ಕೆಪಿಎಲ್ : ಬೆಳಗಾವಿ ಪ್ಯಾಂಥರ್ಸ್ ವಿರುದ್ಧ ಹುಬ್ಬಳ್ಳಿ ಟೈಗರ್ಸ್ ಗೆ ಜಯ

Posted By:
Subscribe to Oneindia Kannada

ಹುಬ್ಬಳ್ಳಿ, ಸೆ. 22: ಇಲ್ಲಿನ ರಾಜನಗರದಲ್ಲಿ ನಡೆಯುತ್ತಿರುವ ಕೆಪಿಎಲ್ 5ನೇ ಆವೃತ್ತಿಯ ಗುರುವಾರದ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ವಿರುದ್ಧ ಹುಬ್ಬಳ್ಳಿ ಟೈಗರ್ಸ್ ತಂಡವು 4 ವಿಕೆಟ್ ಗಳ ರೋಚಕ ಜಯ ಸಾಧಿಸಿದೆ.

ಮಳೆಯ ಕಾರಣದಿಂದ ಅರ್ಧ ಗಂಟೆ ತಡವಾಗಿ ಆರಂಭವಾದ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು.

20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 77 ರನ್ ಗಳಿಸಿದ ಬೆಳಗಾವಿ ಪ್ಯಾಂಥರ್ಸ್ ತಂಡದ ಗುರಿ ಬೆನ್ನತ್ತಿದ ಹುಬ್ಬಳ್ಳಿ ಟೈಗರ್ಸ್ ತಂಡವು 19.5 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 179 ರನ್ ಗಳಿಸಿ ಗೆಲುವಿನ ನಗೆ ಬೀರಿತು.[ಕರ್ನಾಟಕ ಪ್ರೀಮಿಯರ್ ಲೀಗ್]

KPL 2016: Hubli Tigers edge Belagavi Panthers in last-over thriller

ಬೆಳಗಾವಿ ಪ್ಯಾಂಥರ್ಸ್ ಪರ ನಾಯಕ ವಿನಯ್ ಬೌಲಿಂಗ್ ನಲ್ಲಿ ಮಿಂಚಲಿಲ್ಲ. ಆದರೆ, ನಾಯಕ ವಿನಯ್ ಅವರು ಬ್ಯಾಟಿಂಗ್ ನಲ್ಲಿ ಮಿಂಚಿ 70ರನ್ ಗಳಿಸಿದರು. ಮಾಯಾಂಕ್ ಆಗರವಾಲ್ 42ರನ್ ಗಳಿಸಿದರೆ, ಕೆ ಅಬ್ಬಾಸ್ 40ರನ್ ಹೊಡೆದು ತಂಡದ ಮೊತ್ತ 177/5 ಸ್ಕೋರ್ ಮಾಡಿತು.

ಹುಬ್ಬಳ್ಳಿ ಟೈಗರ್ಸ್ 19.5 ಓವರ್ಸ್ ಗಳಲ್ಲಿ 179/6 ಸ್ಕೋರ್ ಮಾಡಿ 4 ವಿಕೆಟ್ ಗಳಿಂದ ಜಯ ಗಳಿಸಿತು. ಹುಬ್ಳಿ ಪರ ದಿಕ್ಷಾಂಶು ನೇಗಿ ಅಜೇಯ 57. ಮೊಹಮ್ಮದ್ ತಾಹ 43 ರನ್ ಗಳಿಸಿದರೆ ಬೆಳಗಾವಿ ಪರ ಪ್ರವೀಣ್ ದುಬೇ 3/24 ವಿಕೆಟ್ ಪಡೆದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
n a pulsating finish that went down to the wire, Hubli Tigers snatched a brilliant 4-wicket win over Belagavi Panthers in the Karnataka Premier League (KPL) Twenty20 tournament at the picturesque KSCA Stadium in Rajnagar on Thursday evening (September 22).
Please Wait while comments are loading...