ಟಿ20: ಸೆಹ್ವಾಗ್ ದಾಖಲೆ ಮುರಿದ ಕೆಎಲ್ ರಾಹುಲ್

Posted By:
Subscribe to Oneindia Kannada

ನಾಗ್ಪುರ, ಜನವರಿ 30: ಕನ್ನಡಿಗ ಕೆ.ಎಲ್.ರಾಹುಲ್‌ ಅವರು ಇಂಗ್ಲೆಂಡ್ ವಿರುದ್ಧದ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತೀ ಹೆಚ್ಚು ವೈಯಕ್ತಿಕ ರನ್ ಗಳಿಸಿದ ಸೆಹ್ವಾಗ್ ಅವರ ದಾಖಲೆಯನ್ನು ಮುರಿದಿದ್ದಾರೆ. ರಾಹುಲ್ ಅವರು 47 ಎಸೆತಗಳಲ್ಲಿ 71 ರನ್ ಗಳಿಸಿದ್ದು, ಆಂಗ್ಲರ ವಿರುದ್ಧ ಭಾರತೀಯ ಆಟಗಾರರೊಬ್ಬರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

ಇದಕ್ಕೂ ಮೊದಲು 2007 ಸೆಪ್ಟೆಂಬರ್ 19ರಂದು ನಡೆದ ಪಂದ್ಯದಲ್ಲಿ ವಿರೇಂದ್ರ ಸೆಹ್ವಾಗ್ ಅವರು ಡರ್ಬನ್‌ನಲ್ಲಿ ಗಳಿಸಿದ್ದ 68 ರನ್ ಗಳಿಸಿದ್ದರು. ಅಂಗ್ಲರ ವಿರುದ್ಧ ಭಾರತೀಯ ಆಟಗಾರ ಸಿಡಿಸಿದ್ದ ಅತೀ ಹೆಚ್ಚು ರನ್ ಗಳಿಕೆ ಸಾಧನೆ ಮಾಡಿದ್ದರು.

KL Rahul breaks VIrender Sehwag record T20i

ನಂತರ 2014ರಲ್ಲಿ ಬರ್ಮಿಂಗ್ ಹ್ಯಾಮ್‌‌ನಲ್ಲಿ ವಿರಾಟ್ ಕೊಹ್ಲಿ ಅವರು 66 ರನ್ ಗಳಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು. ಈಗ ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಕೆ.ಎಲ್.ರಾಹುಲ್‌ ಅವರು 71ರನ್‌ ಗಳಿಸಿ ಹೊಸ ದಾಖಲೆ ಬರೆದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
KL Rahul hit a 47-ball 71 to help India win a close game it was the highest T20 score by an Indian batsman against England in T20Is, beating Virender Sehwag’s 68 in the 2007 World T20.
Please Wait while comments are loading...