ಕೆಪಿಎಲ್ 2016 : ಹುಬ್ಳಿ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಬಳ್ಳಾರಿ

Posted By:
Subscribe to Oneindia Kannada

ಹುಬ್ಬಳ್ಳಿ, ಅಕ್ಟೋಬರ್ 03 : ಕರ್ನಾಟಕ ಪ್ರೀಮಿಯರ್ ಲೀಗ್‌ (ಕೆಪಿಎಲ್‌) ಟೂರ್ನಿಯ ಐದನೇ ಆವೃತ್ತಿಯ ಚಾಂಪಿಯನ್ ಆಗಿ ರಾಗಿಣಿ ದ್ವಿವೇದಿ ಅವರ ಬಳ್ಳಾರಿ ಟಸ್ಕರ್ಸ್ ತಂಡ ಹೊರ ಹೊಮ್ಮಿದೆ. ಇಲ್ಲಿನ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಕಟ್ಟಿ ಹಾಕಿ, ಮೊದಲ ಬಾರಿಗೆ ಚಾಂಪಿಯನ್ ಎನಿಸಿಕೊಂಡಿದ್ದಾರೆ.

ಬಲಿಷ್ಠ ತಂಡ ಮೈಸೂರು ವಾರಿಯರ್ಸ್ ಸೋಲಿಸಿ ಫೈನಲ್ ಪ್ರವೇಶಿಸಿದ್ದ ಬಳ್ಳಾರಿ ತಂಡ ಬ್ಯಾಟಿಂಗ್, ಬೌಲಿಂಗ್ ನಲ್ಲಿ ಮಿಂಚಿ ಚಾಂಪಿಅಯ್ನ್ ಪಟ್ಟಕ್ಕೇರಿತು. ಈ ಮೂಲಕ ಎರಡನೇ ಬಾರಿಗೆ ಹುಬ್ಬಳ್ಳಿ ಟೈಗರ್ಸ್ ಕೆಪಿಎಲ್ ಕಪ್ ಎತ್ತುವಲ್ಲಿ ವಿಫಲವಾಯಿತು.

B Akhil

ಕೆಎಸ್‌ಸಿಎ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ಬಳ್ಳಾರಿ 189 ರನ್ ಚೆಚ್ಚಿತ್ತು. ಗುರಿ ಬೆನ್ನತ್ತಿದ ಟೈಗರ್ಸ್‌ 154 ರನ್‌ ಗಳಿಸಿ ಸೋಲು ಕಂಡಿತು.


ಸಂಕ್ಷಿಪ್ತ ಸ್ಕೋರ್‌: ಬಳ್ಳಾರಿ ಟಸ್ಕರ್ಸ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 189 (ರೋಹನ್‌ ಕದಮ್‌ 61, ಸುನೀಲ್ ರಾಜು 36, ಬಿ.ಅಖಿಲ್‌ 50; ಶಿವಿಲ್ ಕೌಶಿಕ್‌ 18ಕ್ಕೆ2); ಹುಬ್ಬಳ್ಳಿ ಟೈಗರ್ಸ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 154 (ಮಹಮ್ಮದ್ ತಾಹ 36, ದಿಕ್ಷಾಂಶು ನೇಗಿ 39; ಅಮಿತ್ ವರ್ಮಾ 38ಕ್ಕೆ2, ಸ್ಟೀವ್‌ ಲಾಝರಜ್‌ 31ಕ್ಕೆ3).

ಪಂದ್ಯಶ್ರೇಷ್ಠ: ಬಿ.ಅಖಿಲ್‌.
ಟೂರ್ನಿಯ ಶ್ರೇಷ್ಠ ಆಟಗಾರ: ಅಮಿತ್‌ ವರ್ಮಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bellary Tuskers were crowned as the champions of the 5th Karnataka Premier League (KPL) Twenty20 tournament. They played a brilliant brand of cricket to defeat Hubli Tigers in the final at the KSCA Stadium in Rajnagar in front of a sell-out crowd on Sunday night (October 2).
Please Wait while comments are loading...