2ನೇ ಟೆಸ್ಟ್: 316 ರನ್ ಗಳಿಗೆ ಟೀಂ ಇಂಡಿಯಾ ಅಲೌಟ್!

Written By: Ramesh
Subscribe to Oneindia Kannada

ಕೋಲ್ಕತ್ತ ,ಅ. 01 : ಈಡನ್ ಗಾರ್ಡನ್ ಕೋಲ್ಕತ್ತ ಮೈದಾನದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಕೊಂಡಿದ್ದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 316 ರನ್ ಗಳಿಗೆ ಸರ್ವಪತನ ಕಂಡಿದೆ.

ಭಾರತ ಮೊದಲ ದಿನ 239 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು. 2ನೇ ದಿನವಾದ ಇಂದು ಲಂಚ್ ವೇಳೆಗಾಗಲೇ ಕೇವಲ 75 ರನ್ ಗಳಿಸಲಷ್ಟೇ ಶಕ್ತವಾಯಿತು. ವೃದ್ಧಮಾನ್ ಸಹ 2 ನೇ ದಿನದಾಟದಲ್ಲಿ 54 ರನ್ ಗಳಿಸಿ ಮಿಂಚಿದರು. ಇನ್ನು 4 ಓವರ್ ಗಳು ಬಾಕಿ ಇರುವಾಗಲೇ ಮಂದ ಬೆಳಕು ಕಾರಣ ಮೊದಲ ದಿನ ಅಂತ್ಯಗೊಂಡಿತ್ತು.

India

ಶಿಖರ್ ದವನ್ (1) ಮುರುಳಿ ವಿಜಯ್ (9) ನಾಯಕ ವಿರಾಟ್ ಕೊಹ್ಲಿ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಇನ್ನು ಚೇತೇಶ್ವರ ಪೂಜಾರ (87) ಮತ್ತು ಅಜಿಂಕ್ಯಾ ರಹಾನೆ (77) ಭಾರತ ಪರ ಗರಿಷ್ಠ ರನ್ ಮಾಡಿದ ಆಟಗಾರರು ಎನಿಸಿಕೊಂಡರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India were bundled out for 316 in the first innings of the second Test match against New Zealand, here on Saturday (Oct 1).
Please Wait while comments are loading...