ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅರ್ಧಶತಕ ದಾಖಲೆ ವೀರರು : ರಾಹುಲ್ ಹಿಂದಿಕ್ಕಿದ ರಾಹುಲ್

By Mahesh

ಕ್ಯಾಂಡಿ, ಆಗಸ್ಟ್ 13: ಭಾರತದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಮತ್ತೊಮ್ಮೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಉತ್ತಮ ಆರಂಭ ಒದಗಿಸಿದರು. ಸತತ ಏಳು ಅರ್ಧಶತಕ ಗಳಿಸಿದ ಕೆಎಲ್ ರಾಹುಲ್ ಅವರು ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಮುರಿದರು.

3ನೇ ಟೆಸ್ಟ್: ಧವನ್ ಶತಕ, ಕೆಎಲ್ ರಾಹುಲ್ ದಾಖಲೆಯ ಅರ್ಧಶತಕ

ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದ ಅಂತ್ಯಕ್ಕೆ ಭಾರತ 6 ವಿಕೆಟ್ ನಷ್ಟಕ್ಕೆ 329 ರನ್ ಗಳ ಮೊತ್ತ ದಾಖಲಿಸಿದೆ.

85 ರನ್ ಗಳಿಸಿದ ಕರ್ನಾಟಕದ ಕೆ.ಎಲ್. ರಾಹುಲ್ ಅವರು ಸತತ 7 ಟೆಸ್ಟ್ ಪಂದ್ಯಗಳಲ್ಲಿ 7 ಅರ್ಧಶತಕ ದಾಖಲಿಸಿ, ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡರು.

 KL Rahul becomes first Indian to score seven Test fifties in a row


*ಇದೇ ಸಾಧನೆಯನ್ನು ಮಾಡಿದ್ದ ಎವರ್ಟನ್ ವೀಕರ್ಸ್ (ಇಂಗ್ಲೆಂಡ್), ಆ್ಯಂಡಿ ಫ್ಲವರ್ (ಜಿಂಬಾಬ್ವೆ), ಶಿವನಾರಾಯಣ ಚಂದ್ರಪಾಲ್ (ವೆಸ್ಟ್ ಇಂಡೀಸ್) ಹಾಗೂ ಕುಮಾರ ಸಂಗಕ್ಕಾರ (ಶ್ರೀಲಂಕಾ) ಈ ಹಿಂದೆ ಮಾಡಿದ್ದರು.

* ಕರ್ನಾಟಕದ ಹೆಮ್ಮೆಯ ಆಟಗಾರರಾದ ರಾಹುಲ್ ದ್ರಾವಿಡ್ ಹಾಗೂ ಜಿ. ಆರ್ ವಿಶ್ವನಾಥ್ ಅವರು ಸತತ 6 ಅರ್ಧಶತಕ ಗಳಿಸಿದ ಸಾಧನೆ ಮಾಡಿದ್ದರು. ಈ ಸಾಧನೆಯನ್ನು ಕೆಎಲ್ ರಾಹುಲ್ ಹಿಂದಿಕ್ಕಿದ್ದಾರೆ.
* ಸುನಿಲ್ ಗವಾಸ್ಕರ್, ದಿಲಿಪ್ ವೆಂಗ್ ಸರ್ಕಾರ್, ನವಜ್ಯೋತ್ ಸಿಂಗ್ ಸಿಧು ಹಾಗೂ ಸಂಜಯ್ ಮಂಜೇಕ್ರರ್ ಅವರು ಸತತ 5 ಅರ್ಧಶತಕ ಬಾರಿಸಿದ್ದರು.
* ಅತಿ ಹೆಚ್ಚು ಅರ್ಧಶತಕ ಗಳಿಸಿದವರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ಮುಂದಿದ್ದು, 12 ಫಿಫ್ಟಿಗಳಿಸಿದ್ದರೆ, ನಂತರದ ಸ್ಥಾನದಲ್ಲಿ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಅವರು 11 ಫಿಫ್ಟಿಯೊಂದಿಗೆ ಇದ್ದಾರೆ. ಸಚಿನ್ ತೆಂಡೂಲ್ಕರ್ ಅವರು 10 ಅರ್ಧಶತಕಗಳನ್ನು ಗಳಿಸಿದ್ದರು.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X