ಮುರುಳಿ ವಿಜಯ್ ಈಗ ಕಿಂಗ್ಸ್ ಪಂಜಾಬ್ ತಂಡದ ಕ್ಯಾಪ್ಟನ್

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಚಂಡೀಗಢ, ಏಪ್ರಿಲ್ 29 : ನಾಯಕತ್ವ ಬದಲಾವಣೆ ಮಾಡಿ ಸೋಲಿನಿಂದ ಗೆಲುವಿನತ್ತ ಸಾಗಲು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಯೋಜನೆ ಹಾಕಿಕೊಂಡಿದೆ. ಪ್ರೀತಿ ಝಿಂಟಾ ಒಡೆತನದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಲ್ ಸೀಸನ್ 9 ನ ಆರಂಭದಲ್ಲಿ ಸೋತು ಸುಣ್ಣವಾಗುತ್ತಿರುವುದರಿಂದ ಡೇವಿಡ್ ಮಿಲ್ಲರ್ ಅವರ ನಾಯಕತ್ವ ಪಟ್ಟವನ್ನು ಆರಂಭಿಕ ಆಟಗಾರ ಮುರುಳಿ ವಿಜಯ್ ಅವರಿಗೆ ಕಟ್ಟಲು ಸಜ್ಜಾಗಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಕಿಂಗ್ಸ್ ಪಂಜಾಬ್ ತಂಡದಲ್ಲಿ ಮುರುಳಿ ವಿಜಯ್, ಡೇವಿಡ್ ಮಿಲ್ಲರ್, ಗ್ಲೇನ್ ಮ್ಯಾಕ್ಸ್ ವೆಲ್, ಶಾನ್ ಮಾರ್ಷ್, ವೃದ್ಧಿಮಾನ್ ಸಹಾ, ಮನನ್ ಓರಾ ರಂಥವರಿದ್ದು ಬ್ಯಾಟಿಂಗ್ ನಲ್ಲಿ ಬಲಿಷ್ಠವಿದ್ದರೂ ಆಡಿರುವ 6 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಗೆದ್ದು ಐದು ಪಂದ್ಯಗಳಲ್ಲಿ ಸೋತು ಅಂಕ ಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ. [ಐಪಿಎಲ್ ನಿಂದ ಕಿರಿ ಕಿರಿ, ಪ್ರೀತಿಗ್ಯಾಕೆ ಉರಿ ಉರಿ]

KXIP to replace David Miller with Murali Vijay as skipper of the franchise

ಡೇವಿಡ್ ಮಿಲ್ಲರ್ ನಾಯಕತ್ವದಲ್ಲಿ ಐದು ಪಂದ್ಯಗಳಲ್ಲಿ ಸೋಲಿನ ಹೊಣೆ ಹೊತ್ತು ಡೇವಿಡ್ ಮಿಲ್ಲರ್ ನಾಯಕತ್ವದಿಂದ ತೊರೆದು ಮುರುಳಿ ವಿಜಯ್ ಗೆ ಅವರಿಗೆ ತಂಡವನ್ನು ಮುನ್ನಡೆಸಲು ಹೇಳಲಾಗುತ್ತಿದೆ. ದಕ್ಷಿಣ ಆಫ್ರಿಕದ ಸ್ಪೋಟಕ ಬ್ಯಾಟ್ಸ್ ಮನ್ ಆಗಿರುವ ಮಿಲ್ಲರ್ ಸತತವಾಗಿ ಬ್ಯಾಟಿಂಗ್ ವೈಫಲ್ಯ ಕಾಣುತ್ತಿದ್ದಾರೆ. ಇದರಿಂದ ಬೇಸತ್ತು ನಾಯತ್ವವನ್ನು ತ್ಯಜಿಸಲು ಮುಂದಾಗಿದ್ದಾರೆ.[ಪಂಜಾಬ್ ಕಿಂಗ್ಸ್ ಮಣಿಸಿದ ಗುಜರಾತಿನ ಲಯನ್ಸ್]

ಪ್ರೀತಿ ಹುಡುಗರಿಗೆ ಶನಿ ಹೆಗಲ ಮೇಲೆ ಕುಳಿತ್ತಿದೆಯೋ ಏನೋ ಕಳೆದ 2015 ರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ 14 ಪಂದ್ಯಗಳಲ್ಲಿ ಕೇವಲ 4 ರಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಕೊನೆ ಸ್ಥಾನವನ್ನು ಪಡೆದುಕೊಂಡಿತ್ತು. ಅದು 2016 ಐಪಿಲ್ ನಲ್ಲೂ ಮುಂದುವರೆದಿದೆ. ಕ್ವಾಟರ್ ಫೈನಲ್ ಗೆ ತಲುಪಬೇಕಾದರೆ ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ. [ಅಂಕಪಟ್ಟಿ]

ಮುರುಳಿ ವಿಜಯ್ 6 ಪಂದ್ಯಗಳಲ್ಲಿ 142 ರನ್ ಗಳಿಸಿ ಉತ್ತಮ ಫಾರ್ಮ್ ನಲ್ಲಿದ್ದಾರೆ. ಇನ್ನು ನಾಯಕ ಮಿಲ್ಲರ್ ಆಡಿದ 6 ಪಂದ್ಯಗಳಲ್ಲಿ ಕೇವಲ 72 ರನ್ ಗಳಿಸಿ ರನ್ ಗಳಿಸಲು ತಿಣುಕಾಡುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
IPL 2016: Kings XI Punjab captain, hard-hitting South African bat is likely to be replaced by Indian international Murali Vijay.
Please Wait while comments are loading...