ಐಪಿಎಲ್ 2017: ಪ್ಲೇ ಆಫ್ ಗೆ ಮುಂಬೈ; ಹೆಚ್ಚಿದ ಕುತೂಹಲ

Posted By:
Subscribe to Oneindia Kannada

ಕೋಲ್ಕತಾ, ಮೇ 13: ಈ ಬಾರಿಯ ಐಪಿಎಲ್ ನಲ್ಲಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಕೋಲ್ಕತಾ ವಿರುದ್ಧ 9 ರನ್ ಗಳ ಜಯ ಸಾಧಿಸಿದ ಮುಂಬೈ ಇಂಡಿಯನ್ಸ್, ಪಂದ್ಯಾವಳಿಯ ಪ್ಲೇ ಆಫ್ ಸುತ್ತಿಗೆ ಕಾಲಿಟ್ಟಿದೆ.

ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ, ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಕೋಲ್ಕತಾ, 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 164 ರನ್ ಮಾತ್ರ ಗಳಿಸಿತು.

Knight Riders miss out on top-two finish as Mumbai defend 173

ಈ ಪಂದ್ಯದಲ್ಲಿನ ಜಯದಿಂದಾಗಿ, ಮುಂಬೈ ತಂಡ, ಎರಡು ಅಂಕಗಳನ್ನು ಗಳಿಸಿತಲ್ಲದೆ, ಹಾಲಿ ಐಪಿಎಲ್ ನಲ್ಲಿ ಈವರೆಗೆ ತಾನು ಆಡಿದ 14 ಪಂದ್ಯಗಳಿಂದ ಒಟ್ಟು 20 ಅಂಕಗಳ ಪಡೆಯುವ ಮೂಲಕ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು.

ಮಿಕ್ಕೆಲ್ಲಾ ತಂಡಗಳಿಗಿಂತ ಅಗ್ರ ಅಂಕಗಳನ್ನು ದಾಖಲಿಸಿರುವುದರಿಂದ ಆ ತಂಡ, ಪ್ಲೇ ಆಫ್ ಹಂತಕ್ಕೆ ಕಾಲಿಟ್ಟಂತಾಗಿದೆ.

ಈ ಪಂದ್ಯದ ಸೋಲಿನಿಂದಾಗಿ, ಕೋಲ್ಕತಾ ತಂಡ, ಅಂಕಪಟ್ಟಿಯಲ್ಲಿ ಈವರೆಗೆ ಹೊಂದಿದ್ದ ಅಗ್ರ ಸ್ಥಾನವನ್ನು ಕಳೆದುಕೊಂಡು 3ನೇ ಸ್ಥಾನಕ್ಕೆ ನೂಕಲ್ಪಟ್ಟಿದೆ.

ಶನಿವಾರ ಸಂಜೆ ಗುಜರಾತ್ ತಂಡವನ್ನು ಸೋಲಿಸಿದ ಸನ್ ರೈಸರ್ಸ್, ಒಟ್ಟು 17 ಅಂಕಗಳನ್ನು ಗಳಿಸಿ ಅಂಕ ಪಟ್ಟಿಯ 2ನೇ ಸ್ಥಾನಕ್ಕೇರಿದೆ.

ಹಾಗೆಂದ ಮಾತ್ರಕ್ಕೆ ಸನ್ ರೈಸರ್ಸ್ ಹಾಗೂ ಕೋಲ್ಕತಾ ತಂಡಗಳು ಪ್ಲೇ ಆಫ್ ಹಂತಕ್ಕೆ ಕಾಲಿಡಲಿವೆ ಎಂದರ್ಥವಲ್ಲ.

ಏಕೆಂದರೆ, ಆ ತಂಡಗಳು, ರೈಸಿಂಗ್ ಪುಣೆ ಸೂಪರ್ ಜಿಯಾಂಟ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳಿಂದ ಸ್ಪರ್ಧೆ ಎದುರಿಸಬೇಕಿದೆ.

ಅರ್ಥಾತ್, ಪುಣೆ ಹಾಗೂ ಪಂಜಾಬ್ ತಂಡಗಳು ಇನ್ನು ಒಂದೊಂದು ಪಂದ್ಯಗಳನ್ನಾಡಬೇಕಿದೆ. ಸದ್ಯಕ್ಕೆ ಆ ತಂಡಗಳ ತಲಾ 16 ಅಂಕಗಳನ್ನು ಹೊಂದಿದ್ದು, ಅಂಕಪಟ್ಟಿಯಲ್ಲಿ ಕ್ರಮವಾಗಿ 4ನೇ ಹಾಗೂ 5ನೇ ಸ್ಥಾನಗಳಲ್ಲಿವೆ.

ಈ ಎರಡೂ ತಂಡಗಳು ಮೇ 14ರಂದು ಪುಣೆಯಲ್ಲಿ ಪರಸ್ಪರ ಸೆಣಸಲಿವೆ. ಈ ಪಂದ್ಯವು ಎರಡೂ ತಂಡಗಳ ಪಾಲಿಗೆ ಮಹತ್ವದ್ದಾಗಿದ್ದು, ಇಲ್ಲಿ ಯಾರು ಗೆಲ್ಲುತ್ತಾರೋ ಆ ತಂಡವು ಅಂಕಪಟ್ಟಿಯ 2, 3ನೇ ಸ್ಥಾನಗಳಲ್ಲಿರುವ ತಂಡಗಳಿಗೆ ಸಡ್ಡು ಹೊಡೆಯಬಲ್ಲದು.

(ಚಿತ್ರ ಕೃಪೆ: www.iplt20.com)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mumbai Indians ended the league stage of the IPL with a table-topping 20 points after they beat Kolkata Knight Riders by nine runs at the Eden Gardens. The defeat meant Knight Riders, with 16 points, would not finish in the top two.
Please Wait while comments are loading...