ಕೆಪಿಎಲ್: ಚಾಂಪಿಯನ್ ಮೈಸೂರು ತಂಡಕ್ಕೆ 'ಆಸೀಸ್ ಸ್ಟಾರ್' ಮಾರ್ಗದರ್ಶಿ

Posted By:
Subscribe to Oneindia Kannada

ಮೈಸೂರು, ಸೆ. 04: ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ನ ಚಾಂಪಿಯನ್ ತಂಡ ಮೈಸೂರು ವಾರಿಯರ್ಸ್ ಗೆ ಬಲ ತರಲು ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟರ್ ಬ್ರಾಡ್ ಹಡ್ಡೀನ್ ರನ್ನು ಕರೆಸಿಕೊಳ್ಳಲಾಗಿದೆ. ಆಸೀಸ್ ನ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಬ್ರಾಡ್ ಅವರು ಮೈಸೂರು ತಂಡದ ಮೆಂಟರ್ ಆಗಿ ಈ ಸೀಸನ್ ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಐದನೇ ಸೀಸನ್ ನ ಕೆಪಿಎಲ್ ಟೂರ್ನಿ ಆಯೋಜನೆಯ ಸಿದ್ಧತೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್(ಕೆಎಸ್ ಸಿಎ) ತೊಡಗಿದೆ. ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟರ್ ರೊಬ್ಬರನ್ನು ಕೆಪಿಎಲ್ ತಂಡ ಹೊಂದಲಿದೆ. [ಕೆಪಿಎಲ್: ಸುದೀಪ್ ರಾಕ್ ಸ್ಟಾರ್ ಸೇರಿದ ಎನ್ ಸಿ ಅಯ್ಯಪ್ಪ]

 KPL: Brad Haddin appointed Mysuru Warriors' mentor

38 ವರ್ಷ ವಯಸ್ಸಿನ ಹಡ್ಡೀನ್ ಅವರು 66 ಟೆಸ್ಟ್ ಗಳು, 126 ಏಕದಿನ ಕ್ರಿಕೆಟ್ ಹಾಗೂ 34ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ. 2015ರಲ್ಲಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಸದಸ್ಯರಾಗಿದ್ದರು. ನಂತರ ಅದೇ ವರ್ಷ ಏಕದಿನ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದರು. ಮಾಜಿ ನಾಯಕ ಸ್ಟೀವ್ ವಾ ಜತೆಗೂಡಿ ಸಿಡ್ನಿ ಕ್ರಿಕೆಟ್ ಮೈದಾನ(ಎಸ್ ಸಿಜಿ) ರಾಯಭಾರಿಯಾಗಿದ್ದಾರೆ.[ಸೆಪ್ಟೆಂಬರ್ 16ರಿಂದ ಕೆಪಿಎಲ್ 5ನೇ ಸೀಸನ್ ಶುರು]

ಕೆಪಿಎಲ್ 2016 ಟೂರ್ನಿ ಸೆಪ್ಟೆಂಬರ್ 16 ರಿಂಡ ಅಕ್ಟೋಬರ್ 1ರ ತನಕ ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ದುರಸ್ತಿಯಲ್ಲಿದೆ.

ಬ್ರಾಡ್ ಹಡ್ಡೀನ್ ಅವರು ಮೈಸೂರು ತಂಡ ಸೇರಿರುವ ಬಗ್ಗೆ ಮಾತನಾಡಿದ ತಂಡದ ಮಾಲೀಕ ಅರ್ಜುನ್ ರಂಗ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಅನುಭವ ಹೊಂದಿರುವ ಬ್ರಾಡ್ ಹಡ್ಡೀನ್ ಅವರ ಸೇರ್ಪಡೆಯಿಂದ ಮೈಸೂರು ವಾರಿಯರ್ಸ್ ತಂಡದ ಯುವ ಪ್ರತಿಭೆಗಳಿಗೆ ಪ್ರಯೋಜನವಾಗಲಿದೆ. ಮೈಸೂರಿಗೆ ಆಗಮಿಸಿದ ಬ್ರಾಡ್ ಅವರಿಗೆ ಸ್ವಾಗತ ಎಂದಿದ್ದಾರೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru Warriors have appointed former Australian wicketkeeper-batsman Brad Haddin as the team's mentor for the Karnataka Premier League (KPL) Twenty20 tournament, 2016.
Please Wait while comments are loading...