ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್ 2017: ಹೊಸ ಹುಮ್ಮಸ್ಸಿನಲ್ಲಿ ಬೆಳಗಾವಿ ಪ್ಯಾಂಥರ್ಸ್ ಕಣಕ್ಕೆ

By Mahesh

ಬೆಳಗಾವಿ/ಮೈಸೂರು, ಸೆ. 04: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ನ ಪ್ರಮುಖ ತಂಡಗಳಲ್ಲಿ ಒಂದಾದ ಬೆಳಗಾವಿ ಪ್ಯಾಂಥರ್ಸ್ ತನ್ನ ಅಧಿಕೃತ ಲಾಂಛನವನ್ನು ಬಿಡುಗಡೆ ಮಾಡುವ ಮೂಲಕ ಅದ್ಧೂರಿ ಚಾಲನೆ ನೀಡಿದೆ.

ಕೆಪಿಎಲ್ 6ː ಹರಾಜಿನ ನಂತರ ಯಾರು ಯಾವ ತಂಡದಲ್ಲಿದ್ದಾರೆ?ಕೆಪಿಎಲ್ 6ː ಹರಾಜಿನ ನಂತರ ಯಾರು ಯಾವ ತಂಡದಲ್ಲಿದ್ದಾರೆ?

ಲಾಂಛನವನ್ನು ಬಿಡುಗಡೆ ಮಾಡಿ ಮಾತನಾಡಿದ ತಂಡದ ಮಾಲೀಕ ಅಲಿ ಅಸ್ಫಕ್ ಥಾರ ಅವರು, ತಂಡಕ್ಕೆ ಅತ್ಯಂತ ಯಶಸ್ವಿ ಮತ್ತು ಅನುಭವಿ ನಾಯಕ ಹಾಗೂ ಅತ್ಯುತ್ತಮ ಆಲ್‍ರೌಂಡರ್ ಆದ ಅರವಿಂದ್ ಶ್ರೀನಾಥ್ ಅವರು ತಂಡದ ನಾಯಕತ್ವ ವಹಿಸಿರುವುದು ನಮ್ಮೆಲ್ಲರಿಗೆ ಸಂತಸ ತಂದಿದೆ ಎಂದರು.

ಬೆಳಗಾವಿಗೆ ಅಟಪಟ್ಟು ಮಾರ್ಗದರ್ಶಿ, ವೇದಾ ರಾಯಭಾರಿಬೆಳಗಾವಿಗೆ ಅಟಪಟ್ಟು ಮಾರ್ಗದರ್ಶಿ, ವೇದಾ ರಾಯಭಾರಿ

ಅರವಿಂದ್ ಅವರ ನಾಯಕತ್ವದಲ್ಲಿ ನಮ್ಮದು ಒಂದು ಸದೃಢವಾದ ತಂಡವಾಗಿದ್ದು, ಎಲ್ಲಾ ಆಟಗಾರರು ಆಟದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವಂತ ಆಟಗಾರರಾಗಿದ್ದಾರೆ. ಇವರಲ್ಲಿ ಬಹುತೇಕ ಆಟಗಾರರು ಐಪಿಎಲ್ ಆಡಿದ ಅನುಭವ ಹೊಂದಿದವರಾಗಿದ್ದು, ನಮ್ಮದು ಫೇವರಿಟ್ ಟೀಂ ಆಗಲಿದೆ ಎಂದು ತಿಳಿಸಿದರು.

KPL 2017 : Belagavi Panthers: The Official Title Launch


ನಮ್ಮ ಬ್ಯಾಟಿಂಗ್ ಕ್ಷೇತ್ರ ಅತ್ಯುತ್ತಮವಾಗಿದ್ದು, ಭಾರತ ತಂಡದಿಂದ ಮರಳಿದ ನಂತರ ಮನೀಶ್ ಪಾಂಡೆ ಅವರು ನಮ್ಮ ತಂಡಕ್ಕೆ ಸೇರ್ಪಡೆಯಾದರೆ ಎದುರಾಳಿ ತಂಡದ ಬೌಲರ್‍ಗಳು ಸಾಕಷ್ಟು ದಂಡ ತೆರಬೇಕಾಗುತ್ತದೆ ಎಂದು ಹೇಳಿದರು.

ಕೆಪಿಎಲ್ 2017: ಕೆ ಗೌತಮ್, ಅಮಿತ್ ಭಾರಿ ಮೊತ್ತಕ್ಕೆ ಮಾರಾಟಕೆಪಿಎಲ್ 2017: ಕೆ ಗೌತಮ್, ಅಮಿತ್ ಭಾರಿ ಮೊತ್ತಕ್ಕೆ ಮಾರಾಟ

ಮೀರ್‍ಕನ್ಹಯ್ಯ ಅಬ್ಬಾಸ್, ಶರತ್ ಬಿಆರ್, ಸುನೀಲ್‍ಕುಮಾರ್ ಜೈನ್, ರಕ್ಷಿತ್ ಮತ್ತು ಶಶೀಂದ್ರ ಅವರಂತಹ ಪ್ರತಿಭಾನ್ವಿತ ಬ್ಯಾಟ್ಸ್‍ಮನ್‍ಗಳನ್ನು ಹೊಂದಿರುವ ತಂಡ ಬ್ಯಾಟಿಂಗ್‍ನಲ್ಲಿ ರನ್‍ಗಳ ಸುರಿಮಳೆಯನ್ನೇ ಕರೆಯಲಿದೆ.

ಅದೇ ರೀತಿ ಆಲ್‍ರೌಂಡರ್‍ಗಳಾದ ಸ್ಟುವರ್ಟ್ ಬಿನ್ನಿ, ಅರವಿಂದ್ ಎಸ್, ಗೌತಮ್ ಕೆ ಮತ್ತು ಸ್ಟಾಲಿನ್ ಹೂವರ್ ಅವರು ತಂಡಕ್ಕೆ ಬಲ ತುಂಬಲಿದ್ದಾರೆ. ಶುಭಾಂಗ್ ಹೆಗ್ಡೆ, ಭಾರದ್ವಾಜ್, ಅವಿನಾಶ್ ಡಿ, ಆನಂದ ದೊಡ್ಡಮನಿ ಮತ್ತು ಕಿಶೋರ್ ಕಾಮತ್ ಅವರಂತಹ ಮೊನಚಾದ ಬೌಲಿಂಗ್ ಮಾಡುವ ಬೌಲರ್‍ಗಳನ್ನು ಹೊಂದಿದ್ದು, ಕೆ.ಎನ್.ಭರತ್ ಅವರು ವಿಕೆಟ್ ಕೀಪರ್ ಆಗಿ ತಂಡಕ್ಕೆ ಆಸರೆಯಾಗಲಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X