ನಿಶಾಂತ್ ಶತಕ, ರಾಕ್ ಸ್ಟಾರ್ಸ್ ವಿರುದ್ಧ ಮಂಗಳೂರಿಗೆ ಜಯ

Posted By:
Subscribe to Oneindia Kannada

ಹುಬ್ಬಳ್ಳಿ, ಸೆ. 20: ಮಂಗಳೂರು ಯುನೈಟೆಡ್ ನ ಆರಂಭಿಕ ಆಟಗಾರ ನಿಶಾಂತ್ ಶೇಖಾವತ್ ಭರ್ಜರಿ ಶತಕ ನೆರವಿನಿಂದ ರಾಕ್ ಸ್ಟಾರ್ಸ್ ವಿರುದ್ಧ 53ರನ್ ಗಳ ಸುಲಭ ಜಯ ದಾಖಲಿಸಿದೆ. ಕೆಪಿಎಲ್ 5ನೇ ಆವೃತ್ತಿಯ ಪಂದ್ಯದಲ್ಲಿ ಕಿಚ್ಚ ಸುದೀಪ್ ನೇತೃತ್ವದ ರಾಕ್‌ಸ್ಟಾರ‍್ಸ್ ತಂಡದ ಸೋಮವಾರ ಮತ್ತೆ ಸೋಲು ಕಂಡಿದೆ.

ನಿಶಾಂತ್ ಶೇಖಾವತ್ 106 ರನ್ (61 ಎಸೆತ, 8X4, 5X6) ಬಾರಿಸಿ ಕರ್ನಾಟಕ ಪ್ರೀಮಿಯರ್ ಲೀಗ್ ನ ಐದನೇ ಆವೃತ್ತಿಯ ಮೊದಲ ಶತಕ ಹಾಗೂ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು.

KPL 2016: Nishant Shekhawat hits 1st ton as Mangalore thrash Rockstars

ಕೆಪಿಎಲ್ ನ 7ನೇ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಮಂಗಳೂರು ತಂಡಕ್ಕೆ ನಿಶಾಂತ್ ಆಸರೆಯಾದರು. ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್‌ಗೆ 195 ರನ್ ಸ್ಕೋರ್ ಮಾಡಿತು.

ಇದಕ್ಕೆ ಪ್ರತಿಯಾಗಿ ಸುದೀಪ್ ಅವರ ರಾಕ್‌ಸ್ಟಾರ‍್ಸ್ ತಂಡ 7 ವಿಕೆಟ್‌ ಕಳೆದುಕೊಂಡು 142 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಮಂಗಳೂರು ತಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ ಸೋಲು ಅನುಭವಿಸಿತ್ತು. ಇದು ಮೊದಲ ಗೆಲುವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangalore United's opener Nishant Shekhawat became the first batsman to score a century in the fifth edition of Karnataka Premier League (KPL) Twenty20 tournament, as the Rockstars were handed their second successive defeat, at the KSCA stadium in Rajnagar on Monday evening (September 19).
Please Wait while comments are loading...