ಧೋನಿ ಚಿತ್ರದಲ್ಲಿ ನನ್ನ ಬಗ್ಗೆ ಏನು ಇಲ್ಲದಿದ್ದರೆ ಸಾಕು: ಲಕ್ಷ್ಮಿ ರೈ

Posted By:
Subscribe to Oneindia Kannada

ಬೆಂಗಳೂರು, ಸೆ. 28: ಬೆಳಗಾವಿ ಮೂಲದ ಬೆಡಗಿ ಲಕ್ಷ್ಮಿ ರೈ ಅವರು ಕ್ರಿಕೆಟರ್ ಧೋನಿ ಅವರ ಜೀವನ ಆಧಾರಿತ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಧೋನಿ ಜತೆ ಆಪ್ತವಾಗಿದ್ದ ಕಾಲವನ್ನು ಸ್ಮರಿಸಿದ ಲಕ್ಷ್ಮಿ, ಈ ಬಗ್ಗೆ ಅತಿ ರಂಜಿತವಾಗಿ ಚಿತ್ರದಲ್ಲಿ ತೋರಿಸದಿದ್ದರೆ ಸಾಕು ಎಂದಿದ್ದಾರೆ.

ಐಪಿಎಲ್ ನ ಉದ್ಘಾಟನಾ ಸರಣಿ 2008ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಹಾಗೂ ತಂಡದ ಪರ ರಾಯಭಾರಿಯಾಗಿದ್ದ ಲಕ್ಷ್ಮಿ ರೈ ನಡುವೆ ಆಪ್ತತೆ ಬೆಳೆದಿತ್ತು. ಇಬ್ಬರ ನಡುವಿನ್ ಗೆಳೆತನ ಇನ್ನೇನು ಪ್ರೇಮ ಪ್ರಕರಣವಾಗಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುವ ವೇಳೆಗೆ ಇಬ್ಬರು ಈ ಬಗ್ಗೆ ಸ್ಪಷ್ಟನೆ ನೀಡಿ ದೂರಾಗಿದ್ದರು. [ ಎಂಎಸ್ ಧೋನಿ ವಿರುದ್ಧ ಮತ್ತೆ ಕಿಡಿಕಾರಿದ ಗೌತಮ್]

Laxmi Raai on MS Dhoni biopic, It should be about him, not me

ಧೋನಿ ಅವರ ಸಿನಿಮಾದಿಂದ ಅನೇಕರಿಗೆ ಕಿರಿಕಿರಿ ಉಂಟಾಗುವ ಸಾಧ್ಯತೆಯಿದೆ ಎಂಬ ವರದಿಗಳು ಕೇಳಿ ಬರುತ್ತಿವೆ. ಬಯೋ ಪಿಕ್ ಬಗ್ಗೆ ಭಯಪಡುತ್ತಿರುವ ಪೈಕಿ ಲಕ್ಷ್ಮಿ ರೈ ಕೂಡಾ ಇದ್ದಾರೆ. [ಲಕ್ಷ್ಮಿ ರೈ ಬಾಳಿಗೆ ಮಗ್ಗುಲಮುಳ್ಳಾದರೆ ಧೋನಿ?]

ದಕ್ಷಿಣ ಭಾರತ ಸಿನಿಮಾರಂಗದಲ್ಲಿ 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಲಕ್ಷ್ಮಿ ರೈಗೆ ಈ ಚಿತ್ರದಲ್ಲಿ ತನ್ನ ವೃತ್ತಿಗೆ ಮಾರಕವಾಗುವ ಅಂಶಗಳು ಇಲ್ಲ ಎಂಬ ನಂಬಿಕೆ ಇದೆ.

ಧೋನಿಗೆ ಮದುವೆಯಾಗಿ ಮಗು ಇದೆ. ಈಗ ಎಲ್ಲರೂ ನನ್ನನ್ನು ಹಳೆ ಸಂಬಂಧದ ಬಗ್ಗೆ ಕೇಳುತ್ತಿರುವುದೇಕೆ? ಎಂದು ಮರು ಪ್ರಶ್ನೆ ಹಾಕಿದ್ದಾರೆ.

Laxmi Raai on MS Dhoni biopic, It should be about him, not me

M S Dhoni - the Untold Story? ಖಂಡಿತವಾಗಿ ನೋಡುತ್ತೇನೆ. ಆದರೆ, ಸಮಯ ಸಿಕ್ಕಾಗ ಮಾತ್ರ. ಇದು ಮನರಂಜನೆಗಾಗಿ ಮಾತ್ರ ಎಂದಿದ್ದಾರೆ. ಜೂಲಿ 2 ಬಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಲಕ್ಷ್ಮಿ ರೈ ಅವರ ಅಕಿರಾ ಚಿತ್ರದಲ್ಲಿನ ಪಾತ್ರಕ್ಕ ಉತ್ತಮ ಪ್ರತಿಕ್ರಿಯೆ ಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The biopic on Dhoni should be about him, not me said actress Laxmi Raai. Cricketer M S Dhoni's biopic is set to release on September 20 and her relationship with Dhoni is making news.
Please Wait while comments are loading...