ಕಿರ್ಮಾನಿಗೆ ಸಿಕೆ ನಾಯ್ಡು ಪ್ರಶಸ್ತಿ, ಕೊಹ್ಲಿಗೆ ಉಮ್ರಿಗರ್ ಟ್ರೋಫಿ

Posted By:
Subscribe to Oneindia Kannada

ಮುಂಬೈ,ಜ. 05: ಭಾರತದ ಮಾಜಿ ಕ್ರಿಕೆಟರ್ ಸೈಯದ್ ಕಿರ್ಮಾನಿ ಅವರಿಗೆ 2015ನೇ ಸಾಲಿನ ಕರ್ನಲ್ ಸಿಕೆ ನಾಯ್ಡು ಪ್ರಶಸ್ತಿ ನೀಡಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗೌರವ ಸಲ್ಲಿಸಿದೆ. ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಪಾಲಿ ಉಮ್ರಿಗರ್ ಟ್ರೋಫಿ ಲಭಿಸಿದೆ. ಪ್ರಶಸ್ತಿ ವಿಜೇತ ಕ್ರಿಕೆಟರ್ ಗಳ ಚಿತ್ರಗಳು ಮುಂದಿವೆ.

ಭಾರತದ ಪ್ರಥಮ ಟೆಸ್ಟ್ ನಾಯಕ ಕರ್ನಲ್ ಕೊಟ್ಟಾರಿ ಕನಕೈಯ ನಾಯುಡು ಅವರ ಹೆಸರಿನಲ್ಲಿ ವಾರ್ಷಿಕ ಪ್ರಶಸ್ತಿಯನ್ನು ಬಿಸಿಸಿಐ ನೀಡುತ್ತಾ ಬಂದಿದೆ. 1994ರಿಂದ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 25 ಲಕ್ಷ ಚೆಕ್, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ.

65 ವರ್ಷ ವಯಸ್ಸಿನ ಕರ್ನಾಟಕದ ಆಟಗಾರ ಸೈಯದ್ ಕಿರ್ಮಾನಿ ಅವರು ಭಾರತದ ಪರ 88 ಟೆಸ್ಟ್ ಹಾಗೂ 49 ಏಕದಿನ ಕ್ರಿಕೆಟ್ ಅವರು 1976 ಹಾಗೂ 1986 ರ ಅವಧಿಯಲ್ಲಿ ಆಡಿದ್ದರು. ಆಕ್ಲೆಂಡ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವಾಡಿದರು. 1976ರ ಫೆಬ್ರವರಿ 21ರಂದು ನ್ಯೂಜಿಲೆಂಡ್ ವಿರುದ್ಧವೇ ಮೊದಲ ಏಕದಿನ ಕ್ರಿಕೆಟ್ ಪಂದ್ಯವಾಡಿದ್ದರು. 1983ರಲ್ಲಿ ವಿಶ್ವಕಪ್ ಗೆದ್ದ ಕಪಿಲ್ ಡೆವಿಲ್ಸ್ ಪಡೆಯಲ್ಲಿ ಕಿರ್ಮಾನಿ ಮಹತ್ವದ ಪಾತ್ರ ವಹಿಸಿದ್ದರು.

ಪಾಲಿ ಉಮ್ರಿಗರ್ ಟ್ರೋಫಿ ಜೊತೆ ಕೊಹ್ಲಿ

ಪಾಲಿ ಉಮ್ರಿಗರ್ ಟ್ರೋಫಿ ಜೊತೆ ಕೊಹ್ಲಿ

ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಪಾಲಿ ಉಮ್ರಿಗರ್ಟ್ರೋಫಿ ಲಭಿಸಿದೆ

ಸ್ಪಿನ್ ದಿಗ್ಗಜರ ಜೊತೆ ಆಟವಾಡಿದ ಹೆಮ್ಮೆ ಇದೆ

ಸ್ಪಿನ್ ದಿಗ್ಗಜರ ಜೊತೆ ಆಟವಾಡಿದ ಹೆಮ್ಮೆ ಇದೆ

ಎರಪಳ್ಳಿ ಪ್ರಸನ್ನ, ಬಿಎಸ್ ಚಂದ್ರಶೇಖರ್ ಹಾಗೂ ಬಿಷನ್ ಸಿಂಗ್ ಬೇಡಿ ಅವರ ಕಾಲದಲ್ಲಿ ವಿಕೆಟ್ ಕೀಪಿಂಗ್ ಮಾಡಿದ ಹೆಮ್ಮೆ ಇದೆ ಎಂದು ಸೈಯದ್ ಕಿರ್ಮಾನಿ ಪ್ರತಿಕ್ರಿಯಿಸಿದ್ದಾರೆ.

ಈಗಿನ ಕಾಲದಲ್ಲಿ ಧೋನಿ ಅವರು ಉತ್ತಮ ಕೀಪಿಂಗ್ ಜೊತೆ ಬ್ಯಾಟಿಂಗ್ ನಲ್ಲೂ ಮಿಂಚುತ್ತಿರುವುದು ಒಳ್ಳೆ ವಿಷಯ. ಅವರನ್ನು ಮಾದರಿಯಾಗಿ ಯುವ ಕ್ರಿಕೆಟರ್ಸ್ ನೋಡಬಹುದು ಎಂದಿದ್ದಾರೆ.

ಎಂಎಸ್ ಧೋನಿ ಅವರಿಗೆ ಪ್ರಶಸ್ತಿ

ಎಂಎಸ್ ಧೋನಿ ಅವರಿಗೆ ಪ್ರಶಸ್ತಿ

ಏಕದಿನ ಕ್ರಿಕೆಟ್ ನಾಯಕ ಧೋನಿ ಅವರಿಗೆ ಪ್ರಶಸ್ತಿ ನೀಡಿದ ಅನುರಾಗ್ ಠಾಕೂರ್.

ಶಶಾಂಕ್ ಮನೋಹರ್ ಅವರಿಂದ ಪ್ರಶಸ್ತಿ ಪ್ರದಾನ

ಶಶಾಂಕ್ ಮನೋಹರ್ ಅವರಿಂದ ಪ್ರಶಸ್ತಿ ಪ್ರದಾನ

ಕೊಹ್ಲಿಗೆ ಉಮ್ರಿಗರ್ ಟ್ರೋಫಿ. ಶಶಾಂಕ್ ಮನೋಹರ್ ಅವರಿಂದ ಪ್ರಶಸ್ತಿ ಪ್ರದಾನ

ಕರ್ನಾಟಕದ ರಾಬಿನ್ ಉತ್ತಪ್ಪ ಅವರಿಗೂ ಪ್ರಶಸ್ತಿ

ಕರ್ನಾಟಕದ ರಾಬಿನ್ ಉತ್ತಪ್ಪ ಅವರಿಗೂ ಪ್ರಶಸ್ತಿ

ಕರ್ನಾಟಕ ರಣಜಿ ತಂಡದ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಅವರಿಗೂ ಪ್ರಶಸ್ತಿ

ಕ್ರಿಕೆಟ್ ನನಗೆ ಶಿಕ್ಷಣ ನೀಡಿದೆ ಎಂದ ಕಿರ್ಮಾನಿ

ಕ್ರಿಕೆಟ್ ನನಗೆ ಶಿಕ್ಷಣ ನೀಡಿದೆ ಎಂದ ಕಿರ್ಮಾನಿ ಅವರಿಗೆ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಅವರು ಪ್ರಶಸ್ತಿ ನೀಡಿ ಗೌರವಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟೀಂ ಇಂಡಿಯಾ

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟೀಂ ಇಂಡಿಯಾದ ಪ್ರಮುಖ ಆಟಗಾರರು ಹಾಜರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former stumper Syed Kirmani was bestowed with the prestigious Col. CK Nayudu Lifetime Achievement Award for his contribution to Indian cricket, while Test captain Virat Kohli bagged the Polly Umrigar Trophy for Cricketer of the Year in the BCCI awards night here on Tuesday.
Please Wait while comments are loading...