ಕೆಪಿಎಲ್: ಮೈಸೂರು ವಾರಿಯರ್ಸ್ ಗೆ ಸೋಲಪ್ಪಿದ ಮಂಗಳೂರು ಯುನೈಟೆಡ್

Posted By:
Subscribe to Oneindia Kannada

ಹುಬ್ಬಳ್ಳಿ, ಸೆಪ್ಟೆಂಬರ್ 18: ಕರ್ನಾಟಕ ಪ್ರೀಮಿಯರ್ ಲೀಗ್ (ಕೆ ಪಿಎಲ್ ) ಐದನೇ ಅವೃತ್ತಿಯ ಎರಡನೇ ಪಂದ್ಯದಲಿಲಿ ಶನಿವಾರದಂದು ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್ ತಂಡವು ಮಂಗಳೂರು ಯುನೈಟೆಡ್ ತಂಡವನ್ನು 7 ವಿಕೆಟ್ ಗಳಿಂದ ಸೋಲಿಸಿತು.

ಟಾಸ್ ಗೆದ್ದುಕೊಂಡು ಬ್ಯಾಟಿಂಗ್ ಗೆ ಇಳಿದ ಮಂಗಳೂರು ಯುನೈಟೆಡ್ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 148 ರನ್ ಗಳಿಸಿತ್ತು. ತಂಡದ ಸಿ.ಎಂ.ನಾಯಕ್ 55 ಎಸೆತಗಳಲ್ಲಿ 64 ರನ್ , ನಿದೀಶ್ ಎಂ. 40 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಗಳೊಂದಿಗೆ 54 ರನ್ ಗಳಿಸಿದ್ದರು.

KPL: Mysuru Warriors beat Mangalore United in the second match

ಕಳೆದ ಬಾರಿ ಚಾಂಪಿಯನ್ ಶಿಪ್ ಗಳಿಸಿದ ಮೈಸೂರು ವಾರಿಯರ್ಸ್ ತಂಡವು ಗೆಲುವಿಗೆ ಬೇಕಾದ 148 ರನ್ ಗಳ ಬೆನ್ನತ್ತಿ 17.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ರಾಜು ಭಟ್ಕಳ್ 29 ಎಸೆತಗಳಲ್ಲಿ 48 ರನ್ ಗಳಿಸಿದರು. ಕೆ.ಗೌತಮ್ 20 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಬಾರಿಸಿ 36 ರನ್ ಗಳಿಸಿದರು. ಆರ್. ಜೋನಾಥನ್ ಔಟಾಗದೇ 21 ರನ್ ಗಳಿಸಿದರು. ರಾಜು ಭಟ್ಕಳ್ ಪಂದ್ಯಶ್ರೇಷ್ಠ ಎನಿಸಿಕೊಂಡರು.

ಸ್ಕೋರ್ ವಿವರ :
ಮಂಗಳೂರು ಯುನೈಟೆಡ್: 20 ಓವರ್ ಗಳಲ್ಲಿ 7 ವಿಕೆಟ್, 148(ಸಿ.ಎಂ.ಗೌತಮ್ 64, ನಿದೀಶ್ ಎಂ.54, ಆದಿತ್ಯ ಸಾಗರ 27ಕ್ಕೆ 2, ವೈಶಾಕ್ ವಿ.31 ಕ್ಕೆ 2)
ಮೈಸೂರು ವಾರಿಯರ್ಸ್ : 17.1 ಓವರ್ ಗಳಲ್ಲಿ 3 ವಿಕೆಟ್, 149 (ಅರ್ಜುನ ಹೊಯ್ಸಳ 22, ರಾಜು ಭಟ್ಕಳ 48, ಕೆ.ಗೌತಮ್ 36, ಆರ್ ಜೋನಾಥನ್ 21 ನಾಟೌಟ್, ಭರತ್ ಎನ್.ಪಿ.20 ಕ್ಕೆ. 1(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru Warriors made light work of their task, as their batsmen romped home with seven wickets in hand, and 17 balls to spare in the second match against Mangalore United at Karbonn KPL powered by Cycle Agarbathies.
Please Wait while comments are loading...