ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೈಸೂರು ವಿರುದ್ಧ ನಮ್ಮ ಶಿವಮೊಗ್ಗಕ್ಕೆ ರೋಚಕ ಜಯ

By Mahesh

ಹುಬ್ಬಳ್ಳಿ, ಸೆ. 03: ಇಲ್ಲಿನ ರಾಜನಗರ ಸ್ಟೇಡಿಯಂನಲ್ಲಿ ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ಟೂರ್ನಿಗೆ ಭರ್ಜರಿ ಆರಂಭ ಸಿಕ್ಕಿದೆ. ಮೊದಲ ಪಂದ್ಯದಲ್ಲಿ ಮಂಗಳೂರು ತಂಡವನ್ನು ಬೆಳಗಾವಿ ತಂಡ ಸುಲಭವಾಗಿ ಸೋಲಿಸಿದೆ. ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್ ತಂಡದ ವಿರುದ್ಧ ಚೊಚ್ಚಲ ಪಂದ್ಯದಲ್ಲೇ ನಮ್ಮ ಶಿವಮೊಗ್ಗ ರೋಚಕ ಜಯ ದಾಖಲಿಸಿದೆ.

ಇದೇ ಮೊದಲ ಬಾರಿಗೆ ಕೆಪಿಎಲ್ ನಲ್ಲಿ ಆಡುತ್ತಿರುವ ಕಿಚ್ಚ ಸುದೀಪ್ ಮಾಲೀಕತ್ವದ ನಮ್ಮ ಶಿವಮೊಗ್ಗ ತಂಡ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆವಕಾಶ ಪಡೆದುಕೊಂಡ ಹಾಲಿ ಚಾಂಪಿಯನ್ ಮೈಸೂರು ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. 12.2 ಓವರ್ ಗಳಲ್ಲಿ 100 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿತ್ತು.

ಮೊದಲು ಬ್ಯಾಟಿಂಗ್ ಅವಕಾಶದ ಲಾಭ ಪಡೆದ ಮೈಸೂರು ತಂಡಕ್ಕೆ ನಾಯಕ ಮನೀಶ್ ಪಾಂಡೆ ಹಾಗೂ ಅರ್ಜುನ್ ಅವರು ಉತ್ತಮ ಆರಂಭ ಒದಗಿಸಿ 7 ಓವರ್ ಗಳಲ್ಲಿ ತಂಡದ ಮೊತ್ತ 50ರನ್ ಗಡಿ ದಾಟಿಸಿದರು. ಅಂತಿಮವಾಗಿ ಮೈಸೂರು ವಾರಿಯರ್ಸ್ ತಂಡ 20 ಓವರ್ ಗಳಲ್ಲಿ 160 ರನ್ ಸ್ಕೋರ್ ಮಾಡಿತು.

161 ರನ್ ಚೇಸ್ ಮಾಡಿದ ಸ್ಟುವರ್ಟ್ ಬಿನ್ನಿ ಪಡೆ ಮೊದಲ ಐದು ಓವರ್ ಗಳಲ್ಲಿ 43/1 ಸ್ಕೋರ್ ಮಾಡಿ ಉತ್ತರ ಆರಂಭ ಪಡೆಯಿತು. ನಂತರ ವಿಕೆಟ್ ಗಳನ್ನು ಕಳೆದುಕೊಂಡು ಆತಂಕಕ್ಕೀಡಾಗಿತ್ತು.ಅಂತಿಮವಾಗಿ ಶ್ರೇಯಸ್ ಗೋಪಾಲ್ 49 ರನ್ ಹಾಗೂ ನಾಯಕ ಸ್ಟುವರ್ಟ್ ಬಿನ್ನಿ ಸಮಯೋಚಿತ ಆಟದ ಮೂಲಕ ಜಯ ದಾಖಲಿಸಿದರು. [ಕೆಪಿಎಲ್: ಮಂಗಳೂರನ್ನು ಬಗ್ಗು ಬಡಿದ ಬೆಳಗಾವಿ ಪ್ಯಾಂಥರ್ಸ್]

ಮೈಸೂರು ತಂಡಕ್ಕೆ ಬೆಂಬಲ ಸೂಚಿಸಿದ ಸಂಗೀತಗಾರ ರಘು ದೀಕ್ಷಿತ್ ಅವರು ದೇಹ ಅಷ್ಟೇ ಬೆಂಗಳೂರಲ್ಲಿ, ಹೃದಯ ಆತ್ಮ ಹಾಗೂ ಮನಸ್ಸು ತವರೂರಾದ ಮೈಸೂರಲ್ಲೇ ಬಿಟ್ಟು ಬಂದಿದ್ದೀನಿ ಎಂದು ಟ್ವೀಟ್ ಮಾಡಿದ್ದಾರೆ.

ಮೈಸೂರು ಭರ್ಜರಿ ಬ್ಯಾಟಿಂಗ್

ಮೈಸೂರು ಭರ್ಜರಿ ಬ್ಯಾಟಿಂಗ್

ಮೊದಲ ಪಂದ್ಯದಲ್ಲಿ ಮಂಗಳೂರು ತಂಡವನ್ನು ಬೆಳಗಾವಿ ತಂಡ ಸುಲಭವಾಗಿ ಸೋಲಿಸಿದೆ. ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆವಕಾಶ ಪಡೆದುಕೊಂಡ ಹಾಲಿ ಚಾಂಪಿಯನ್ ಮೈಸೂರು ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 20 ಓವರ್ ಗಳಲ್ಲಿ 160 ರನ್ ಸ್ಕೋರ್ ಮಾಡಿತು

ಮೊದಲ ಬಾರಿಗೆ ಕಣಕ್ಕಿಳಿದ ನಮ್ಮ ಶಿವಮೊಗ್ಗ

ಮೊದಲ ಬಾರಿಗೆ ಕೆಪಿಎಲ್ ಕಣಕ್ಕಿಳಿದ ನಮ್ಮ ಶಿವಮೊಗ್ಗ ತಂಡಕ್ಕೆ ಮೊದಲ ಪಂದ್ಯದಲ್ಲೇ ಬಲಿಷ್ಠ ಮೈಸೂರು ವಾರಿಯರ್ಸ್ ಎದುರಾಗಿದೆ.

ಹುಬ್ಬಳ್ಳಿಯ ಪ್ರೇಕ್ಷಕರ ಅಬ್ಬರ, ಸಂಭ್ರಮ

ಹುಬ್ಬಳ್ಳಿಯ ರಾಜನಗರದ ಸ್ಟೇಡಿಯಂನಲ್ಲಿ ಪ್ರೇಕ್ಷಕರ ಅಬ್ಬರ, ಸಂಭ್ರಮ

ಬ್ಯಾಟಿಂಗ್ ಶಕ್ತಿ ಪ್ರದರ್ಶಿಸಿದ ಮೈಸೂರು

ಬ್ಯಾಟಿಂಗ್ ಶಕ್ತಿ ಪ್ರದರ್ಶಿಸಿದ ಮೈಸೂರು ತಂಡದಲ್ಲಿ ಸಿಎಂ ಗೌತಮ್, ಮನೀಶ್ ಪಾಂಡೆ ಅಲ್ಲದೆ, ಅರ್ಜುನ್ ಹೊಯ್ಸಳ ಹಾಗೂ ಮಂಜೇಶ್ ರೆಡ್ಡಿ ಅವರು ಉಪಯುಕ್ತ ಕಾಣಿಕೆ ನೀಡಿದರು.

ಮೈಸೂರು ಪರ ರಘು ದೀಕ್ಷಿತ್ ಬ್ಯಾಟಿಂಗ್

ಮೈಸೂರು ಪರ ಗಾಯಕ ರಘು ದೀಕ್ಷಿತ್ ಬ್ಯಾಟಿಂಗ್

ನಮ್ಮ ಶಿವಮೊಗ್ಗ ಚೊಚ್ಚಲ ಗೆಲುವಿನ ಸಿಹಿ

ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್ ಸೋಲಿಸಿದ ನಮ್ಮ ಶಿವಮೊಗ್ಗ ಚೊಚ್ಚಲ ಗೆಲುವಿನ ಸಿಹಿ

ಸ್ಕೋರ್ ಕಾರ್ಡ್

ಸ್ಕೋರ್ ಕಾರ್ಡ್

ಮೈಸೂರು ವಾರಿಯರ್ಸ್ : ಅರ್ಜುನ್ ಹೊಯ್ಸಳ (37b, 6x4),ಮನೀಶ್ ಪಾಂಡೆ 26 (22b, 3x4), ಮಂಜೇಶ್ ರೆಡ್ಡಿ 45 (27b, 8x4),ಕೆ ಗೌತಮ್ ಅಜೇಯ 26 (11b, 3x4, 1x6); ಖಾದರ್ 35 ಕ್ಕೆ 2.

ನಮ್ಮ ಶಿವಮೊಗ್ಗ : ಸಾದಿಕ್ ಕಿರ್ಮಾನಿ 29 (20b, 3x4), ಸ್ಟುವರ್ಟ್ ಬಿನ್ನಿ 25 (20b, 1x6), ಶ್ರೇಯಸ್ ಗೋಪಾಲ್ ಅಜೇಯ 49 (30b, 7x4, 1x6),ಶಾಂತರಾಜ್ 35 ಕ್ಕೆ 2.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X