ಪಾಕಿಸ್ತಾನ 'ಲಿಟ್ಲ್ ಮಾಸ್ಟರ್' ಕ್ರಿಕೆಟರ್ ತೀವ್ರ ಅಸ್ವಸ್ಥ

Posted By:
Subscribe to Oneindia Kannada

ಕರಾಚಿ, ಆಗಸ್ಟ್ 08: ಟೆಸ್ಟ್ ಕ್ರಿಕೆಟ್ ಇತಿಹಾಸದ ಶ್ರೇಷ್ಠ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರೆನಿಸಿರುವ 'ಲಿಟ್ಲ್ ಮಾಸ್ಟರ್' ಹನೀಫ್ ಮೊಹಮ್ಮದ್ ಅವರು ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರಾಚಿಯ ಅಗಾ ಖಾನ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಹಾಯದಲ್ಲಿದ್ದಾರೆ. ಕಳೆದ ತಿಂಗಳು ಉಸಿರಾಟದ ತೊಂದರೆಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆ ಸೇರಿದ ಹನೀಫ್ ಅವರು ಇನ್ನೂ ಚೇತರಿಕೆ ಕಂಡಿಲ್ಲ ಎಂದು ಹನೀಫ್ ಅವರ ಪುತ್ರ ಕ್ರಿಕೆಟರ್ ಶೋಯಿಬ್ ಮೊಹಮ್ಮದ್ ಹೇಳಿದ್ದಾರೆ. [ವಾಹ್ ! ಕೊಹ್ಲಿ ವಾಹ್, ಯುವಕರ ಪಾಲಿಗೆ ನೀವೇ ಮಾದರಿ]

Legendary Pakistan cricketer Hanif Mohammad battling for life on ventilator

ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿಲ್ಲ. ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹನೀಫ್ ಅವರು 2013ರಿಂದ ಚಿಕಿತ್ಸೆ ಪಡೆಯುತ್ತಿದ್ದರು. 81 ವರ್ಷ ವಯಸ್ಸಿನ ಹನೀಫ್ ಅವರು ಲಂಡನ್ನಿನಲ್ಲಿ ಸರ್ಜರಿಗೆ ಒಳಗಾಗಿದ್ದರು. ಆದರೆ, ಕ್ಯಾನ್ಸರ್ ಮಾರಿ ಉಲ್ಬಣವಾಗಿದೆ.[ಆಂಗ್ಲರ ಮೇಲೆ ಗೆದ್ದ ಪಾಕಿಸ್ತಾನದಿಂದ ವಿಶಿಷ್ಟ ಸಂಭ್ರಮಾಚರಣೆ]

1954-55ರಲ್ಲಿ ಭಾರತ ಕೈಗೊಂಡ ಪಾಕಿಸ್ತಾನದ ಮೊದಲ ಪ್ರವಾಸದಲ್ಲಿ ಹನೀಫ್ ಆಡಿದ್ದರು. 55 ಟೆಸ್ಟ್ ಪಂದ್ಯಗಳನ್ನಾಡಿರುವ ಹನೀಫ್ ಅವರು, 1957-58ರ ಸರಣಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 337ರನ್ ಚೆಚ್ಚಿದ್ದು ಅವಿಸ್ಮರಣೀಯ ಇನ್ನಿಂಗ್ಸ್ ಆಗಿದೆ. ಈ ಇನ್ನಿಂಗ್ಸ್ ಹಲವು ವರ್ಷಗಳ ಕಾಲ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಅತಿ ದೀರ್ಘಾವಧಿ ಟೆಸ್ಟ್ ಇನ್ನಿಂಗ್ಸ್ ಆಗಿತ್ತು. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Legendary Pakistan cricketer Hanif Mohammad battling for life on ventilator Former Pakistan captain Hanif Mohammad is battling for his life after being put on a ventilator at the Aga Khan hospital, here. Legendary Pakistan cricketer Hanif Mohammad battling for life on ventilator
Please Wait while comments are loading...