ಟೆಸ್ಟ್ ಶ್ರೇಷ್ಠ ಪ್ರದರ್ಶನ: ಲಕ್ಷ್ಮಣ್ ಇನ್ನಿಂಗ್ಸ್ ಗೆ ಸ್ಥಾನ

Posted By:
Subscribe to Oneindia Kannada

ಬೆಂಗಳೂರು, ಜ. 05: ಕಳೆದ 50 ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್ ಗಳಲ್ಲಿ ದಾಖಲಾಗಿರುವ ಶ್ರೇಷ್ಠ ಪ್ರದರ್ಶನಗಳ ಪೈಕಿ ಭಾರತದ ದಿಗ್ಗಜ ವಿವಿಎಸ್ ಲಕ್ಷ್ಮಣ್ ಅವರ 281 ರನ್ ಇನ್ನಿಂಗ್ಸ್ ಕೂಡಾ ಆಯ್ಕೆಯಾಗಿದೆ. ಕೋಲ್ಕತ್ತಾದ ಈಡೆನ್ ಗಾರ್ಡನ್ಸ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಲಕ್ಷ್ಮಣ್ ಬಾರಿಸಿದ ಈ ವೈಯಕ್ತಿಕ ಮೊತ್ತ ಶ್ರೇಷ್ಠ ಪ್ರದರ್ಶನಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಇಎಸ್ ಪಿಎನ್ ಡಿಜಿಟಲ್ ಮ್ಯಾಗಜೀನ್ ನಲ್ಲಿ ಕೇಳಲಾದ ಸಮೀಕ್ಷೆಯಲ್ಲಿ ಆಟಗಾರರು, ಕಾಮೆಂಟೆಟರ್ಸ್, ಪತ್ರಕರ್ತರು ಮತ ಹಾಕಿ ಆಯ್ಕೆ ಮಾಡಿದ ಪಟ್ಟಿಯನ್ನು ಪ್ರಕಟಿಸಲಾಗಿದೆ.

Laxman's 'very very special' 281 rated as best Test innings in 50 years

ಕೋಲ್ಕತ್ತಾ ಟೆಸ್ಟ್ ಪಂದ್ಯದಲ್ಲಿ ಲಕ್ಷ್ಮಣ್ ಅವರು 59 ಹಾಗೂ 281ರನ್ ಗಳಿಸಿದರು. ಭಾರತ 274ರನ್ ಹಿಂದೆ ಬಿದ್ದಿತ್ತು. ಆಸ್ಟ್ರೇಲಿಯಾದ ವಿಜಯದ ನಾಗಾಲೋಟಕ್ಕೆ ಬ್ರೇಕ್ ಹಾಕಲು ಲಕ್ಷ್ಮಣ್ ಅವರ ಇನ್ನಿಂಗ್ಸ್ ಬೇಕಾಯಿತು. ಸೋಲಿನ ಸ್ಥಿತಿಯಿಂದ ಭಾರತ ಗೆಲುವಿನ ಹಾದಿ ಹಿಡಿಯಲು ಲಕ್ಷ್ಮಣ್ ನೆರವಾದರು.

ಲಕ್ಷ್ಮಣ್ ಅವರ ಬ್ಯಾಟಿಂಗ್ ತಡೆಯಲು ಸಾಧ್ಯವಿರಲಿಲ್ಲ. ಅವರ ಕಾಲ ಬುಡಕ್ಕೆ ಚೆಂಡು ಎಸೆಯುತ್ತಿದ್ದೆವು. ಆದರೆ, ಅವರ ಫುಟ್ ವರ್ಕ್ ಸಕತ್ ಆಗಿತ್ತು. ಕವರ್ಸ್ ಹಾಗೂ ಮಿಡ್ ವಿಕೆಟ್ ಭಾಗದಲ್ಲಿ ಬಾರಿಸುತ್ತಿದ್ದ ರೀತಿ ನೋಡುತ್ತಾ ನಿಲ್ಲುವುದಷ್ಟೇ ನಮ್ಮ ಕೆಲಸವಾಗಿತ್ತು ಎಂದು ಆಸ್ಟ್ರೇಲಿಯಾ ಆಟಗಾರ ಶೇನ್ ವಾಟ್ಸನ್ ಅವರು ಪ್ರತಿಕ್ರಿಯಿಸಿದ್ದಾರೆ.

ಲಕ್ಷ್ಮಣ್ ಅವರು ಲೆಗ್ ಸೈಡ್ ಬಾರಿಸುತ್ತಾ ರೀತಿ ಸೂಪರ್ ಆಗಿತ್ತು. ಎರಡು ದಿನಗಳ ಕಾಲ ಅವರ ಆಟ ನೋಡುವುದೇ ನಮ್ಮ ಕೆಲಸವಾಗಿತ್ತು ಎಂದು ನಾಯಕ ರಿಕಿ ಪಾಂಟಿಂಗ್ ಅವರು ಲಕ್ಷ್ಮಣ್ ಆಟವನ್ನು ಸ್ಮರಿಸಿಕೊಂಡಿದ್ದಾರೆ. (ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Indian batting great VVS Laxman's epic knock of 281 against Australia at Eden Gardens here in 2001 has been rated as the greatest Test performance of the last 50 years.
Please Wait while comments are loading...