ಕೊಹ್ಲಿ ಪರಿಶ್ರಮಕ್ಕೆ ತಕ್ಕ ಫಲ, ಟಿ20ಯಲ್ಲಿ ನಂ.1

Posted By:
Subscribe to Oneindia Kannada

ದುಬೈ, ಫೆ. 01: ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿ ಅವರಿಗೆ 'ಸರಣಿ ಶ್ರೇಷ್ಠ' ಪ್ರಶಸ್ತಿ ಸಿಕ್ಕಿದ ಖುಷಿಯಲ್ಲೇ ಐಸಿಸಿ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ.

ಒಟ್ಟಾರೆ 47 ಅಂಕಗಳನ್ನು ಕಲೆ ಹಾಕಿದ ಕೊಹ್ಲಿ ಅವರು ಅಗ್ರಸ್ಥಾನದಲ್ಲಿದ್ದ ಆಸ್ಟ್ರೇಲಿಯಾದ ನಾಯಕ ಅರೋನ್ ಫಿಂಚ್ ಅವರನ್ನು ಕೆಳಗೆ ದೂಡಿದ್ದಾರೆ. ಗಾಯಾಳುವಾಗಿರುವ ಫಿಂಚ್ ಮುಂಬರುವ ವಿಶ್ವಟಿ20 ಆಡುವುದು ಈಗ ಅನುಮಾನವಾಗಿದೆ. ಹೀಗಾಗಿ ಕೊಹ್ಲಿ ಸದ್ಯಕ್ಕೆ ಟಿ20 ಚಕ್ರವರ್ತಿ.

Kohli replaces Finch as No. 1 batsman in T20 Internationals

ಕೊಹ್ಲಿ ಅವರು ಸತತವಾಗಿ ಮೂರು ಅರ್ಧಶತಕ ಬಾರಿಸಿದ್ದು ಹೊಸ ದಾಖಲೆಯಾಗಿದ್ದು, ಅಜೇಯ 90, ಅಜೇಯ 59 ಹಾಗೂ 50ರನ್ ಗಳಿಸಿ 47 ರೇಟಿಂಗ್ ಅಂಕ ಪಡೆದು ಅಗ್ರಪಟ್ಟಕ್ಕೇರಿದ್ದಾರೆ. ಫಿಂಚ್ ಅವರು 44 ಹಾಗೂ 74ರನ್ ಗಳಿಸಿ 14 ಅಂಕ ಗಳಿಸಿ ಒಟ್ಟಾರೆ 892 ರೇಟಿಂಗ್ ನೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

ಅಂತಿಮ ಪಂದ್ಯದಲ್ಲಿ ಸಕತ್ ಆಗಿ ಆಡಿದ ಎಡಗೈ ಬ್ಯಾಟ್ಸ್ ಮನ್ ಸುರೇಶ್ ರೈನಾ ಅವರು ಮೂರು ಸ್ಥಾನ ಮೇಲಕ್ಕೇರಿ 13ನೇ ಸ್ಥಾನಕ್ಕೆ ಬಂಡಿದ್ದಾರೆ. ರೋಹಿತ್ ಶರ್ಮ ಅವರು ನಾಲ್ಕು ಸ್ಥಾನ ಮೇಲಕ್ಕೇರಿ 16ನೇ ಸ್ಥಾನದಲ್ಲಿದ್ದಾರೆ.

ವಿಶ್ವ ಟಿ20ಗೂ ಮುನ್ನ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನಕ್ಕೇರಿರುವ ಸುದ್ದಿ ಈಗಾಗಲೇ ಕ್ರಿಕೆಟ್ ಪ್ರೇಮಿಗಳಿಗೆ ಖುಷಿ ಕೊಟ್ಟಿದೆ.ಈಗ ಕೊಹ್ಲಿ ಅಭಿಮಾನಿಗಳು ಕೂಡಾ ಸಂತಸ ಪಡಬಹುದಾಗಿದೆ.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Virat Kohli was rewarded for his stupendous performance in India’s clean sweep against Australia in the T20 internationals as he replaced Aaron Finch as the top-ranked batsman in the ICC list for the shortest format.
Please Wait while comments are loading...