ಕೆಪಿಎಲ್: ಸುದೀಪ್ ರಾಕ್ ಸ್ಟಾರ್ ಸೇರಿದ ಎನ್ ಸಿ ಅಯ್ಯಪ್ಪ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 10: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ ಸಿಎ) ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಮಧ್ಯಾಹ್ನ ಆಟಗಾರರ ಹರಾಜು ಪ್ರಕ್ರಿಯೆ ನಡೆಸಿದೆ. ಕಾಮೆಂಟೆಟರ್ ಚಾರುಶರ್ಮ ಅವರು ಹರಾಜು ಪ್ರಕ್ರಿಯೆ ನಡೆಸಿಕೊಡುತ್ತಿದ್ದಾರೆ. ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ನಲ್ಲಿ ಯಾವ ಆಟಗಾರರು ಯಾವ ತಂಡಕ್ಕೆ ಸೇರಿದ್ದಾರೆ ಇಲ್ಲಿದೆ ಅಪ್ಡೇಟ್ಸ್. ಹರಾಜಾದ ಆಟಗಾರರ ಪೂರ್ತಿ ಪಟ್ಟಿಯನ್ನು ಡೌನ್ ಮಾಡಿಕೊಳ್ಳಲು ಲೇಖನದ ಕೊನೆಯಲ್ಲಿ ಲಿಂಕ್ ನೀಡಲಾಗಿದೆ.

ಐದನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್ ) ಟ್ವೆಂಟಿ20 ಟೂರ್ನಮೆಂಟ್ ಸೆಪ್ಟೆಂಬರ್ 16 ರಿಂದ ಅಕ್ಟೋಬರ್ 01 ರ ತನಕ ನಡೆಯಲಿದೆ. ಹುಬ್ಬಳ್ಳಿಯಲ್ಲಿ ಈ ಬಾರಿ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ.

ಸೆಪ್ಟೆಂಬರ್ 22ರಿಂದಲೇ ಮೈಸೂರಿನ ಒಡೆಯರ್ ಮೈದಾನದಲ್ಲಿ ಆರಂಭಿಕ ಹಂತದ ಪಂದ್ಯಗಳು ನಡೆಯಲಿವೆ. [ಸೆಪ್ಟೆಂಬರ್ 16ರಿಂದ ಕೆಪಿಎಲ್ 5ನೇ ಸೀಸನ್ ಶುರು]

Ragini Dwivedi

* ನಟ ಸುದೀಪ್ ಅವರ ರಾಕ್ ಸ್ಟಾರ್ ತಂಡ ಸೇರಿದ 'ಬಿಗ್ ಬಾಸ್' ಖ್ಯಾತಿಯ ವೇಗಿ ಎನ್ ಸಿ ಅಯ್ಯಪ್ಪ(15,000)
* ಬಳ್ಳಾರಿ ಪರ ನಟಿ ರಾಗಿಣಿ ದ್ವಿವೇದಿ ಅವರು ಹರಾಜಿನಲ್ಲಿ ಪಾಲ್ಗೊಂಡರು
* ಸ್ಟಾಲಿನ್ ಹೂವರ್ 1,45,000 ರು ಗಳಿಗೆ ಹುಬ್ಳಿ ಟೈಗರ್ಸ್ ಪಾಲು
* ಆದಿತ್ಯಾ ಸಾಗರ್ ಅವರನ್ನು 10,000 ರು ಗಳಿಗೆ ಖರೀದಿಸಿದ ಮೈಸೂರು

* ಸತೀಶ್ ಭಾರದ್ವಾಜ್ ಅವರು 40,000 ರು ಗಳಿಗೆ ಬೆಳಗಾವಿ ತಂಡಕ್ಕೆ

NC Aiyappa

* ಆನಂದ್ ದೊಡ್ಡಮನಿ ಅವರು 10,000 ರು ಗಳಿಗೆ ಮೈಸೂರು ವಾರಿಯರ್ಸ್ ತಂಡಕ್ಕೆ
* ಅನಿಲ್ ಐಜಿ ಅವರು 30,000 ರು ಗಳಿಗೆ ಬಳ್ಳಾರಿ ಟಸ್ಕರ್ಸ್ ಪಾಲು
* ಕಿಶೋರ್ ಕಾಮತ್ ಅವರು ಮಂಗಳೂರು ತಂಡಕ್ಕೆ 55,000 ರುಗಳಿಗೆ ಮಾರಾಟ
* ಸಿನಾನ್ ಅಬ್ದುಲ್ ಖಾದರ್ ಅವರು ಬಿಜಾಪುರ್ ಬುಲ್ಸ್ ತಂಡಕ್ಕೆ 50,000 ರು ಗಳಿಗೆ ಸೇಲ್
* ಲಿಖಿತ್ ಬನ್ನೂರು 55,000 ರು ಗಳಿಗೆ ಬೆಳಗಾವಿ ತಂಡಕ್ಕೆ ಸೇರ್ಪಡೆ
* ವಿನೂ ಪ್ರಸಾದ್ 65,000 ರು ಗಳಿಗೆ ಹುಬ್ಳಿ ಟೈಗರ್ಸ್ ತಂಡಕ್ಕೆ
* ನವೀನ್ ಬಿ 25,000 ರು ಗಳಿಗೆ ರಾಕ್ ಸ್ಟಾರ್ಸ್ ಪಾಲು
* ಜೋನಾಥನ್ ಆರ್ -ಮೈಸೂರು ವಾರಿಯರ್ಸ್- 3,50,000 ರು
* ಅನಿರುದ್ಧ್ ಜೋಶಿ -ಮೈಸೂರು ವಾರಿಯರ್ಸ್- 2,30,000 ರು

KPL 2016: Players auction LIVE updates Who went where

* ಕೆಎಲ್ ರಾಹುಲ್ (ಇನ್ನೂ ಹರಾಜಾಗಿಲ್ಲ)
* ಡೇವಿಡ್ ಮಥಾಯಿಸ್-ನಮ್ಮ ಶಿವಮೊಗ್ಗ- 2,60,000 ರು
* ಅಕ್ಷಯ್ ಎಸ್ ಎಲ್-ರಾಕ್ ಸ್ಟಾರ್ಸ್- 2,00,000 ರು
* ಭವೇಶ್ ಗುಲೇಚ- ಮಂಗಳೂರು ಯುನೈಟೆಡ್- 1,30,000 ರು
* ಪವನ್ ಕೆಬಿ -ಬಳ್ಳಾರಿ ಟಸ್ಕರ್ಸ್- 50,000 ರು
* ಅಭಿಶೇಕ್ ರೆಡ್ಡಿ- ಹುಬ್ಳಿ ಟೈಗರ್ಸ್ ಗೆ 1,60,000 ರು ಗಳಿಗೆ ಸೇಲ್

* 70 ಸಾವಿರ ರು ಮೊತ್ತಕ್ಕೆ ನಮ್ಮ ಶಿವಮೊಗ್ಗ ತಂಡ ಸೇರಿದ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ
* ಜೊನಾಥನ್ 3,50,000 ರು ಗಳಿಗೆ ಮೈಸೂರು ವಾರಿಯರ್ಸ್ ತಂಡಕ್ಕೆ
* ಶಿಶಿರ್ ಭವಾನೆ 2,50,000 ರು ಗಳಿಗೆ ಮಂಗಳೂರು ಯುನೈಟೆಡ್ ಗೆ
* ಬಿಜಾಪುರ್ ಬುಲ್ಸ್ ತಂಡಕ್ಕೆ 1,50,000 ರು ಗಳಿಗೆ ಸೇರಿದ ಭರತ್ ಚಿಪ್ಳಿ
* ಪೂಲ್ ಎ ನಿಂದ ಸಿಎಂ ಗೌತಮ್ ಅವರು 1,00,000 ರು ಗಳಿಗೆ ಮಂಗಳೂರು ಯುನೈಟೆಡ್ ಸೇರಿದ್ದಾರೆ.

KPL 2016: Players auction LIVE updates Who went where

ಒಟ್ಟು 8 ತಂಡಗಳು ಟ್ರೋಫಿಗಾಗಿ ಕಾದಾಡಲಿದ್ದು, ಆಟಗಾರರ ಹರಾಜು ಪ್ರಕ್ರಿಯೆ ಆಗಸ್ಟ್ 10ರಂದು ನಡೆಯಲಿದೆ. ಪ್ರತಿ ತಂಡಗಳು ನಾಲ್ಕು ಹಳೆ ಆಟಗಾರರನ್ನು ಉಳಿಸಿಕೊಳ್ಳಬಹುದು ಹಾಗೂ ಪ್ರತಿ ತಂಡದಲ್ಲಿ 18 ಮಂದಿ ಆಟಗಾರರಿರಬಹುದು.

ಪೂರ್ತಿ ಪಟ್ಟಿಯನ್ನು ಡೌನ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ:

ತಂಡಗಳು: ಮೈಸೂರು ವಾರಿಯರ್ಸ್, ಮಂಗಳೂರು ಯುನೈಟೆಡ್, ಬೆಳಗಾವಿ ಪ್ಯಾಂಥರ್ಸ್, ಬಿಜಾಪುರ್ ಬುಲ್ಸ್, ಬಳ್ಳಾರಿ ಟಸ್ಕರ್, ಹುಬ್ಬಳ್ಳಿ ಟೈಗರ್ಸ್, ನಮ್ಮ ಶಿವಮೊಗ್ಗ. ರಾಕ್ ಸ್ಟಾರ್ಸ್ (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Players Auction for season 5 Karnataka Premier League 2016 (KPL) held at the M Chinnaswamy Stadium premises today. Catch all the updates LIVE.
Please Wait while comments are loading...