ದ್ರಾವಿಡ್ ದಾಖಲೆ ಮುರಿದು, ಗವಾಸ್ಕರ್ ಸಮಕ್ಕೆ ನಿಂತ ಕೊಹ್ಲಿ

Posted By:
Subscribe to Oneindia Kannada

ಕೋಲ್ಕತ್ತಾ, ಅಕ್ಟೋಬರ್ 03: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 0-2 ಅಂತರದಲ್ಲಿ ಗೆದ್ದ ಸಂಭ್ರಮದಲ್ಲಿರುವ ಟೀಂ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಅವರು ಹೊಸ ದಾಖಲೆಯನ್ನು ಬರೆದಿದ್ದಾರೆ. ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರ ದಾಖಲೆ ಮುರಿದಿರುವ ಕೊಹ್ಲಿ ಈಗ ಗವಾಸ್ಕರ್, ಪಟೌಡಿ ಸಮಕ್ಕೆ ನಿಂತಿದ್ದಾರೆ.

250ನೇ ಟೆಸ್ಟ್ ಪಂದ್ಯದ ಸ್ಕೋರ್ ಕಾರ್ಡ್

ಕೋಲ್ಕತ್ತಾದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು 178ರನ್ ಗಳಿಂದ ಗೆದ್ದ ಭಾರತ, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಟೆಸ್ಟ್ ಶ್ರೇಯಾಂಕದ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಕಾನ್ಪುರದಲ್ಲಿ 500ನೇ ಟೆಸ್ಟ್ ಪಂದ್ಯದಲ್ಲೂ ಕೊಹ್ಲಿ ನಾಯಕತ್ವದಲ್ಲಿ ಭಾರತ ಗೆಲುವು ಸಾಧಿಸಿತ್ತು.[ಪಾಕಿಸ್ತಾನವನ್ನು ಕೆಳಕ್ಕೆ ದೂಡಿ, ಅಗ್ರಸ್ಥಾನಕ್ಕೇರಿದ ಭಾರತ]

ಕೋಲ್ಕತ್ತಾ ಟೆಸ್ಟ್ ಗೆಲುವು ನಾಯಕನಾಗಿ ವಿರಾಟ್ ಕೊಹ್ಲಿ ಅವರು ನಾಯಕನಾಗಿ 9ನೇ ಗೆಲುವಾಗಿದೆ. 16 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿರುವ ಕೊಹ್ಲಿ ಅವರು 2 ಪಂದ್ಯಗಳನ್ನು ಮಾತ್ರ ಸೋತಿದ್ದಾರೆ. ಅದರಲ್ಲೂ ತವರು ನೆಲದಲ್ಲಿ ಇನ್ನೂ ಒಂದು ಪಂದ್ಯವನ್ನು ಸೋತಿಲ್ಲ.[500 ಟೆಸ್ಟ್ ಪಂದ್ಯಗಳು, 32 ಟೀಂ ಇಂಡಿಯಾ ಕ್ಯಾಪ್ಟನ್ಸ್]

ಭಾರತದ ಯಶಸ್ವಿ ಟೆಸ್ಟ್ ಕ್ರಿಕೆಟ್ ನಾಯಕರ ಪಟ್ಟಿಯಲ್ಲಿ ಈಗ ರಾಹುಲ್ ದ್ರಾವಿಡ್ (8 ಗೆಲುವು) ಅವರನ್ನು ಹಿಂದಿಕ್ಕಿ ಕೊಹ್ಲಿ ಮೇಲಕ್ಕೇರಿದ್ದಾರೆ. ದೆಹಲಿಯ ಆಟಗಾರ ಕೊಹ್ಲಿ ಅವರು ಈಗ 9 ಗೆಲುವು ಸಾಧಿಸಿದ್ದ ಸುನಿಲ್ ಗವಾಸ್ಕರ್ ಹಾಗೂ ಮನ್ಸೂರ್ ಆಲಿ ಖಾನ್ ಪಟೌಡಿ ಅವರ ಸಮಕ್ಕೆ ನಿಂತಿದ್ದಾರೆ.

27 ವರ್ಷ ವಯಸ್ಸಿನ ಕೊಹ್ಲಿ ಅವರು ಡಿಸೆಂಬರ್ 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್ ನಲ್ಲಿ ಮೊದಲ ಬಾರಿಗೆ ಭಾರತವನ್ನು ಮುನ್ನಡೆಸಿದರು. ಭಾರತದ 32ನೇ ನಾಯಕರಾಗಿ ಕೊಹ್ಲಿ ಅವರು 115 ರನ್ ಗಳಿಸಿದರೂ ಟೀಂ ಇಂಡಿಯಾ 48ರನ್ ಗಳಿಂದ ಪಂದ್ಯ ಬಿಟ್ಟುಕೊಟ್ಟಿತು.

ಅತ್ಯಂತ ಯಶಸ್ವಿ ನಾಯಕರು (ಟಾಪ್ 5)
* ಎಂಎಸ್ ಧೋನಿ 27 ಗೆಲುವು (60 ಪಂದ್ಯಗಳು)
* ಸೌರವ್ ಗಂಗೂಲಿ 21 (49)
* ಮೊಹಮ್ಮದ್ ಅಜರುದ್ದೀನ್ 14 (47)
* ವಿರಾಟ್ ಕೊಹ್ಲಿ(16), ಸುನಿಲ್ ಗವಾಸ್ಕರ್ (47), ಮನ್ಸೂರ್ ಅಲಿ ಖಾನ್ (40) ಎಲ್ಲರೂ 9 ಪಂದ್ಯಗಳು ಗೆಲುವು.
* ರಾಹುಲ್ ದ್ರಾವಿಡ್ 8 (25)

ನಾಯಕನಾಗಿ ಕೊಹ್ಲಿ ದಾಖಲೆ :
ಗೆಲುವು : 9, ಸೋಲು 2, ಡ್ರಾ : 5
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Indian captain Virat Kohli reached another milestone when he led the team to an emphatic 178-run victory over New Zealand in the 2nd Test here at Eden Gardens.
Please Wait while comments are loading...