ಗಾಯಾಳುಗಳ ತಂಡಕ್ಕೆ ಕಿಂಗ್ಸ್ XIನ ಮ್ಯಾಕ್ಸ್ ವೆಲ್ ಸೇರ್ಪಡೆ

Posted By:
Subscribe to Oneindia Kannada

ಬೆಂಗಳೂರು, ಮೇ17: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 9) ನಲ್ಲಿ ಗಾಯಗೊಂಡು ಟೂರ್ನಿಯ ಮಧ್ಯದಲ್ಲೇ ಹೊರ ಬಿದ್ದ ಆಟಗಾರರ ಪಟ್ಟಿಗೆ ಕಿಂಗ್ಸ್ XI ಪಂಜಾಬ್ ತಂಡದ ಗ್ಲೆನ್ ಮ್ಯಾಕ್ಸ್ ವೆಲ್ ಸೇರ್ಪಡೆಯಾಗಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಕಿಂಗ್ಸ್ XI ಪಂಜಾಬ್ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ಆಸ್ಟ್ರೇಲಿಯಾದ ಆಟಗಾರ ಮ್ಯಾಕ್ಸ್ ವೆಲ್ ಅವರು ಟ್ವೆಂಟಿ20 ಟೂರ್ನಮೆಂಟ್ ಬಿಟ್ಟು ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ.

ಸ್ನಾಯುಸೆಳೆತಕ್ಕೆ ಸಿಲುಕಿರುವ ಮ್ಯಾಕ್ಸ್ ವೆಲ್ ಅವರು ಆಸ್ಟ್ರೇಲಿಯಾ ಪರ ಆಡಲು ಸಿದ್ಧಗೊಳ್ಳಬೇಕಿದೆ. 27 ವರ್ಷ ವಯಸ್ಸಿನ ಮ್ಯಾಕ್ಸ್ ವೆಲ್ ಅವರು 11 ಇನ್ನಿಂಗ್ಸ್ ಗಳಿಂದ 179ರನ್ ಗಳಿಸಿದ್ದು, ಮೇ 17ರಂದು ಐಪಿಎಲ್ 9 ನಿಂದ ಹೊರ ಬರುತ್ತಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.[ಐಪಿಎಲ್ 2016 : ಹೊರ ಹೋದ ಆಟಗಾರರ ಪಟ್ಟಿ]

Kings XI Punjab's Glenn Maxwell ruled out of IPL 2016

ಈಗಾಗಲೇ ಆಸ್ಟ್ರೇಲಿಯಾ ಮೂಲದ ಸ್ಟೀವ್ ಸ್ಮಿತ್ (ರೈಸಿಂಗ್ ಪುಣೆ ಸೂಪರ್ ಜೈಂಟ್ಸ್), ಶಾನ್ ಮಾರ್ಷ್ (ಕಿಂಗ್ಸ್ XI ಪಂಜಾಬ್), ಮಿಚೆಲ್ ಮಾರ್ಷ್ (ಪುಣೆ), ಜಾನ್ ಹಾಸ್ಟಿಂಗ್ಸ್ (ಕೋಲ್ಕತ್ತಾ ನೈಟ್ ರೈಡರ್ಸ್) ಅವರು ಗಾಯದ ಕಾರಣ ಹೇಳಿ ಐಪಿಎಲ್ 9ಕ್ಕೆ ಗುಡ್ ಬೈ ಹೇಳಿದ್ದಾರೆ.

ಪಂಜಾಬ್ ತಂಡ 12 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿದೆ. ಮುರಳಿ ವಿಜಯ್ ನೇತೃತ್ವದ ತಂಡ 7 ಅಂಕಗಳನ್ನು ಮಾತ್ರ ಪಡೆದಿದ್ದು, ಮೇ 18ರಂದು ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಲಿದೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
All-rounder Glenn Maxwell is the latest Australian set to return home from the Indian Premier League 2016 (IPL 9) due to an injury.
Please Wait while comments are loading...