ಕೆಪಿಎಲ್ : ಮೈಸೂರು ತಂಡಕ್ಕೆ ಕರುಣ್ ನಾಯರ್ ನಾಯಕ

Posted By:
Subscribe to Oneindia Kannada

ಮೈಸೂರು, ಆಗಸ್ಟ್ 11: ಟೀಂ ಇಂಡಿಯಾದ ಪರ ಆಡಿ ತ್ರಿಶತಕ ಬಾರಿಸಿರುವ ಆಟಗಾರ ಕರುಣ್ ನಾಯರ್ ಅವರನ್ನು ಮೈಸೂರ್ ವಾರಿಯರ್ಸ್ ತಂಡದ ನಾಯಕರನ್ನಾಗಿ ನೇಮಿಸಿದಲಾಗಿದೆ.

ಕೆಪಿಎಲ್ 6ː ಹರಾಜಿನ ನಂತರ ಯಾರು ಯಾವ ತಂಡದಲ್ಲಿದ್ದಾರೆ?

ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) 6ನೇ ಆವೃತ್ತಿಯಲ್ಲಿ ಕರುಣ್ ಅವರು ತಂಡವನ್ನು ಮುನ್ನಡೆಸಲಿದ್ದು, ಆಗಸ್ಟ್ 14ರಿಂದಲೇ ತರಬೇತಿ ಶಿಬಿರ ಆರಂಭಗೊಳ್ಳಲಿದೆ. ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 01ರಿಂದ ಕೆಪಿಎಲ್ 2017 ಪಂದ್ಯಾವಳಿಗಳು ಆರಂಭವಾಗಲಿದೆ.

 KPL 2017 : Mysuru Warriors names Karun Nair as the captain

ಭಾರತ ಎ ತಂಡದ ನಾಯಕರಾಗಿರುವ ಕರುಣ್ ನಾಯರ್ ಅವರು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾರೆ. ಐಪಿಎಲ್ ನಲ್ಲಿ ಜಹೀರ್ ಖಾನ್ ಅನುಪಸ್ಥಿತಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಕರುಣ್ ಮುನ್ನಡೆಸಿದ್ದರು.

ಮೈಸೂರಿನ ಎಸ್‍ಜೆಸಿಇ ಕಾಲೇಜು ಮೈದಾನದಲ್ಲಿ ಮೈಸೂರು ವಾರಿಯರ್ಸ್ ತಂಡವು ತನ್ನ ಅಭ್ಯಾಸ ಆರಂಭಿಸಲಿದ್ದು, ಜೆ ಸುಚಿತ್ ಹಾಗೂ ಶ್ರೇಯಸ್ ಗೋಪಾಲ್ ಅವರು ತಂಡವನ್ನು ಸೇರಲಿದ್ದಾರೆ.

ಕೆಪಿಎಲ್ 2016: ಯಾವ ತಂಡಕ್ಕೆ ಎಷ್ಟು ಮೊತ್ತ ಬಹುಮಾನ?

ಇತ್ತೀಚೆಗೆ ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ನಡೆಸಿದ 'ಪ್ರತಿಭಾಶೋಧ' ಕಾರ್ಯಕ್ರಮದಲ್ಲಿ 12 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಕ್ರಿಕೆಟ್ ದಿಗ್ಗಜ ಸೌರವ್ ಗಂಗೂಲಿ ಅವರು ಮೈಸೂರು ವಾರಿಯರ್ಸ್ ತಂಡಕ್ಕೆ ಕಳೆದ ವರ್ಷ ನೀಡಿದ ಸಂದೇಶ:

ಈ ಪೈಕಿ ಇಬ್ಬರಿಗೆ ಈ ಬಾರಿಯ ಕೆಪಿಎಲ್ ನಲ್ಲಿ ಮೈಸೂರು ವಾರಿಯರ್ಸ್ ಪರ ಆಡುವ ಅವಕಾಶ ಸಿಗಲಿದೆ ಎಂದು ಫ್ರಾಂಚೈಸಿ ಮಾಲೀಕ ಅರ್ಜುನ್ ತರಂಗ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru Warriors, a cricket franchise has appointed Karun Nair as the captain of the team for upcoming edition Karnataka Premier League 2017. The team will soon commence their practice session at the SJCE Grounds from August 14.
Please Wait while comments are loading...