ಈ ಬೌಲರ್ ಕಂಜೂಸ್, ರನ್ ನೀಡದೆ 6 ವಿಕೆಟ್ ಗಳಿಸವ್ನೆ

Posted By:
Subscribe to Oneindia Kannada

ಬೆಂಗಳೂರು, ಜನವರಿ 17: ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ(ಕೆಎಸ್ಸಿಎ) ಆಯೋಜನೆಯ ಕ್ಲಬ್ ಕ್ರಿಕೆಟ್ ಟಿ20 ಪಂದ್ಯದಲ್ಲಿ ಹೊಸ ದಾಖಲೆಯನ್ನು ಸ್ಪಿನ್ನರ್ ಸರ್ಫ್ರಾಜ್ ಅಶ್ರಫ್ ಬರೆದಿದ್ದಾರೆ. ನಗರದ ಯಂಗ್ ಪಯೋನೀರ್ ಕ್ರಿಕೆಟ್ ಕ್ಲಬ್ ತಂಡದ ಸ್ಪಿನ್ನರ್ ಅಶ್ರಫ್, ಒಂದೇ ಒಂದು ರನ್ ನೀಡದೆ ಎದುರಾಳಿ ತಂಡದ 6 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.

ಸರ್ಫ್ರಾಜ್ ಅವರು ಟಿ20 ಪಂದ್ಯದಲ್ಲಿ ಮೂರೂ ಓವರ್​ಗಳನ್ನು ಎಸೆದಿದ್ದು, ಮೂರು ಮೇಡನ್ ಆಗಿದ್ದು, ಹ್ಯಾಟ್ರಿಕ್ ಸೇರಿದಂತೆ 6 ವಿಕೆಟ್ ಪಡೆದಿದ್ದಾರೆ. ಈ ಮೂಲಕ ತಂಡದ 207 ರನ್​ಗಳ ಭರ್ಜರಿ ಗೆಲುವಿಗೆ ತಮ್ಮ ಕೊಡುಗೆ ನೀಡಿದರು.

KSCA T20 club tournament : Sarfaraz Ashraf figures of 6 for 0 for Young Pioneer CC

ಕೆಎಸ್​ಸಿಎ ಕ್ಲಬ್ ತಂಡಗಳ ಟಿ20 ಟೂರ್ನಿಯ ಪಂದ್ಯ ಸೋಮವಾರ ನಡೆಯಿತು. ಯಂಗ್ ಪೈನೀರ್ ಸಿಸಿ ತಂಡ 4 ವಿಕೆಟ್​ಗೆ 264 ರನ್ ಪೇರಿಸಿತು. ನಂತರ ಮರ್ಕೆರಾ ಯೂತ್ ಸಿಸಿ ತಂಡಕ್ಕೆ ಸರ್ಫ್ರಾಜ್ ಆಘಾತ ನೀಡಿ, ಸೋಲಿನ ಕಹಿ ಉಣಿಸಿದರು.

14.3 ಓವರ್​ಗಳಲ್ಲಿ ಮರ್ಕೆರಾ ಸಿಸಿ ಕೇವಲ 57ರನ್​ಗಳಿಗೆ ಆಲೌಟ್ ಆಯಿತು. ಬ್ಯಾಟಿಂಗ್​ನಲ್ಲೂ ಸ್ಪೋಟಕ ಪ್ರದರ್ಶನ ನೀಡಿದ್ದ ಸರ್ಫ್ರಾಜ್ 40 ರನ್ ಗಳಿಸಿದ್ದರು. ಸರ್ಫ್ರಾಜ್ ಕಳೆದ ಕೆಪಿಎಲ್​ನಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡದ ಪರ ಆಡಿದ್ದರು.

ಯಂಗ್ ಪೈನೀರ್ ಸಿಸಿ: 20 ಓವರ್​ಗಳಲ್ಲಿ 4 ವಿಕೆಟ್​ಗೆ 264 (ಸರ್ಫ್ರಾಜ್ ಅಶ್ರಫ್ 40, ದೀಪರ್ 74, ಕಿರಣ್ ಎಚ್​ಬಿ 70, ಎನ್.ಸ್ವಾಮಿ 56ಕ್ಕೆ 2), ಮರ್ಕೆರಾ ಯೂತ್ ಸಿಸಿ: 14.3 ಓವರ್​ಗಳಲ್ಲಿ 57 (ಸರ್ಫ್ರಾಜ್ 0ಕ್ಕೆ 6, ಮದನ್ 21ಕ್ಕೆ 3).

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sarfaraz Ashraf recorded incredible figures of 6 for 0 for Young Pioneer CC in a KSCA T20 club tournament fixture, held at the Aditya Global grounds here. Ashraf’s heroics helped his team coast past Mercara Youth CC.
Please Wait while comments are loading...