ಮುಂಬೈ ತಂಡ ಸೇರಿದ ಮಾಲಿಂಗಗೆ ಶೋಕಾಸ್ ನೋಟಿಸ್!

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 17: ಶ್ರೀಲಂಕಾದ ಟಿ20 ತಂಡದ ಮಾಜಿ ನಾಯಕ, ಪ್ರಮುಖ ವೇಗಿ ಲಸಿತ್ ಮಾಲಿಂಗ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿದ್ದಾರೆ. ಆದರೆ, ಸರಿಯಾದ ಅನುಮತಿ ಇಲ್ಲದೆ ಭಾರತಕ್ಕೆ ಹಾರಿದ್ದು ಏಕೆ? ಎಂದು ಪ್ರಶ್ನಿಸಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ನೋಟಿಸ್ ನೀಡಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಗಾಯಾಳುವಾಗಿರುವ ಲಸಿತ್ ಮಾಲಿಂಗ ಅವರು ಮುಂಬೈ ಇಂಡಿಯನ್ಸ್ ಪರ ಯಾವಾಗ ಆಡುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ನಡುವೆ ಗಾಯದಿಂದ ಇನ್ನೂ ಸಂಪೂರ್ಣವಾಗಿ ಗುಣಮುಖರಾಗದೆ, ಅನುಮತಿ ಪತ್ರವನ್ನು ಪಡೆಯದೆ ಭಾರತಕ್ಕೆ ಹೋಗಿರುವುದೇಕೆ? ಎಂದು ಪ್ರಶ್ನಿಸಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ. [ವಿಶ್ವ ಟಿ20ಗೂ ಮುನ್ನ ನಾಯಕತ್ವಕ್ಕೆ ಮಾಲಿಂಗ ಗುಡ್ ಬೈ]

'ಮಾಲಿಂಗ ಅವರು ಐಪಿಎಲ್ ಮೊದಲರ್ಧದಲ್ಲಿ ಆಡುವುದು ಅನುಮಾನವಾಗಿದೆ. ಈಗಾಗಲೇ ತಂಡದ ಜೊತೆ ತಾಲೀಮು ನಡೆಸಿದ್ದಾರೆ ಶೀಘ್ರದಲ್ಲಿ ಕಣಕ್ಕಿಳಿಯಲಿದ್ದಾರೆ' ಎಂದು ಮುಖ್ಯ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದಾರೆ.

Lasith Malinga joins Mumbai Indians squad gets notice from Sri Lanka Cricket (SLC).

ಐಪಿಎಲ್ ನಲ್ಲಿ 98 ಪಂದ್ಯವನ್ನಾಡಿರುವ ಮಾಲಿಂಗ 17.80 ಸರಾಸರಿಯಂತೆ 143 ವಿಕೆಟ್ ಪಡೆದಿದ್ದಾರೆ. ಕಳೆದ ಏಳು ಸೀಸನ್ ನಿಂದ ಮುಂಬೈ ಇಂಡಿಯನ್ಸ್ ಪರ ಆಡುತ್ತಾ ಬಂದಿದ್ದಾರೆ.

ಏಷ್ಯಾಕಪ್ ನಲ್ಲಿ ಯುಎಇ ವಿರುದ್ಧದ ಮೊದಲ ಪಂದ್ಯದಲ್ಲಿ ಲಂಕಾಕ್ಕೆ ಜಯ ತಂದುಕೊಟ್ಟ ಮಾಲಿಂಗ ಅವರು ವಿಶ್ವ ಟಿ20 ನಂತರ ನಿವೃತ್ತಿಯಾಗುವುದಾಗಿ ಘೋಷಿಸಿದ್ದು ನಿಮಗೆಲ್ಲ ತಿಳಿದಿರಬಹುದು

ಮೊಟ್ಟ ಮೊದಲ ಬಾರಿಗೆ ವಿಶ್ವ ಟ್ವೆಂಟಿ20 ಕಪ್ ಗೆಲ್ಲಲು ಕಾರಣರಾಗಿದ್ದ ಲಸಿತ್ ಮಾಲಿಂಗ ಅವರು ಶ್ರೀಲಂಕಾ ತಂಡದ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದಾರೆ. ಮೊಣಕಾಲಿನ ಗಾಯದಿಂದ ಬಳಲುತ್ತಿರುವ ಮಾಲಿಂಗ ಅವರು ಟ್ವೆಂಟಿ 20 ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದರೂ ಐಪಿಎಲ್ ನಲ್ಲಿ ಆಡುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ, ಇದಕ್ಕಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಅನುಮತಿ ಪಡೆಯಬೇಕಿತ್ತು.

ವಿಶ್ವ ಟಿ20 ಇತಿಹಾಸದಲ್ಲೇ ಅತ್ಯಂತ ಕೆಟ್ಟ ಪ್ರದರ್ಶನ ನೀಡಿ ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ವಿರುದ್ಧ ಸೋಲು ಕಂಡು ಟೂರ್ನಿಯಿಂದ ಹೊರ ಬಿದ್ದಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Please Wait while comments are loading...