ಜಿಂಬಾಬ್ವೆ ಪ್ರವಾಸಕ್ಕೆ ಅಜಿಂಕ್ಯ ರಹಾನೆ ಕ್ಯಾಪ್ಟನ್ ಸಾಧ್ಯತೆ

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ನವದೆಹಲಿ, ಮೇ 18: ಜೂನ್ ನಲ್ಲಿ ಮೂರು ಏಕದಿನ ಹಾಗೂ ಮೂರು ಟಿ20 ಟೂರ್ನಿಯನ್ನು ಆಡಲು ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆಗಳಿವೆ. ಇದರಿಂದ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸುವ ಸಾಧ್ಯತೆಗಳಿವೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಬಿಸಿಸಿಐ ಮೂಲಗಳ ಪ್ರಕಾರ ಭಾರತ ತಂಡದ ಹಿರಿಯ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಶಿಖರ್ ಧವನ್ ಸೇರಿದಂತೆ ಹಲವು ಆಟಗಾರರ ಬದಲಾಗಿ ಐಪಿಎಲ್ ನಲ್ಲಿ ಮಿಂಚುತ್ತಿರುವ ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ಸಾಧ್ಯತೆಗಳು ಇವೆ. ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ಇಲ್ಲದೆ ಕಳೆದ ಅಕ್ಟೋಬರ್ ನಿಂದ ಸುಮಾರು 4 ಟೆಸ್ಟ್, 10 ಏಕದಿನ, 15 ಟ್ವಂಟಿ20 ಪಂದ್ಯಗಳನ್ನು ಆಡಿದ್ದಾರೆ.

Kohli, Rohit, Shikhar likely to be rested for Zimbabwe tour, Rahane may lead Indian squad

ರೋಹಿತ್ ಶರ್ಮ ಅವರು ಕೂಡ ಸುಮಾರು ಆರು ತಿಂಗಳ ಕಾಲ ವಿಶ್ರಾಂತಿ ಪಡೆಯದೆ ಆಡುತ್ತಿದ್ದಾರೆ. ಇದರಿಂದ ದುರ್ಬಲ ಜಿಂಬಾಬ್ವೆ ಪ್ರವಾಸಕ್ಕೆ ಹಿರಿಯ ಆಟಗಾರರಿಗೆ ಕೋಕ್ ನೀಡಿ ಹೊಸ ಮುಖಗಳಿಗೆ ಅವಕಾಶ ಕಲ್ಪಿಸುವ ಚಿಂತನೆಗಳು ಬಿಸಿಸಿಐ ನಡೆಸಿದೆ. ಮುಂಬರುವ ಬಲಿಷ್ಠ ವೆಸ್ಟ್ ಇಂಡೀಸ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಕೆಲ ಆಟಗಾರರಿಗೆ ವಿಶ್ರಾಂತಿ ನೀಡಲಾಗುತ್ತಿದೆ.

ವಿರಾಟ್ ಮತ್ತು ರೋಹಿತ್ ಅವರು ಜಿಂಬಾಬೆ ಪ್ರವಾಸಕ್ಕೆ ಅಲಭ್ಯವಾಗುವುದು ಖಚಿತವಾಗಿದ್ದು. ಶಿಖರ್ ಧವನ್ ಹಾಗೂ ಮಹೇಂದ್ರ ಸಿಂಗ್ ಧೋನಿ ಆಡುವ ಸಾಧ್ಯತೆಗಳು ಕಡಿಮೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಒಂದು ವೇಳೆ ಧೋನಿ ಅವರಿಗೆ ರೆಸ್ಟ್ ನೀಡಿದರೆ ಅಜಿಂಕ್ಯಾ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಕರ್ನಾಟಕದ ಕೆ.ಎಲ್ ರಾಹುಲ್ ವಿಕೆಟ್ ಕೀಪಿಂಗ್ ಕಾರ್ಯನಿರ್ವಹಿಸಲಿದ್ದಾರೆ.

ರಿಶಬ್ ಪಂತ್, ಕೆ.ಎಲ್ ರಾಹುಲ್, ಕೃನಾಲ್ ಪಾಂಡ್ಯಾ, ಸೇರಿಂದತೆ ಇನ್ನು ಕೆಲ ಯುವ ಆಟಗಾರರು ಆಯ್ಕೆಯಾಗುವ ಸಂಭವ ಇದೆ. ಸಂದೀಪ್ ಪಾಟೀಲ್ ನೇತೃತ್ವದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿ ಸದಸ್ಯರು ಮೇ ಅಂತ್ಯದಲ್ಲಿ ಜಿಂಬಾಬೆ ಪ್ರವಾಸಕ್ಕೆ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India's Test captain Virat Kohli along with opening batsmen Rohit Sharma and Shikhar Dhawan are likely to be rested for India's tour of Zimbabwe but there is no confirmation on Mahendra Singh Dhoni's availability for the short series, starting June 11.
Please Wait while comments are loading...