ಕೆಪಿಎಲ್ ː ಮೈಸೂರು ವಾರಿಯರ್ಸ್ ಸೇರಲು ಇಲ್ಲಿದೆ ಅವಕಾಶ

Posted By:
Subscribe to Oneindia Kannada

ಮೈಸೂರು, ಜುಲೈ 27:ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ನ ಚಾಂಪಿಯನ್ ತಂಡ ಮೈಸೂರು ವಾರಿಯರ್ಸ್ ತಂಡ ತನ್ನ ನಾಲ್ಕನೇ ಪ್ರತಿಭಾ ಶೋಧ ಕಾರ್ಯ ಆರಂಭಿಸಿದೆ.

ಕೆಪಿಎಲ್ 2016: ಯಾವ ತಂಡಕ್ಕೆ ಎಷ್ಟು ಮೊತ್ತ ಬಹುಮಾನ?

ಜುಲೈ 29 ಹಾಗೂ 30ರಂದು ಮೈಸೂರಿನ ಗಂಗೋತ್ರಿ ಗ್ಲೈಡ್ಸ್ ಮೈದಾನದಲ್ಲಿ ಮೈಸೂರು ಹಾಗೂ ಬೆಂಗಳೂರು ವಲಯದ ಪ್ರತಿಭಾ ಶೋಧ ಕಾರ್ಯ ನಡೆಯಲಿದೆ. ಆಸಕ್ತ ಈ ಸಂದರ್ಭದಲ್ಲಿ ಭಾಗವಹಿಸಬಹುದು. ಶನಿವಾರದಂದು ಆಯ್ಕೆಯಾಗುವ ಯುವ ಕ್ರಿಕೆಟರ್ಸ್ ಗಳು ಜುಲೈ 30ರಂದು ಮಂಡ್ಯದ ಪಿ.ಇ.ಎಸ್ ವಿದ್ಯಾಸಂಸ್ಥೆ ಮೈದಾನದಲ್ಲಿ 'ಓಪನ್ ನೆಟ್' ಆಟದಲ್ಲಿ ಪಾಲ್ಗೊಳ್ಳಲಿದ್ದಾರೆ.

KPL 2017: Mysuru Warriors' Talent Hunt on July 29, 30

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ ಸಿಎ) ಯಲ್ಲಿ ನೋಂದಾಯಿತ ವಿವಿಧ ಕ್ಲಬ್ ಗಳಿಗೆ ಸೇರಿರುವ ಯುವ ಕ್ರಿಕೆಟರ್ ಗಳು ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಬಹುದು. ಇಲ್ಲಿ ಆಯ್ಕೆಯಾದವರು ಮುಂದಿನ ಸೀಸನ್ ನ ಕೆಪಿಎಲ್ ನಲ್ಲಿ ಮೈಸೂರು ವಾರಿಯರ್ಸ್ ತಂಡದ ಪರ ಆಡಲಿದ್ದಾರೆ.

ಕೆಪಿಎಲ್ 2016 : ಹುಬ್ಳಿ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಬಳ್ಳಾರಿ

ಬೆಳಗ್ಗೆ 8 ಗಂಟೆಯಿಂದ ಆಯ್ಕೆ ಟ್ರಯಲ್ಸ್ ಆರಂಭವಾಗಲಿದ್ದು, ಕಿಟ್ ಹಾಗು ಕಳೆದ ಎರಡು ವರ್ಷಗಳ ಅಂಕಿ ಅಂಶಗಳ ಸಮೇತ ಆಟಗಾರರು ಮೈದಾನಕ್ಕೆ ಬರಬೇಕು.ಕೆಪಿಎಲ್ 2017 ಪಂದ್ಯಾವಳಿಗಳು ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ಸೆಪ್ಟೆಂಬರ್ 01ರಿಂದ ನಡೆಯಲಿದೆ.

ಮೈಸೂರು ಹೊರತುಪಡಿಸಿ ಬೇರೆ ಜಿಲ್ಲಾ ಕೇಂದ್ರದಿಂದ ಟ್ರಯಲ್ ಗೆ ಬರುವವರಿಗೆ :
ಸ್ಥಳ: ಜಸ್ಟ್ ಕ್ರಿಕೆಟ್ ಅಕಾಡೆಮಿ, ನಂ 1/1ಬಿ, ಸಿಂಗನಾಯಕನಹಳ್ಳಿ, ದೊಡ್ಡಬಳ್ಳಾಪುರ ರಸ್ತೆ, ನಿತ್ಯೋತ್ಸವ ಕಲ್ಯಾಣ ಮಂಟಪ ಪಕ್ಕ, ಯಲಹಂಕ, ಬೆಂಗಳೂರು- 560 064.

ಸಂಪರ್ಕ: Tanu B: +91 8892980117; Mr. Manjesh: +91 9986985910


ಮೈಸೂರು ವಿಭಾಗದವರಿಗೆ:
ಸ್ಥಳ: ಗಂಗ್ರೋತಿ ಗ್ಲೈಡ್ಸ್ ಮೈದಾನ, ಮೈಸೂರು
ಸಂಪರ್ಕ: Madhusudhan: +91 9986024717; Somasekhar: +91 9900545191


ಈ ಎರಡು ಕಡೆ ಆಯ್ಕೆಯಾದರಿಗೆ:
* ಜುಲೈ 30ರಂದು ಭಾನುವಾರ ಬೆಳಗ್ಗೆ 9ರಿಂದ ಓಪನ್ ನೆಟ್ ಗೇಮ್
ಸ್ಥಳ: ಪೆಟ್ ಕ್ರಿಕೆಟ್ ಮೈದಾನ, ಪಿಇಎಸ್ ಕಾಲೇಜ್ ಆವರಣ, ಮಂಡ್ಯ
ಸಂಪರ್ಕ: Madhusudhan: +91 9986024717; Somasekhar: +91 9900545191

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Premier League (KPL) team Mysuru Warriors today (July 27) announced their 4th edition of "Talent Hunt" in Mysuru and Bengaluru on July 29 (Saturday) at SDNR Stadium Gangotri Glades and Just Cricket Academy respectively.
Please Wait while comments are loading...