ರಣಜಿ : ಕರ್ನಾಟಕ ತಂಡದ ಸಂಭಾವ್ಯ ಆಟಗಾರರ ಪಟ್ಟಿ ಪ್ರಕಟ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 25: ಮುಂಬರುವ ರಣಜಿ ಋತುವಿನಲ್ಲಿ ಆಡುವ ಕರ್ನಾಟಕ ತಂಡಕ್ಕೆ ಸಂಭಾವ್ಯ ಆಟಗಾರರನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ (ಕೆಎಸ್ ಸಿಎ) ಪ್ರಕಟಿಸಿದೆ.

ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ತಂಡ ಮತ್ತೊಮ್ಮೆ ರಣಜಿಯಲ್ಲಿ ತಮ್ಮ ಪ್ರಾಬಲ್ಯ ಮೆರೆಯಲು ಸಿದ್ದವಾಗುತ್ತಿದೆ. ಕೆಎಸ್​ಸಿಎ ಆಯ್ಕೆ ಸಮಿತಿ ಪ್ರಕಟಿಸಿದ ಸಂಭಾವ್ಯ 29 ಆಟಗಾರರು ಹಾಗೂ ನಾಲ್ವರು ವಿಶೇಷ ಬೌಲಿಂಗ್ ಪಡೆಗೆ ಜೆ ಅರುಣ್ ಕುಮಾರ್ ಮುಖ್ಯ ಕೋಚ್ ಆಗಿ ಮುಂದುವರೆಯಲಿದ್ದಾರೆ.[ಅಸ್ಸಾಂ ತಂಡಕ್ಕೆ ಕನ್ನಡಿಗ ಸುನಿಲ್ ಜೋಶಿ ಕೋಚ್]

ಸತತವಾಗಿ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಹಾಗೂ ಇರಾನಿ ಕಪ್ ಗೆದ್ದ ದಾಖಲೆ ಹೊಂದಿದ್ದ ವಿನಯ್ ಕುಮಾರ್ ಪಡೆ, ಕಳೆದ ಋತುವಿನಲ್ಲಿ ಉತ್ತಮ ಸಾಧನೆ ತೋರಿರಲಿಲ್ಲ. ಸಂಭಾವ್ಯ ತಂಡ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತನ್ನ ತರಬೇತಿ ನಡೆಸಲಿದೆ.

KSCA announces Probables For Ranji Trophy 2016-17

* ವಿನಯ್ ಕುಮಾರ್ ಆರ್
* ರಾಬಿನ್ ಉತ್ತಪ್ಪ
* ಕೆಎಲ್ ರಾಹುಲ್
* ಮನೀಶ್ ಪಾಂಡೆ
* ಕರುಣ್ ನಾಯರ್
* ಸ್ಟುವರ್ಟ್ ಬಿನ್ನಿ
* ಮಯಾಂಕ್ ಅಗರ್ವಾಲ್
* ಶ್ರೇಯಸ್ ಗೋಪಾಲ್
* ಶಿಶಿರ್ ಭವಾನೆ
* ಸಮರ್ಥ್ ಆರ್
* ಅಭಿಮನ್ಯು ಮಿಥುನ್
* ಅರವಿಂದ್ ಎಸ್
* ಜೆ.ಸುಚಿತ್
* ಸಿಎಂ ಗೌತಮ್ (ವಿಕೆಟ್ ಕೀಪರ್)
* ಅಭಿಶೇಕ್ ರೆಡ್ಡಿ
* ಕೆಸಿ ಕಾರಿಯಪ್ಪ
* ಡೇವಿಡ್ ಮಥಾಯಿಸ್
* ಪವನ್ ದೇಶಪಾಂಡೆ
* ಪ್ರಸಿದ್ಧ್ ಎಂ ಕೃಷ್ಣ
* ರೋನಿತ್ ಮೋರೆ
* ಕುನಾಲ್ ಕಪೂರ್
* ಅರ್ಜುನ್ ಹೊಯ್ಸಳ
* ರೋಹಿತ್ ಗೌಡ
* ಅಬ್ರಾಬ್ ಕಾಜಿ
* ಗೌತಮ್ ಕೆ
* ಶರತ್ ಎಚ್ ಎಸ್
* ಪ್ರವೀಣ್ ದುಬೇ
* ಅನಿರುಧ್ ಜೋಶಿ
* ಮಿರ್ ಕೌನೇನ್ ಅಬ್ಬಾಸ್

ವಿಶೇಷ ಬೌಲರ್ಸ್
* ಶರತ್ ಗೌಡ
* ಭವೇಶ್ ಗುಲೇಚ
* ಪ್ರತೀಕ್ ಜೈನ್
* ಮಿತ್ರಾಕಾಂತ್ ಯಾದವ್

ಕೋಚ್ : ಜೆ ಅರುಣ್ ಕುಮಾರ್
ಫಿಜಿಯೋ: ಜಬಾ ಪ್ರಭು
ತರಬೇತಿ: ಪ್ರಶಾಂತ್ ಪೂಜಾರ್
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Karnataka probables for the upcoming Ranji season 2016-17 due to began their conditioning and training camp at KSCA Stadium, Bengaluru. KSCA named 33 members and J Arun Kumar as head coach.
Please Wait while comments are loading...