಗಿರ್ ರಾಷ್ಟ್ರೀಯ ಉದ್ಯಾನವನ ಸಂರಕ್ಷಿತ ಅರಣ್ಯವಾಗಿದ್ದು ಪ್ರವಾಸಿಗರು ವಾಹನಗಳಿಂದ ಕೆಳಗಿಳಿಯಲು ಅವಕಾಶವಿಲ್ಲ. ಈಗಿದ್ದರು ಜಡೇಜಾ ಅರಣ್ಯದಲ್ಲಿ ವಾಹನದಿಂದ ಕೆಳಕ್ಕಿಳಿದು ಸಿಂಹಗಳ ಜತೆ ಸೆಲ್ಫಿ ತೆಗೆಸಿಕೊಂಡಿದ್ದರು.[ವಿಡಿಯೋ: ರೆಹಮಾನ್ ಮ್ಯೂಸಿಕ್, ವಿರಾಟ್ ಕೊಹ್ಲಿ ಡಾನ್ಸ್!]

ಕಳೆದ ತಿಂಗಳು ಗುಜರಾತ್ ಅರಣ್ಯ ಇಲಾಖೆ ಈ ಬಗ್ಗೆ ತನಿಖೆ ಮಾಡುವಂತೆ ಆದೇಶ ನೀಡಿತ್ತು. ಜಡೇಜಾ ತಮ್ಮ ಹೆಂಡತಿ ರೇವಾ ಜತೆಗೆ ನಿಂತುಕೊಂಡು ಸೆಲ್ಫಿ ತೆಗೆದುಕೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Gujarat Forest department has recorded the statement of cricketer Ravindra Jadeja, who allegedly flouted rules and took selfies with lions at Wildlife Sanctuary at Gir in Junagadh during his visit a month ago, officials said on Friday.
Please Wait while comments are loading...