ಕೆಕೆಆರ್ ಗೆ ಆಘಾತ, ತಂಡದ ಮುಖ್ಯ ಬೌಲರ್ ಔಟ್

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಕೋಲ್ಕತ್ತಾ, ಏಪ್ರಿಲ್ 19: ಈಗಷ್ಟೇ ಪ್ರಾರಂಭವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ 9ನೇ ಆವೃತ್ತಿಯಲ್ಲಿ ಗಾಯದ ಸಮಸ್ಯೆಯಿಂದಾಗಿ ಒಬ್ಬೊಬ್ಬರಾಗಿಯೇ ಟೂರ್ನಿಯಿಂದ ಹೊರ ಹೋಗುತ್ತಿದ್ದಾರೆ.

ಹೌದು, ಮುಂಬೈ ಇಂಡಿಯನ್ಸ್ ತಂಡದ ಸ್ಲೋ ಯಾರ್ಕರ್ ಸ್ಪೆಷಲಿಸ್ಟ್ ಶ್ರೀಲಂಕಾದ ಲಸಿತ್ ಮಾಲಿಂಗ ಅವರು ಗಾಯದ ಸಮಸ್ಯೆಯಿಂದಾಗಿ ಐಪಿಲ್ 2016 ನಿಂದ ಔಟ್ ಆಗಿರುವ ಬೆನ್ನಲ್ಲಿಯೇ ಮತ್ತೊಬ್ಬ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಲ್ ರೌಂಡರ್ ಆಸ್ಟ್ರೇಲಿಯಾದ ಜಾನ್ ಹಾಸ್ಟಿಂಗ್ಸ್ ಅವರೂ ಟೂರ್ನಿಯಿಂದ ಹೊರ ಹೋಗಿದ್ದಾರೆ. [ನೋಟಿಸ್ ಪಡೆದ ಮಾಲಿಂಗ ಐಪಿಎಲ್ ನಿಂದ ಔಟ್!]

Ankle injury forces John Hasting to miss rest of IPL

ಜಾನ್ ಹಾಸ್ಟಿಂಗ್ಸ್ ಅವರು ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯಕ್ಕೂ ಮುನ್ನ ಅಭ್ಯಾಸದ ವೇಳೆ ಗಾಯಗೊಂಡಿದ್ದಾರೆ. ಇದರಿಂದ ಮುಂದಿನ ಪಂದ್ಯಗಳಲ್ಲಿ ಅವರು ಆಡಲು ಅಸಾಧ್ಯ ಎಂದು ಕೆಕೆಆರ್ ತಂಡ ಅಸಿಸ್ಟೆಂಟ್ ಕೋಚ್ ಸಿಮನ್ ಕಟಿಚ್ ತಿಳಿಸಿದ್ದಾರೆ.

ಐಪಿಲ್ 2016 ಆರಂಭದಲ್ಲಿ ಡೆಲ್ಲಿ ವಿರುದ್ಧ 6 ರನ್ ನೀಡಿ 2 ವಿಕೆಟ್ ಪಡೆದು ಉತ್ತಮ ಪ್ರದರ್ಶನ ತೋರುತ್ತಿದ್ದ ಹಾಸ್ಟಿಂಗ್ಸ್ ಅನುಪಸ್ಥಿತಿ ಕೆಕೆಆರ್ ಕಾಡಲಿದೆ. ಹಾಸ್ಟಿಂಗ್ಸ್ ಅವರ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಚಿಂತನೆ ನಡೆದಿದೆ ಎಂದು ಕ್ಯಾಟಿಚ್ ಸ್ಪಷ್ಟಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
IPL 2016: Kolkata Knight Riders (KKR) have have taken a blow, as their fast bowler John Hastings has been ruled out of the season with an ankle injury.
Please Wait while comments are loading...