ಹುಬ್ಬಳ್ಳಿಯಲ್ಲಿ ಕೆಪಿಎಲ್-5 ಕ್ರಿಕೆಟ್ ಹಬ್ಬಕ್ಕೆ ವರ್ಣರಂಜಿತ ಚಾಲನೆ!

By: ಶಂಭು ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ, ಸೆಪ್ಟೆಂಬರ್, 17 : ಕರ್ನಾಟಕ ಪ್ರೀಮಿಯರ್ ಲೀಗ್ 5ನೇ ಆವೃತ್ತಿಗೆ ಕ್ರಿಕೆಟ್ ಟೂರ್ನಿಗೆಶನಿವಾರಸಂಜೆ ವರ್ಣರಂಜಿತವಾಗಿ ಚಾಲನೆ ಸಿಗಲಿದೆ. ಮೊದಲ ದಿನ ಮೂರು ಪಂದ್ಯಗಳು ನಡೆಯಲಿದ್ದು. ಶಿವಮೊಗ್ಗ ಹಾಗೂ ಹುಬ್ಬಳ್ಳಿ ನಡುವೆ ಮೊದಲ ಪಂದ್ಯ ಆರಂಭವಾಗಲಿದೆ. [ಐದನೇ ಕೆಪಿಎಲ್ ಸಮರ ಸಂಪೂರ್ಣ ವೇಳಾಪಟ್ಟಿ]

ಇಂದು ಸಂಜೆ 5 ಕ್ಕೆ ರಾಜನಗರದ ಕೆಎಸಸಿಎ ಕ್ರಿಕೆಟ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಕೆಪಿಎಲ್ ಪಂದ್ಯಗಳನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ಡೆನಿಸನ್ ಹೊಟೇಲ್ ನಲ್ಲಿ ನಡೆದ ಟ್ರೋಫಿ ಅನಾವರಣ ಸಮಾರಂಭದಲ್ಲಿ ಕೆಎಸ್ ಸಿಎ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಟ್ರೋಫಿ ಅನಾವರಣಗೊಳಿಸಿ ಮಾತನಾಡಿದರು. [ಕಾವೇರಿ ಗಲಭೆ: ಕೆಪಿಎಲ್ ಪಂದ್ಯಗಳ ವೇಳಾಪಟ್ಟಿ ಬದಲು]

'ಗ್ರಾಮೀಣ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಪಿಎಲ್ ಆರಂಭಿಸಲಾಗಿದ್ದು, ಇದು ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ ಹೆಮ್ಮೆಯ ಸಾಧನೆ' ಎಂದರು. ಮೊದಲ ದಿನವೇ ಮೂರು ಪಂದ್ಯಗಳನ್ನು ಆಯೋಜಿಸಲಾಗಿದೆ. ಮೊದಲ ಪಂದ್ಯ ಹುಬ್ಬಳ್ಳಿ ಮತ್ತು ಶಿವಮೊಗ್ಗ ತಂಡದ ನಡುವೆ ಆರಂಭವಾಗಲಿದೆ. [ಕೆಪಿಎಲ್ 2016: ಕಿಚ್ಚ ಸುದೀಪ್ ನೇತೃತ್ವದ ರಾಕ್ ಸ್ಟಾರ್ ತಂಡ ಪ್ರಕಟ]

ತಂಡದ ನಾಯರಿಂದ ರ್ಯಾಂಪ್ ವಾಕ್

ತಂಡದ ನಾಯರಿಂದ ರ್ಯಾಂಪ್ ವಾಕ್

ಟ್ರೋಫಿ ಅನಾವರಣಕ್ಕೆ ಮುನ್ನ 8 ತಂಡಗಳ ನಾಯಕರು ಯುವತಿಯರೊಂದಿಗೆ ರ್ಯಾಂಪ್ ವಾಕ್ ಮಾಡಿದರು. ತಂಡದ ಕ್ಯಾಪ್ಟನ್ಸ್ ತಮ್ಮ ತಂಡದ ಜರ್ಸಿನೊಂದಿಗೆ ರ್ಯಾಂಪ್ ನಲ್ಲಿ ಹೆಜ್ಜೆ ಹಾಕಿ ಟ್ರೋಫಿ ಗೆಲ್ಲುವ ವಿಶ್ವಾಸ ತೋರಿಸಿದರು.

ಬ್ರಜೇಶ್ ಪಟೇಲ್ ಅವರಿಂದ ಟ್ರೋಫಿ ಅನಾವರಣ

ಬ್ರಜೇಶ್ ಪಟೇಲ್ ಅವರಿಂದ ಟ್ರೋಫಿ ಅನಾವರಣ

ಹುಬ್ಬಳ್ಳಿಯಲ್ಲಿರುವ ಡೆನಿಸನ್ ಹೊಟೇಲ್ ನಲ್ಲಿ ನಡೆದ ಟ್ರೋಫಿ ಅನಾವರಣ ಸಮಾರಂಭದಲ್ಲಿ ಕೆಎಸ್ ಸಿಎ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಟ್ರೋಫಿ ಅನಾವರಣಗೊಳಿಸಿದರು.

ಎಲ್ಲಿ ಪ್ರಸಾರ

ಎಲ್ಲಿ ಪ್ರಸಾರ

ಪಂದ್ಯಗಳನ್ನು ಸೋನಿ ಇಎಸ್ ಪಿಎನ್ ಚಾನೆಲ್ ನಲ್ಲಿ ನೇರ ಪ್ರಸಾರವಾಗಲಿದೆ. ಕೆಪಿಎಲ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು http://hrgcricstats.com/ ಇಲ್ಲಿ ಪಡೆದುಕೊಳ್ಳಬಹುದಾಗಿದೆ.

ಶಾಲಾ. ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ

ಶಾಲಾ. ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ

ಪಂದ್ಯಗಳನ್ನು ವೀಕ್ಷಿಸಲು ಶಾಲಾ. ಕಾಲೇಜು ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಈ ಬಗ್ಗೆ ಎಲ್ಲ ಶಾಲಾ, ಕಾಲೇಜುಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಕೆಎಸ್ ಸಿಎ ಧಾರವಾಡ ವಲಯದ ನಿಯಂತ್ರಕ ಬಾಬಾ ಭೂಸದ ಹೇಳಿದರು.

ಪಂದ್ಯಗಳಿಗೆ ಮಳೆಯ ಭೀತಿ

ಪಂದ್ಯಗಳಿಗೆ ಮಳೆಯ ಭೀತಿ

ಉತ್ತರ ಕರ್ನಾಟಕದಾದ್ಯಂತ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ. ಸದ್ಯ ನಗರದಲ್ಲಿ ಜಿಟಿಜಿಟಿ ಹಿಂಗಾರು ಮಳೆ ಆರಂಭವಾಗಿದ್ದು, ಹೊನಲು ಬೆಳಕಿನ ಪಂದ್ಯಕ್ಕೆ ಮಳೆ ಅಡ್ಡಿಪಡಸಲಿದೆ ಎಂಬ ಆತಂಕ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Brijesh Patel,secretary of KSCA and the motivating force behind the hugely successful KPL T20 cricket tournament officially launched the trophy for the fifth Karbonn Karnataka Premier League powered by Cycle Agarbathies at a glittering function in the city on Friday evening.
Please Wait while comments are loading...