ಸಿಕ್ಸರ್ ಕಿಂಗ್ ಕ್ರಿಸ್ ಲಿನ್ ಐಪಿಎಲ್ ನಿಂದ ಹೊರಕ್ಕೆ?

Posted By:
Subscribe to Oneindia Kannada

ಕೋಲ್ಕತ್ತಾ, ಏಪ್ರಿಲ್ 10: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ನೇ ಆವೃತ್ತಿಯ ಗಾಯಾಳುಗಳ ಪಟ್ಟಿಗೆ ಹೊಸ ಸದಸ್ಯನ ಸೇರ್ಪಡೆಯಾಗಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಭರ್ಜರಿ ಸಿಕ್ಸರ್ ಸಿಡಿಸಿ, ಐಪಿಎಲ್ ಗೆ ಭರ್ಜರಿ ಎಂಟ್ರಿ ಪಡೆದುಕೊಂಡ ಕ್ರಿಸ್ ಲಿನ್ ಅವರು ಎರಡು ಪಂದ್ಯಗಳ ನಂತರ ಟೂರ್ನಿಯಿಂದಲೇ ಔಟ್ ಆಗುವ ಭೀತಿ ಎದುರಿಸುತ್ತಿದ್ದಾರೆ. ಏಕೆ? ಮುಂದೆ ಓದಿ...

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಮುಂಬೈ ಇಂಡಿಯನ್ಸ್ ವಿರುದ್ಧ ಏಪ್ರಿಲ್ 10ರಂದು ನಡೆದ ಪಂದ್ಯದಲ್ಲಿ ಫೀಲ್ಡ್ ಮಾಡುವಾಗ ಕ್ರಿಸ್ ಲಿನ್ ಅವರು ಡೈವ್ ಹೊಡೆದು ಚೆಂಡನ್ನು ತಡೆಯುವ ಯತ್ನದಲ್ಲಿ ಭುಜಕ್ಕೆ ಗಾಯ ಮಾಡಿಕೊಂಡರು.

ಆಸ್ಟ್ರೇಲಿಯಾದ ಈ ಸ್ಫೋಟಕ ಬ್ಯಾಟ್ಸ್ ಮನ್ ಲಿನ್ ಅವರು ಐಪಿಎಲ್ 10ರ ಏಳನೆ ಪಂದ್ಯದಲ್ಲಿ ಮುಂಬೈನ ಜೋಸ್ ಬಟ್ಲರ್ ಅವರು ನೀಡಿದ ಕ್ಯಾಚನ್ನು ಹಿಡಿಯಲು ಯತ್ನಿಸಿದರು.

ಆದರೆ, ಕ್ಯಾಚ್ ಹಿಡಿಯಲು ಸಾಧ್ಯವಾಗದ ಕಾರಣ ಚೆಂಡನ್ನು ಬೌಂಡರಿಗೆ ಹೋಗದಂತೆ ತಡೆದರು. ಈ ಸಂದರ್ಭದಲ್ಲಿ ಅವರ ಭುಜಕ್ಕೆ ಗಾಯವಾಯಿತು. ತಕ್ಷಣವೇ ವೈದ್ಯಕೀಯ ನೆರವಿಗಾಗಿ ಮೊರೆ ಇಟ್ಟರು.

ಪಂದ್ಯದ ನಂತರ ತಮ್ಮ ನೋವನ್ನು ಟ್ವಿಟ್ಟರ್ ಮೂಲಕ ತೋಡಿಕೊಂಡಿದ್ದು, 'ಡಿಯಲ್ ಕ್ರಿಕೆಟ್ ಗಾಡ್, ಡಿಡ್ ಐ ಡು ಸಂಥಿಂಗ್ ರಾಂಗ್?' ಎಂದು ದೇವರಿಗೆ ಪ್ರಶ್ನೆ ಕೇಳಿದ್ದಾರೆ.


ಗಾಯಾಳುವಾದ ಲಿನ್

ಗಾಯಾಳುವಾದ ಲಿನ್

ಕ್ರಿಸ್ ಲಿನ್ ಅವರು ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಕಾಣಿಸಿಕೊಂಡು 93ರನ್ ಬಾರಿಸಿ ಅಜೇಯರಾಗಿ ಉಳಿದಿದ್ದರು. ಎರಡನೇ ಪಂದ್ಯದಲ್ಲಿ 32ರನ್ ಗಳಿಸಿದರು. ಈಗ ಗಾಯಾಳುವಾಗಿದ್ದು, ಟೂರ್ನಿಯಿಂದಲೇ ಹೊರಬೀಳುವ ಸಾಧ್ಯತೆಯಿದೆ. ಸನ್ ರೈಸರ್ಸ್ ಹೈದರಾಬಾದ್ ಪರ ಆಡಲು ಆರಂಭಿಸಿದ ಲಿನ್ 2014ರಲ್ಲೇ ಕೆಕೆಆರ್ ಸೇರಿದರೂ ಇದೇ ಮೊದಲ ಬಾರಿಗೆ ಇನ್ನಿಂಗ್ಸ್ ಓಪನ್ ಮಾಡಿದರು.

ಸಿಕ್ಸರ್ ಕಿಂಗ್ ಎಂದ ಭಜ್ಜಿ

ಮುಂಬೈ ತಂಡದ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಅವರು ಲಿನ್ ಅವರನ್ನು ಹೊಸ ಸಿಕ್ಸರ್ ಕಿಂಗ್ ಎಂದು ಕರೆದಿದ್ದಾರೆ.

ಬ್ರೆಂಡನ್ ಮೆಕಲಮ್ ಟ್ವೀಟ್

ನ್ಯೂಜಿಲೆಂಡ್ ನ ಮಾಜಿ ಸ್ಫೋಟಕ ಆಟಗಾರ, ಗುಜರಾತ್ ಲಯನ್ಸ್ ಆಟಗಾರ ಬ್ರೆಂಡನ್ ಮೆಕಲಮ್ ಅವರು ಕ್ರಿಸ್ ಲಿನ್ ಬಗ್ಗೆ ಹೊಗಳಿ ಟ್ವೀಟ್ ಮಾಡಿದ್ದಾರೆ.

ಕ್ರಿಸ್ ಲಿನ್ ಬ್ಯಾಟಿಂಗ್

ಬ್ಯಾಟಿಂಗ್ ಎಂದರೆ ಇದು ಎಂದು ಹೊಗಳಿದ ಆಸ್ಟ್ರೇಲಿಯಾ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್.

ಲಿನ್ ಭರ್ಜರಿ ಎಂಟ್ರಿ

ಕ್ರಿಸ್ ಲಿನ್ ಮೊದಲ ಪಂದ್ಯದಲ್ಲೇ 8 ಸಿಕ್ಸರ್ 6 ಬೌಂಡರಿ ಬಾರಿಸಿ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ ಎಂದು ಕೆಕೆಆರ್ ಸಿಇಒ ವೆಂಕಿ ಮೈಸೂರ್ ಕೂಡಾ ಹೊಗಳಿದ್ದಾರೆ.

ಹರ್ಷ ಭೋಗ್ಲೆ

ಕಾಮೆಂಟೆಟರ್ ಹರ್ಷ ಭೋಗ್ಲೆ ಅವರು ಕ್ರಿಸ್ ಬಗ್ಗೆ ಹೊಗಳಿ, ನಾನು ಮೊದಲೇ ಈತನ ಬಗ್ಗೆ ಹೇಳಿದ್ದೆ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kolkata Knight Riders' star batsman Chris Lynn's IPL future in under cloud after the Australian suffered a shoulder injury during their match against Mumbai Indians yesterday (April 10).
Please Wait while comments are loading...