ಕೆಪಿಎಲ್ : ಮಂಗಳೂರು ವಿರುದ್ಧ ನಮ್ಮ ಶಿವಮೊಗ್ಗಕ್ಕೆ ಗೆಲುವು

Posted By:
Subscribe to Oneindia Kannada

ಹುಬ್ಬಳ್ಳಿ, ಸೆ. 23: ಇಲ್ಲಿನ ರಾಜನಗರದ ಕೆಎಸ್ ಸಿಎ ಸ್ಟೇಡಿಯಂನಲ್ಲಿ ನಡೆದ ಮಂಗಳೂರು ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ನಮ್ಮ ಶಿವಮೊಗ್ಗ ಭರ್ಜರಿಯಾಗಿ ಜಯ ದಾಖಲಿಸಿದೆ.

ಕೆಪಿಎಲ್ 5 ಟಿ20 ಟೂರ್ನಿಯ 13ನೇ ಪಂದ್ಯದಲ್ಲಿ ಮಂಗಳೂರು ಯುನೈಟೆಡ್ ತಂಡವನ್ನು ನಮ್ಮ ಶಿವಮೊಗ್ಗ ತಂಡ 7 ವಿಕೆಟ್‌ಗಳಿಂದ ಸೋಲಿಸಿದೆ. ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಮಂಗಳೂರು ತಂಡ 7 ವಿಕೆಟ್‌ಗೆ 143ರನ್ ಗಳಿಸಿತು.[ಕರ್ನಾಟಕ ಪ್ರೀಮಿಯರ್ ಲೀಗ್]

KPL 2016: Namma Shivamogga beat Mangalore United by 7 wickets

ಇದನ್ನು ಚೇಸ್ ಮಾಡಿದ ನಮ್ಮ ಶಿವಮೊಗ್ಗ ತಂಡ, ಪವನ್ ದೇಶಪಾಂಡೆ ಅಝೇಯ 47ರನ್(30 ಎಸೆತ, 5X4, 2X6) ಹಾಗೂ ನಾಯಕ ಸ್ಟುವರ್ಟ್ ಬಿನ್ನಿ ಅಜೇಯ 31ರನ್(23 ಎಸೆತ, 4‍X4) ನೆರವಿನಿಂದ ಗೆಲುವಿನ ದಡ ಮುಟ್ಟಿತು.[ಕೆಪಿಎಲ್ : ಬೆಳಗಾವಿ ಪ್ಯಾಂಥರ್ಸ್ ವಿರುದ್ಧ ಹುಬ್ಬಳ್ಳಿ ಟೈಗರ್ಸ್ ಗೆ ಜಯ]

ಮಂಗಳೂರು ಯುನೈಟೆಡ್: 20 ಓವರ್ ಗಳಲ್ಲಿ 143/6 (ಸಿಎಂ ಗೌತಮ್ 49, ನಿದೀಶ್ ಎಂ 32, ಕರುಣ್ ನಾಯರ್ 29, ಕೆಪಿ ಅಪ್ಪಣ್ಣ 17ಕ್ಕೆ 2), ನಮ್ಮ ಶಿವಮೊಗ್ಗ: 17.5 ಓವರ್‌ಗಳಲ್ಲಿ 144/3 (ಪವನ್ ದೇಶಪಾಂಡೆ ಅಜೇಯ 47, ಸ್ಟುವರ್ಟ್ ಬಿನ್ನಿ ಅಜೇಯ 31, ಸಾದಿಕ್ ಕಿರ್ಮಾನಿ 26, ರೋನಿತ್ ಮೋರೆ 21/ 1, ಶಿಶಿ ಶೇಖರ್ 24/1) (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Namma Shivamogga register a 7-wicket win in the fifth edition of the Karnataka Premier League (KPL) Twenty20 tournament on Thursday (September 22).
Please Wait while comments are loading...