1 ರನ್ ನಿಂದ ದ್ವಿಶತಕ ತಪ್ಪಿಸಿಕೊಂಡ ಕ್ರಿಕೆಟರ್ಸ್ ಪಟ್ಟಿ!

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 19: 'ದ್ವಿಶತಕ ಗಳಿಸುವ ಒತ್ತಡಕ್ಕೆ ಒಳಗಾಗಿ ಕಳಪೆ ಶಾಟ್ ಬಾರಿಸಿ ಔಟಾದೆ' ಎಂದು ಕೆಎಲ್ ರಾಹುಲ್ ಅವರು ಹೇಳಿದ್ದಾರೆ. ಕ್ರಿಕೆಟ್ ಪ್ರೇಮಿಗಳಿಗೆ ಭಾನುವಾರ ಅಕ್ಷರಶಃ ಆಗಿದ್ದು ಸುಳ್ಳಲ್ಲ. ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ 199ರನ್ ಗಳಿಸಿ ಔಟಾದ ಕೆಎಲ್ ರಾಹುಲ್ ಅವರು 1 ರನ್ ನಿಂದ ದ್ವಿಶತಕ ತಪ್ಪಿಸಿಕೊಂಡ ಕ್ರಿಕೆಟರ್ಸ್ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.

ಪಂದ್ಯದ ಸ್ಕೋರ್ ಕಾರ್ಡ್ || ಟೆಸ್ಟ್ ಸರಣಿ ಗ್ಯಾಲರಿ ||

24ವರ್ಷ ವಯಸ್ಸಿನ ಕರ್ನಾಟಕದ ಕ್ರಿಕೆಟರ್ ಕೆಎಲ್ ರಾಹುಲ್ ಅವರು ತಮ್ಮ ಚೊಚ್ಚಲ ದ್ವಿಶತಕ ಬಾರಿಸುವ ಆತುರದಲ್ಲಿ ಎಡವಿದರು. ಆದಿಲ್ ರಶೀದ್ ಎಸೆತವನ್ನು ಬಾರಿಸುವ ಯತ್ನದಲ್ಲಿ ಕವರ್ ಪಾಯಿಂಟ್ ನಲ್ಲಿ ಸುಲಭ ಕ್ಯಾಚಿತ್ತು ಔಟಾದರು. ಪೆವಿಲಿಯನ್ ನಲ್ಲಿ ನಿಂತಿದ್ದ ನಾಯಕ ಕೊಹ್ಲಿ, ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರು ಒಂದು ಕ್ಷಣ ಮೌನಕ್ಕೆ ಜಾರಿದರು.

ತ್ರಿಶತಕ ಬಾರಿಸಿರುವ ಸೆಹ್ವಾಗ್ ಕೂಡಾ 190 ಬಾರಿಸಿ ಒಂದೆರಡು ಬಾರಿ ಮುಗ್ಗರಿಸಿದ್ದರು. ಆದರೆ, 199ರಲ್ಲಿ ಈ ಹಿಂದೆ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಮಾತ್ರ ಔಟಾಗಿದ್ದರು. ಉಳಿದಂತೆ ಈ ಬೇಡದ ದಾಖಲೆ ಪಟ್ಟಿಯಲ್ಲಿ ಸ್ಟೀವ್ ಸ್ಮಿತ್, ಮುದ್ದಾಸರ್ ನಜರ್ ಮುಂತಾದ ದಿಗ್ಗಜ ಬ್ಯಾಟ್ಸ್ ಮನ್ ಗಳಿದ್ದಾರೆ. [ರಾಹುಲ್ ಕೈತಪ್ಪಿದ ದ್ವಿಶತಕ]

KL Rahul joins unwanted 199 club: Full list of Test batsmen who missed 200 by 1 run

199ರನ್ ಗೆ ಔಟಾದ ಕ್ರಿಕೆಟರ್ಸ್ ಪಟ್ಟಿ:

1. ಮುದಾಸರ್ ನಜರ್ (ಪಾಕಿಸ್ತಾನ) vs ಭಾರತ, ಫೈಸಲಾಬಾದ್ (24 ಅಕ್ಟೋಬರ್ 1984)

2. ಮೊಹಮ್ಮದ್ ಅಜರುದ್ದೀನ್ (ಭಾರತ) vs ಶ್ರೀಲಂಕಾ, ಕಾನ್ಪುರ (17 ಡಿಸೆಂಬರ್ 1986)

3. ಮ್ಯಾಥ್ಯೂ ಇಲಿಯಟ್ (ಆಸ್ಟ್ರೇಲಿಯಾ) vs ಇಂಗ್ಲೆಂಡ್, ಲೀಡ್ಸ್ ( 24 ಜುಲೈ 1997)

4. ಸನತ್ ಜಯಸೂರ್ಯ (ಶ್ರೀಲಂಕಾ) vs ಭಾರತ, ಕೊಲಂಬೋ (ಎಸ್ಎಸ್ ಸಿ) (9 ಆಗಸ್ಟ್ 1997)

5. ಸ್ಟೀವ್ ವಾ (ಆಸ್ಟ್ರೇಲಿಯಾ) vs ವೆಸ್ಟ್ ಇಂಡೀಸ್, ಬ್ರಿಜ್ ಟೌನ್ ( 26 ಮಾರ್ಚ್ 1999)

6. ಯೂನಿಸ್ ಖಾನ್ (ಪಾಕಿಸ್ತಾನ) vs ಭಾರತ, ಲಾಹೋರ್ (13 ಜನವರಿ 2006)

7. ಇಯಾಬ್ ಬೆಲ್ (ಇಂಗ್ಲೆಂಡ್), vs ದಕ್ಷಿಣ ಆಫ್ರಿಕಾ, ಲಾರ್ಡ್ಸ್(10 ಜುಲೈ 2008)

8. ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ) vs ವೆಸ್ಟ್ ಇಂಡೀಸ್, ಕಿಂಗ್ಸ್ ಸ್ಟನ್ (11 ಜೂನ್ 2015)


9. ಕೆಎಲ್ ರಾಹುಲ್ (ಭಾರತ) vs ಇಂಗ್ಲೆಂಡ್, ಚೆನ್ನೈ (ಡಿಸೆಂಬರ್ 18, 2016)(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
KL Rahul joins unwanted 199 club: Full list of Test batsmen who missed 200 by 1 run. With this, Rahul, thus, became the ninth batsman in the history of Test cricket to be dismissed at 199 and joined an unwanted league of batsmen.
Please Wait while comments are loading...