ಪುಣೆ ಪಂದ್ಯಕ್ಕೂ ಮುನ್ನ 'ಪ್ರಿನ್ಸ್' ಭೇಟಿ ಮಾಡಿದ 'ಕಿಂಗ್' ಕೊಹ್ಲಿ

Posted By:
Subscribe to Oneindia Kannada

ಪುಣೆ, ಜನವರಿ 13: ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯಕ್ಕೂ ಮುನ್ನ ಕಿಂಗ್ ಕೊಹ್ಲಿ ಅವರು ಪ್ರಿನ್ಸ್ ಭೇಟಿ ಮಾಡಿದ್ದಾರೆ.

ಇಲ್ಲಿನ ಮಹಾರಾಷ್ಟ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಗುರುವಾರ ರಾತ್ರಿ ಪ್ರಿನ್ಸ್ ಜತೆ ಕಾಲ ಕಳೆದು ಸಂತಸ ಪಟ್ಟಿದಾರೆ. ಟೀಂ ಇಂಡಿಯಾ ನಾಯಕ ಕೊಹ್ಲಿ ಮನಗೆದ್ದ ಪ್ರಿನ್ಸ್ ಯಾರು ಎಂದರೆ, ಮೈದಾನದ ಸೆಕ್ಯುರಿಟಿ ನಾಯಿಯಾಗಿದೆ.

'King' Virat Kohli meets Prince in Pune ahead of 1st England ODI

28 ವರ್ಷ ವಯಸ್ಸಿನ ಕೊಹ್ಲಿ ಅವರು ಪ್ರಾಣಿಪ್ರಿಯ ಎಂಬುದು ಹೊಸ ವಿಷಯವೇನಲ್ಲ. ಕೊಹ್ಲಿ ಅವರು ಪ್ರಿನ್ಸ್ ಜತೆ ಕಾಲ ಕಳೆದ ಚಿತ್ರಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದೆ.

ಕೊಹ್ಲಿ ಅವರು ತಮ್ಮ ಸಾಕುನಾಯಿ ಬ್ರೂನೋ ಜತೆ ಅನೇಕ ಬಾರಿ ಫೋಟೋ ಹಾಕಿದ್ದು ನೆನಪಿರಬಹುದು. ಇಂಗ್ಲೆಂಡ್ ಹಾಗೂ ಭಾರತ ನಡುವಿನ ಟೆಸ್ಟ್ ಪಂದ್ಯದ ವೇಳೆ ಚೆನ್ನೈನಲ್ಲೂ ಕೂಡಾ ಸೆಕ್ಯುರಿಟಿ ಡಾಗ್ ಜತೆ ಕೊಹ್ಲಿ ಫೋಟೋ ತೆಗೆಸಿಕೊಂಡಿದ್ದರು.

ಕೊಹ್ಲಿ ಅವರ ಪ್ರಾಣಿ ಪ್ರೇಮವನ್ನು ಅಭಿಮಾನಿಗಳು ಟ್ವೀಟ್ ಮೂಲಕ ಕೊಂಡಾಡಿದ್ದಾರೆ. ಜನವರಿ 15ರಂದು ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ahead of the One Day International series opener against England, India's new captain Virat Kohli was in a playful mood at Pune's Maharashtra Cricket Association (MCA) Stadium on January 12.
Please Wait while comments are loading...