ಹುಬ್ಬಳ್ಳಿಯಲ್ಲಿ ಕೆಪಿಎಲ್ ಹಬ್ಬದ ಸಂಭ್ರಮ

By: ಶಂಭು, ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ, ಸೆ. 20 : ಕಳೆದ ನಾಲ್ಕು ದಿನಗಳಿಂದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ 5ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಯಶಸ್ವಿಯತ್ತ ಸಾಗುತ್ತಿದೆ. [ಹುಬ್ಬಳ್ಳಿಯಲ್ಲಿ ಕೆಪಿಎಲ್-5 ಕ್ರಿಕೆಟ್ ಹಬ್ಬಕ್ಕೆ ವರ್ಣರಂಜಿತ ಚಾಲನೆ!]

ರಾಜನಗರದ ಕೆಎಸ್ ಸಿಎ ಮೈದಾನದಲ್ಲಿ ನಡೆಯುತ್ತಿರುವ ಐದನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಉತ್ತಮ ಪ್ರತಿಕ್ರೀಯೇ ವ್ಯಕ್ತವಾಗಿದ್ದು. ಪಂದ್ಯಗಳನ್ನು ವೀಕ್ಷಿಸಲು ಮೈದಾನದತ್ತ ಜನಸಾಗರ ಹರಿದು ಬರುತ್ತಿದೆ. [ಕೆಪಿಎಲ್ 2016: ಕಿಚ್ಚ ಸುದೀಪ್ ನೇತೃತ್ವದ ರಾಕ್ ಸ್ಟಾರ್ ತಂಡ ಪ್ರಕಟ]

ಶಾಲೆ ಐಡಿ ಕಾರ್ಡ್ ನೋಡಿ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು. ವಿದ್ಯಾರ್ಥಿಗಳು ಪಂದ್ಯಗಳನ್ನು ವೀಕ್ಷಿಸಲು ಮೈದಾನದತ್ತ ಹೆಜ್ಜೆ ಹಾಕುತ್ತಿದ್ದಾರೆ. ಡ್ರಮ್ಮರ್ ದೇವರ ಅವರ ತಾಳಕ್ಕೆ ತಕ್ಕಂತೆ ಮಕ್ಕಳು ಕುಣಿದು ಕುಪ್ಪಳಿಸುತ್ತಿದ್ದಾರೆ.

Sudeep

ಆಟಗಾರರ ಬೌಂಡರಿ, ಸಿಕ್ಸರ್ ಗೆ ಚೀಯರ್ ಗರ್ಲ್ಸ್ ಮಾಡುವ ನೃತ್ಯಕ್ಕೆ ಮಕ್ಕಳೂ ಸಾಥ್ ನೀಡಿ ಕ್ರಿಕೆಟ್ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ಖ್ಯಾತ ಗಾಯಕಿ ಸಿಂಚನಾ ದೀಕ್ಷಿತ್ ಅವರ ಗಾಯನಕ್ಕೆ ಶಾಲಾ ಮಕ್ಕಳ ಖುಷಿಗೆ ಪಾರವೇ ಇಲ್ಲದಂತಾಗಿದೆ.

ರಾಕ್ ಸ್ಟಾರ್ ತಂಡದ ನಾಯಕ ಮತ್ತು ನಟ ಕಿಚ್ಚ ಸುದೀಪ್ ಇಡೀ ಕೆಪಿಎಲ್ ಗೆ ಆಕರ್ಷಣೆಯವಾಗಿದ್ದು. ಸುದೀಪ ಅವರನ್ನು ನೋಡಲು ಹುಬ್ಬಳ್ಳಿ ಸುತ್ತಮುತ್ತಲಿನಿಂದ ಅವರ ಅಭಿಮಾನಿಗಳು ಆಗಮಿಸುತ್ತಿದ್ದಾರೆ. [ಕೆಪಿಎಲ್ : ಟೈಗರ್ಸ್ ಮೇಲೆ ಬುಲ್ಸ್ ಸವಾರಿ, ಉತ್ತಪ್ಪ ಪಡೆ ಜಯಭೇರಿ!]

ಕಾವೇರಿ ಗಲಾಟೆಯ ಹಿನ್ನೆಲೆಯಲ್ಲಿ ಮೈಸೂರಿನಿಂದ ಹುಬ್ಬಳ್ಳಿಗೆ ಕೆಪಿಎಲ್ ಪಂದ್ಯಗಳು ಶಿಪ್ಟ್ ಆಗಿದ್ದು ನಗರದ ಕ್ರೀಡಾಭಿಮಾನಿಗಳಿಗೆ ಸಂತಸ ತಂದಿದೆ. ಹೊನಲು ಬೆಳಕಿನ ಪಂದ್ಯಗಳಿಗೂ ಪ್ರೇಕ್ಷಕರ ಸಂಭ್ರಮ, ಕೂಗಾಟ ಮುಗಿಲು ಮುಟ್ಟಿದೆ. ಮುಂದಿನ ಸೋಮವಾರದವರೆಗೂ ಹುಬ್ಬಳ್ಳಿಯಲ್ಲಿ ಪಂದ್ಯಗಳು ನಡೆಯಲಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hubballi turned into festive mood with commence of Karnataka Priemer League(KPL) in Rajanagar KSA stadium. Fans throng into stadium to get a glimpse of their stars.
Please Wait while comments are loading...