ಕ್ರಿಕೆಟ್ 'ದೇವರು' ಸಚಿನ್ ಅವರ ಸಂಶೋಧನೆ ಬಗ್ಗೆ ಟ್ವೀಟ್ ಕಾಮಿಡಿ

Posted By:
Subscribe to Oneindia Kannada

ಬೆಂಗಳೂರು, ಜುಲೈ 01: ಅಭಿಮಾನಿಗಳ ಪಾಲಿನ 'ದೇವರು' ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಪ್ರವಾಸ ನಿರತರಾಗಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಅವರು ಹಂಚಿಕೊಂಡ ಚಿತ್ರವೊಂದು ಈಗ ಟ್ವಿಟ್ಟರ್ ನಲ್ಲಿ ಹಾಸ್ಯಕ್ಕೆ ಎಡೆ ಮಾಡಿಕೊಟ್ಟಿದೆ. ಕ್ರಿಕೆಟ್ ದೇವರ ಕಾಲನ್ನು ಕೂಡಾ ಜನ ಸಕತ್ತಾಗಿ ಎಳೆದಿದ್ದಾರೆ.

ಟ್ವಿಟ್ಟರ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯರಾಗಿರುವ ಸಚಿನ್ ಅವರು ತಮ್ಮ ಪ್ರವಾಸದ ನೆನಪುಗಳನ್ನು ಐತಿಹಾಸಿಕ ತಾಣಗಳ ಚಿತ್ರಗಳನ್ನು ಹಂಚಿಕೊಳ್ಳುವುದು ಮಾಮೂಲಿ, ಇದೇ ರೀತಿ ಸಚಿನ್ ಅವರು ದ್ವೀಪವೊಂದರ ಬಳಿ ನಿಂತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. [ಸಚಿನ್‌ಗೆ ಯೋಗ ಕಲಿಸಿದ ಬೆಂಗಳೂರಿನ ಡಾ. ಓಂಕಾರ್ ಸಂದರ್ಶನ]

OMG! Sachin Tendulkar tweets 'Sare Jahan Se Acha Moment', gets trolled by fans

ಈ ದ್ವೀಪದ ಬಳಿ ನಿಂತು ನೋಡಿದರೆ ನನಗೆ ಭಾರತದ ಭೂಪಟ ಕಂಡಂತೆ ಅನ್ನಿಸುತ್ತಿದೆ. ಸಾರೆ ಜಹಾನ್ ಸೇ ಅಚ್ಚ ಹಿಂದೂಸ್ತಾನ್ ಹಮಾರಾ! ಎಂಬ ಸಂದೇಶದ ಜತೆಗೆ ಫೋಟೋ ಹಾಕಿದ್ದಾರೆ.[ಸಚಿನ್ ಜೊತೆ ಚಿರಂಜೀವಿ, ನಾಗಾರ್ಜುನ ಸೆಲ್ಫಿ ಯಾಕೆ?]

ಇದಕ್ಕೆ ಥರಾವರಿ ಪ್ರತಿಕ್ರಿಯೆಗಳು ಬಂದಿದ್ದು, ದೇವರು ಹೇಳಿದ ಮೇಲೆ ಮುಗಿಯಿತು ಬಿಡಿ ಮತ್ತೆ ಮಾತನಾಡುವಂತಿಲ್ಲ ಎಂದು ಕೆಲವರು ಟ್ವೀಟ್ ಮಾಡಿದ್ದರೆ, ಮತ್ತೆ ಕೆಲವರು ನಿಮ್ಮದು ಧಾರಾಳ ಮನಸು ಈ ಭೂಪಟದಲ್ಲಿ ಅಖಂಡ ಭಾರತವೇ ಕಾಣಿಸುತ್ತಿದೆ ಎಂದಿದ್ದಾರೆ.ಇನ್ನು ಕೆಲವರು ಸಚಿನ್ ರಿಂದ ಹೊಸ ಸಂಶೋಧನೆ ಎಂದಿದ್ದಾರೆ. ಟ್ವೀಟ್ ಗಳನ್ನು ನೀವು ನೋಡಿ ಆನಂದಿಸಿ...

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Indian cricketing legend Sachin Tendulkar is on a vacation these days and the Master Blaster is constantly sharing images from his trip.
Please Wait while comments are loading...