ಇಮ್ರಾನ್ ಖಾನ್ ಮೂರನೇ ಮದ್ವೆ ಸುದ್ದಿ ಸುಳ್ಳೇ ಸುಳ್ಳು

Posted By:
Subscribe to Oneindia Kannada

ಇಸ್ಲಾಮಾಬಾದ್, ಜುಲೈ 13: ಪಾಕಿಸ್ತಾನದ ಪ್ರಮುಖ ವಿರೋಧ ಪಕ್ಷ ತೆಹ್ರಿಕ್-ಇ-ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಹಾಗೂ ಪಾಕಿಸ್ತಾನದ ಟಿವಿ ನಿರೂಪಕಿ ರೇಹಾಮ್ ಖಾನ್ ಅವರ ದಾಂಪತ್ಯ ಮುರಿದ ಮೇಲೆ ಇಮ್ರಾನ್ ಮತ್ತೆ ಮದ್ವೆಯಾಗಿದ್ದಾರೆ ಎಂಬ ಸುದ್ದಿ ಹಬ್ಬಿ ನಿಮ್ಮ ಕಿವಿಗೂ ಬಿದ್ದಿರಬಹುದು. ಆದರೆ, ಇದೆಲ್ಲವೂ ಸುಳ್ಳು ಸುದ್ದಿ ಎಂದು ಇಮ್ರಾನ್ ಟ್ವೀಟ್ ಮಾಡಿದ್ದಾರೆ.

ರೇಹಾಮ್ ಖಾನ್ ಜತೆ 10 ತಿಂಗಳ ದಾಂಪತ್ಯ ಸುಖ ಕಂಡ ನಂತರ 64 ವರ್ಷ ವಯಸ್ಸಿನ ಇಮ್ರಾನ್ ಅವರು ವಿಚ್ಛೇದನ ಪಡೆದುಕೊಂಡಿದ್ದರು. ಆದರೆ, ಇಮ್ರಾನ್ ಅವರು ಮರ್ಯಾಮ್ ಎಂಬುವವರನ್ನು ಮದುವೆಯಾಗುತ್ತಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿತ್ತು. [ಇಮ್ರಾನ್ ಖಾನ್ 10 ತಿಂಗಳ ದಾಂಪತ್ಯಕ್ಕೆ ಬ್ರೇಕ್]

Reports of my third marriage 'baseless': Former Pakistan cricketer Imran Khan

ಆದರೆ, ಇದೆಲ್ಲವೂ ಸತ್ಯಕ್ಕೆ ದೂರವಾದ ವರದಿ, ನಾನು ಮದುವೆಯಾಗುವುದಿದ್ದರೆ ಎಲ್ಲರಿಗೂ ಹೇಳಿ ಮದುವೆಯಾಗುತ್ತೇನೆ. ಅದರಲ್ಲಿ ಮುಚ್ಚಿಡುವ ವಿಷಯ ಏನಿದೆ ಎಂದು ಪ್ರಶ್ನಿಸಿದ್ದಾರೆ.

ಧಾರ್ಮಿಕ ಗುರು ಬುಶ್ರಾ ಎಂಬುವರ ಪುತ್ರಿ ಮರ್ಯಾಂ ಅವರನ್ನು ಮೂರನೇ ಪತ್ನಿಯಾಗಿ ಸ್ವೀಕರಿಸಿ 'ಕಬೂಲ್ ಹೇ' ಎಂದು ಪಾಕಿಸ್ತಾನ ತೆಹ್ರಿಕ್ ಇ ಇನ್ಸಾಫ್(ಪಿಟಿಐ) ಯ ನಾಯಕ ಇಮ್ರಾನ್ ಖಾನ್ ಅವರು ಮೂರು ಬಾರಿ ಹೇಳಲು ಹೊರಟಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿತ್ತು.

ನವೆಂಬರ್ 1952ರಲ್ಲಿ ಲಾಹೋರ್ ನಲ್ಲಿ ಜನಿಸಿದ ಇಮ್ರಾನ್ ಖಾನ್, ಮೇ 1995ರಲ್ಲಿ ಪ್ಯಾರಿಸ್ ನಲ್ಲಿ ಜೆಮಿನಾ ಗೋಲ್ಡ್ ಸ್ಮಿತ್ ಅವರನ್ನು ಮದುವೆಯಾಗಿದ್ದರು.

ಇಮ್ರಾನ್ ಮತ್ತು ಜೆಮಿನಾ ಅವರಿಗೆ ಸುಲೇಮಾನ್ ಮತ್ತು ಖಾಸಿಂ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಕೌಟುಂಬಿಕ ಭಿನ್ನಾಭಿಪ್ರಾಯದಿಂದ ಇಮ್ರಾನ್ - ಜೆಮಿನಾ 2009ರಲ್ಲಿ ತಲಾಖ್ ಪಡೆದುಕೊಂಡಿದ್ದರು. ಮೊದಲ ಮದುವೆಯಿಂದ ಮೂರು ಮಕ್ಕಳ ತಾಯಿಯಾಗಿರುವ ಬ್ರಿಟಿಷ್ ಮೂಲದ ಪತ್ರಕರ್ತೆ ರೇಹಾಮ್ ಅವರನ್ನು ಮದುವೆಯಾಗಿದ್ದರು.

ಮೂರನೇ ಮದುವೆ ಬಗ್ಗೆ ಪಿಟಿಐ ಪಕ್ಷದ ವಕ್ತಾರರು ಪ್ರತಿಕ್ರಿಯಿಸಿ ಇಮ್ರಾನ್ ಖಾನ್ ಅವರು ಮದುವೆಯಾಗುತ್ತಿಲ್ಲ, ಸದ್ಯಕ್ಕೆ ಇಂಗ್ಲೆಂಡಿನಲ್ಲಿದ್ದಾರೆ. ವಾರಾಂತ್ಯಕ್ಕೆ ಪಾಕಿಸ್ತಾನಕ್ಕೆ ಮರಳಲಿದ್ದಾರೆ ಎಂದಿದ್ದಾರೆ. (ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pakistan's cricketer-turned-politician Imran Khan on Tuesday (July 12) described as "baseless" reports that he had married for a third time.
Please Wait while comments are loading...