ಕೆಪಿಎಲ್ ತಂಡದ ಪರಿಚಯ: ಚಾಂಪಿಯನ್ ಬಿಜಾಪುರ್ ಬುಲ್ಸ್

Posted By:
Subscribe to Oneindia Kannada

ಬೆಂಗಳೂರು, ಸೆ. 07: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ನ ಐದನೇ ಆವೃತ್ತಿ ಆಯೋಜನೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ ಸಿಎ)ನಿರತವಾಗಿದೆ. ಹಾಲಿ ಚಾಂಪಿಯನ್ ಬಿಜಾಪುರ್ ಬುಲ್ಸ್ ತಂಡದ ಪರಿಚಯ ಇಲ್ಲಿದೆ.

2009ರಿಂದ ಇಲ್ಲಿ ತನಕದ ಕೆಪಿಎಲ್ ಟೂರ್ನಮೆಂಟ್ ನಲ್ಲಿ ಬಿಜಾಪುರ್ ಬುಲ್ಸ್ ಉತ್ತಮ ಸಾಧನೆ ತೋರುತ್ತಾ ಬಂದಿದೆ. ಎರಡನೇ ಸೀಸನ್ ನಲ್ಲಿ 7ನೇ ಸ್ಥಾನಕ್ಕೆ ಕುಸಿದಿದ್ದು ಬಿಟ್ಟರೆ ಒಟ್ಟಾರೆ ಎಲ್ಲಾ ಸೀಸನ್ ಗಳಲ್ಲಿ ಸೆಮಿಫೈನಲ್ ಹಂತವನ್ನು ಮುಟ್ಟಿದೆ. ಈ ಬಾರಿ ಕೆಪಿಎಲ್ ಕಪ್ ಉಳಿಸಿಕೊಳ್ಳಲು ಹೋರಾಟ ನಡೆಸಲಿದೆ.[ಐದನೇ ಕೆಪಿಎಲ್ ಸಮರ ಸಂಪೂರ್ಣ ವೇಳಾಪಟ್ಟಿ]

ಕಳೆದ ಬಾರಿ ಲೀಗ್ ಹಂತದಲ್ಲಿ ಒಂದು ಪಂದ್ಯದಲ್ಲಿ ಸೋಲು ಕಂಡಿದ್ದು ಬಿಟ್ಟರೆ ಕೆಪಿಎಲ್ ಟ್ರೋಫಿ ಎತ್ತಲು ಯಾವುದೇ ಸಮಸ್ಯೆಯಾಗಲಿಲ್ಲ.[ಮೈಸೂರು ತಂಡಕ್ಕೆ 'ಆಸೀಸ್ ಸ್ಟಾರ್' ಮಾರ್ಗದರ್ಶಿ]

KPL 2016: Know your team - Bijapur Bulls, the defending champions

ಬ್ಯಾಟಿಂಗ್ ಶಕ್ತಿ: ಅನುಭವಿ ಆಟಗಾರ ರಾಬಿನ್ ಉತ್ತಪ್ಪ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಗೆಲ್ಲುವ ಮೂಲಕ ತಂಡಕ್ಕೆ ಆಧಾರವಾಗಿದ್ದರು. ಉತ್ತಪ್ಪ ಅವರಿಗೆ 23 ವರ್ಷ ವಯಸ್ಸಿನ ರವಿಕುಮಾರ್ ಸಮರ್ಥ್ ಅವರು ಸಾಥ್ ನೀಡಲಿದ್ದಾರೆ. ಭರತ್ ಚಿಪ್ಲಿ, ನವೀನ್ ಎಂಜಿ, ಅವಿನಾಶ್ ಕೆಸಿ ಕೂಡಾ ಬಲ ತುಂಬಲಿದ್ದಾರೆ.[ಹುಬ್ಬಳ್ಳಿ ಟೈಗರ್ಸ್ ಮಣಿಸಿದ ಬಿಜಾಪುರ ಬುಲ್ಸ್ ಚಾಂಪಿಯನ್ಸ್]

ಬೌಲಿಂಗ್ ವಿಭಾಗದಲ್ಲಿ ಕೆಸಿ ಕಾರ್ಯಪ್ಪ, ಅಭಿಮನ್ಯು ಮಿಥುನ್ ಮೇಲೆ ಹೆಚ್ಚಿನ ನಂಬಿಕೆ ಇದೆ ಎಂದು ಕೋಚ್ ರಾಜಶೇಖರ್ ಶಾನ್ಬಾಳ್ ಹೇಳಿದ್ದಾರೆ.[ಕೆಪಿಎಲ್ 2016: ಯಾವ ತಂಡದಲ್ಲಿ ಯಾವ ಆಟಗಾರರಿದ್ದಾರೆ?]

ತಂಡ ಇಂತಿದೆ:

* ರಾಬಿನ್ ಉತ್ತಪ್ಪ (ನಾಯಕ)

* ಅಭಿಮನ್ಯು ಮಿಥುನ್
* ಆರ್ ಸಮರ್ಥ್
* ಕೆಸಿ ಕಾರ್ಯಪ್ಪ
* ಸಿನಾನ್ ಅಬ್ದುಲ್ ಖಾದರ್
* ನವೀನ್ ಎಂಜಿ

* ಅರ್ಷ್ ದೀಪ್ ಸಿಂಗ್ ಬ್ರಾರ್

* ಕಿರಣ್ ಎಎಂ
* ಕೆಸಿ ಅವಿನಾಶ್
* ಸಚಿನ್ ಗಂಕಲ್

* ಸೂರಜ್ ಸಂಪತ್
* ಪೃಥ್ವಿ ಶೇಖಾವತ್
* ಝರೂರ್ ಫರೂಕಿ
* ಅಮರನಾಥ್ ಅಕ್ಕಿ
* ಮನೋಜ್ ಆಚಾರ್ಯ

* ಪ್ರವೀರ ವೆಂಕಟೇಶ್ ಮೂರ್ತಿ
* ಭರತ್ ಚಿಪ್ಲಿ

* ಫರ್ಹಾನ್ ಮಾಗಿ

* ಮನೋಹರ್ ಚಾವಣ್

* ಮನೋಜ್ ಭಂಡಾಗೆ

ತಂಡದ ಬೆಂಬಲಿತ ಸಿಬ್ಬಂದಿ
ಮಾಲೀಕರು: ಕಿರಣ್ ಕಟ್ಟಿಮನಿ
* ಟೀಂ ಮ್ಯಾನೇಜರ್" ಸುಧೀನೆ ಶಿಂಧೆ
* ಮುಖ್ಯ ಕೋಚ್ : ರಾಜಶೇಖರ್ ಶಾನ್ಬಲ್

* ಸಹಾಯಕ ಕೋಚ್: ಜಯಂತ್ ಗೌಡ
* ಸಿಇಒ: ನಾಗೇಂದ್ರ ಪ್ರಸಾದ್

* ಲಾಜಿಸ್ಟಿಕ್ಸ್ ಮ್ಯಾನೇಜರ್: ವಿಜಯ್ ಕುಮಾರ್ ಸಿ
* ಫಿಜಿಯೋ: ಮಂಜುನಾಥ್

* ತರಬೇತುದಾರ: ರಾಹುಲ್ ಭಟ್ಕಳ
* ಮೆಂಟರ್ : ಶ್ರೀಕಾಂತ್

ಕಾರ್ಬನ್ ಕೆಪಿಎಲ್ 2016ರ ಎಲ್ಲಾ ಪಂದ್ಯಗಳು ಸೋನಿ ಸಿಕ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿವೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Having been in the Karnataka Premier League (KPL) fray since its inception in the year 2009, the Bijapur Bulls have been one of the consistent teams in the tournament. Barring a 7th place finish in the second season, the Bulls have qualified for the semi-finals on all other occasions. This time around, the team will kick-start the 2016 edition of the league as the defending champions.
Please Wait while comments are loading...