ಸಿಂಹದ ಜತೆ ಸೆಲ್ಪಿ: ಜಡೇಜಗೆ 20 ಸಾವಿರ ರು ದಂಡ!

Posted By:
Subscribe to Oneindia Kannada

ಅಹಮದಾಬಾದ್, ಆಗಸ್ಟ್ 09: ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಿರುವ ಆಲ್ ರೌಂಡರ್ ರವೀಂದ್ರ ಜಡೇಜ ಅವರು 'ಸೆಲ್ಫಿ ವಿತ್ ಸಿಂಹ' ಕೇಸಿನಿಂದ ಬಚಾವಾಗಿದ್ದಾರೆ. ಗುಜರಾತಿನ ಗಿರ್ ಅಭಯಾರಣ್ಯದಲ್ಲಿ ಸಿಂಹದೊಂದಿಗೆ ಸೆಲ್ಫಿ ತೆಗೆದುಕೊಂಡು ವನ್ಯಜೀವಿ ಕಾಯ್ದೆಯನ್ನು ಉಲ್ಲಂಘಿಸಿದ್ದ ಜಡೇಜ ಅವರಿಗೆ ಕೇವಲ 20 ಸಾವಿರ ರು ದಂಡ ವಿಧಿಸಲಾಗಿದೆ.

ಕ್ರಿಕೆಟರ್ ರವೀಂದ್ರ ಜಡೇಜ ಅವರ ಪರ ಅವರ ಮಾವ ಹರ್​ದೇವ್​ಸಿಂಗ್ ಸೋಲಂಕಿ ಅವರು ಗುಜರಾತ್ ಅರಣ್ಯ ಇಲಾಖೆಗೆ 20 ಸಾವಿರ ರು ದಂಡ ಪಾವತಿಸಿದ್ದಾರೆ.[ಸಿಂಹಗಳ ಜತೆ ಸೆಲ್ಫಿ, ಕ್ರಿಕೆಟರ್ ಜಡೇಜ ವಿರುದ್ಧ ತನಿಖೆ!]

Jadeja

ಆದರೆ, ಈ ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಶೀಘ್ರ ಅರಣ್ಯ ಇಲಾಖೆಗೆ ವರದಿಯನ್ನು ಸಲ್ಲಿಸಲಾಗುವುದು. ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಲಾಗುವುದು. ಪ್ರವಾಸಿಗರನ್ನು ಸಿಂಹಗಳ ಹತ್ತಿರ ಬಿಟ್ಟ ಅರಣ್ಯ ಸಿಬ್ಬಂದಿಯ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಸನ್, ಜುನಾಗಡದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಪಿ.ಸಿಂಗ್ ಹೇಳಿದ್ದಾರೆ.

ಜೂನ್ 17 ರಂದು ಗಿರ್ ಅಭಯಾರಣ್ಯಕ್ಕೆ ಬಂದಿದ್ದ ರವೀಂದ್ರ ಜಡೇಜ ದಂಪತಿಗೆ ಜೀಪ್​ನಿಂದ ಕೆಳಗಿಳಿದು ಸೆಲ್ಫಿ ತೆಗೆದುಕೊಳ್ಳಲು ಕೆಲ ಅರಣ್ಯ ಸಿಬ್ಬಂದಿ ನೆರವಾಗಿದ್ದರು. ಈ ರೀತಿ ತೆಗೆದ ಸೆಲ್ಫಿ ಚಿತ್ರಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿತ್ತು. ಈ ಬಗ್ಗೆ ತಿಳಿದ ಅರಣ್ಯ ಇಲಾಖೆ, ಪ್ರಕರಣ ದಾಖಲಿಸಿಕೊಂಡಿತ್ತು.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian cricketer Ravindra Jadeja was let off by Gujarat forest department after he paid a fine of Rs 20,000 for a taking selfie with lions at Gir Wildlife Sanctuary at Sasan in Junagadh, an act strictly prohibited by law.
Please Wait while comments are loading...