ಕೆಎಲ್ ರಾಹುಲ್ 'ಸಿಕ್ಸರ್ ಬಾರಿಸಿ ಶತಕ ಗಳಿಕೆ' ಏನಿದರ ಗುಟ್ಟು?

Posted By:
Subscribe to Oneindia Kannada

ಕಿಂಗ್ಸ್ಟನ್(ಜಮೈಕಾ), ಆಗಸ್ಟ್ 01: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಲ್ಲಿ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅವರು ಆಕರ್ಷಕ ಶತಕ ಗಳಿಸಿದ್ದು ತಿಳಿದಿರಬಹುದು. 96ರನ್ ಆಗಿದ್ದಾಗ ಚೇಸ್ ಅವರ ಎಸೆತವನ್ನು ಸಿಕ್ಸರ್ ಬಾರಿಸಿ ನೂರರ ಗಡಿ ದಾಟಿದರು. ಈ ರೀತಿ ಸಿಕ್ಸ್ ಬಾರಿಸಿ, ಶತಕ ಗಳಿಸಿದ್ದೇಕೆ? ಎಂಬುದನ್ನು ರಾಹುಲ್ ವಿವರಿಸಿದ್ದಾರೆ.

24 ವರ್ಷ ವಯಸ್ಸಿನ ಕನ್ನಡಿಗ ಲೋಕೇಶ್ ರಾಹುಲ್ ಅವರು ತಮ್ಮ 6ನೇ ಟೆಸ್ಟ್ ಪಂದ್ಯದ 11ನೇ ಇನ್ನಿಂಗ್ಸ್ ನಲ್ಲಿ ಭಾನುವಾರದಂದು ಭರ್ಜರಿ ಶತಕ ಗಳಿಸುವ ಮೂಲಕ ತಂಡ ಮೇಲುಗೈ ಗಳಿಸಲು ನೆರವಾದರು.[ವೆಸ್ಟ್ ಇಂಡೀಸ್ ವಿರುದ್ಧ ಕೆಎಲ್ ರಾಹುಲ್ ಆಕರ್ಷಕ ಶತಕ]

96 to 102: KL Rahul reveals why he took Virender Sehwag '6 route' to reach century

ಟೆಸ್ಟ್ ವೃತ್ತಿ ಬದುಕಿನ ಗರಿಷ್ಠ ಮೊತ್ತ 158 ರನ್ ಗಳಿಸಿ ರಾಹುಲ್ ಔಟಾದರೆ, ಟೀಂ ಇಂಡಿಯಾ ದಿನ್ದ ಅಂತ್ಯಕೆಕ್ 162ರನ್ ಮುನ್ನಡೆಯೊಂದಿಗೆ 358/5 ಸ್ಕೋರ್ ಮಾಡಿದೆ.[ಪಂದ್ಯದ ಸ್ಕೋರ್ ಕಾರ್ಡ್]

ಸೆಹ್ವಾಗ್ ಸ್ಟೈಲಲ್ಲಿ ಸೆಂಚುರಿ: ಬೌಂಡರಿ ಮೂಲಕ ಇನ್ನಿಂಗ್ಸ್ ಆರಂಭ, ಮೈಲಿಗಲ್ಲು ದಾಟಲು ಸಿಕ್ಸರ್ ಬಾರಿಸುವುದು ಸೆಹ್ವಾಗ್ ಸ್ಟೈಲ್. ರಾಹುಲ್ ಕೂಡಾ ಸ್ಪಿನ್ನರ್ ರೊಸ್ಟನ್ ಚೇಸ್ ಎಸೆತವನ್ನು ಸಿಕ್ಸರ್ ಬಾರಿಸಿ ಶತಕ ಗಳಿಸಿದರು. ಅದು ಇನ್ನಿಂಗ್ಸ್ ನ ಮೊದಲ ಸಿಕ್ಸ್ ಆಗಿತ್ತು ಎಂಬುದು ವಿಶೇಷ.

ಅಲ್ಲದೇ ಜೂನ್ ತಿಂಗಳಿನಲ್ಲಿ ಏಕದಿನ ಅಂತಾರಾಷ್ಟ್ರೀಯ ವೃತ್ತಿ ಆರಂಭಿಸಿದ ರಾಹುಲ್ ಅವರು ಚೊಚ್ಚಲ ಪಂದ್ಯದಲ್ಲೇ ಶತಕ ಗಳಿಸಿದ್ದು ಕೂಡಾ ಸಿಕ್ಸರ್ ಮೂಲಕವೇ ಎಂಬುದು ಗಮನಾರ್ಹ.

ನರ್ವಸ್ ನೈಂಟಿಯಲ್ಲಿರಲು ಇಷ್ಟವಿಲ್ಲ: ನರ್ವಸ್ ನೈಂಟಿಯಲ್ಲಿರಲು ನನಗೆ ಇಷ್ಟವಿಲ್ಲ. ಆದಷ್ಟು ಬೇಗ ಶತಕದ ಗಡಿ ದಾಟಲು ಯತ್ನಿಸುತ್ತೇನೆ. ಸೆಹ್ವಾಗ್ ಮಾದರಿ ಎಂದರೂ ತಪ್ಪೇನಿಲ್ಲ. ಆದರೆ, ಆ ಸಮಯಕ್ಕೆ ಬೌಲರ್ ಮನಸ್ಸಿನಲ್ಲಿ ಏನು ಓಡುತ್ತಿದೆ ಎಂಬುದನ್ನು ಗ್ರಹಿಸಲು ಯತ್ನಿಸುತ್ತೇನೆ.

ಈ ಪಂದ್ಯದಲ್ಲಿ ಸತತವಾಗಿ ಶಾರ್ಟ್ ಎಸೆತಗಳನ್ನು ಹಾಕುತ್ತಿದ್ದ ಚೇಸ್ ಮುಂದಿನ ಎಸೆತವನ್ನು ಟಾಸ್ ಅಪ್ ಮಾಡಿ ಫಾರ್ವಡ್ ಬಂದು ಅಡಲು ಆಹ್ವಾನಿಸುತ್ತಾರೆ ಎಂದು ಊಹಿಸಿದೆ. ಅದರಂತೆ, ಅವಕಾಶ ಸಿಕ್ಕಿತು. ಉಪಯೋಗಿಸಿಕೊಂಡೆ ಎಂದು ಬಿಸಿಸಿಐ ವೆಬ್ ಸೈಟ್ ಗೆ ರಾಹುಲ್ ತಿಳಿಸಿದ್ದಾರೆ.

ಸಾಮಾನ್ಯವಾಗಿ ಯಾವ ಕೋಚ್ ಕೂಡಾ ಮುಖ್ಯ ಘಟ್ಟದಲ್ಲಿ ಸಿಕ್ಸ್ ಬಾರಿಸಲು ಸೂಚಿಸುವುದಿಲ್ಲ. ಆದರೆ, ದೊಡ್ಡ ಹೊಡೆತ ಹೊಡೆಯುವ ಅವಕಾಶಕ್ಕಿಂತ ಮನಸ್ಥಿತಿ ಮುಖ್ಯ ಎಂದು ರಾಹುಲ್ ವಿವರಿಸಿದ್ದಾರೆ.(ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It came a surprise to many that India opener KL Rahul chose to hit a six to complete his century in the 2nd Test against West Indies here yesterday (July 31). But the batsman has revealed the reason for playing the big shot to move from 96 to 102.
Please Wait while comments are loading...