ಐಪಿಎಲ್ ಪ್ರಭಾವ, ವಿಂಡೀಸ್ ತಂಡಕ್ಕೆ ಪೊಲಾರ್ಡ್, ನರೇನ್ ವಾಪಸ್

Posted By:
Subscribe to Oneindia Kannada

ಮುಂಬೈ, ಮೇ 20: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಉತ್ತಮ ಆಟ ಪ್ರದರ್ಶಿಸುತ್ತಿರುವ ಮುಂಬೈ ಇಂಡಿಯನ್ಸ್ ನ ಕಿರಾನ್ ಪೊಲ್ಲಾರ್ಡ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸುನಿಲ್ ನರೇನ್ ಅವರಿಗೆ ಮತ್ತೊಮ್ಮೆ ವೆಸ್ಟ್ ಇಂಡೀಸ್ ತಂಡ ಸೇರುವ ಅವಕಾಶ ಸಿಕ್ಕಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಬರುವ ತ್ರಿಕೋನ ಏಕದಿನ ಸರಣಿ(ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ) ಯ ಮೊದಲ ನಾಲ್ಕು ಪಂದ್ಯಗಳಿಗೆ ವೆಸ್ಟ್‌ಇಂಡೀಸ್ ತಂಡವನ್ನು ಗುರುವಾರ ಪ್ರಕಟಿಸಲಾಗಿದೆ. ಎರಡು ವರ್ಷಗಳ ಬಳಿಕ ಆಲ್‌ರೌಂಡರ್ ಕೀರನ್ ಪೊಲಾರ್ಡ್ ಹಾಗೂ ಆಫ್-ಸ್ಪಿನ್ನರ್ ಸುನೀಲ್ ನರೇನ್ ತಂಡ ಸೇರಿದ್ದಾರೆ. [ವೆಸ್ಟ್ ಇಂಡೀಸ್ ಬೋರ್ಡ್ ದಂಡ ಮನ್ನಾ ಮಾಡಿದ ಬಿಸಿಸಿಐ]

ಪೊಲಾರ್ಡ್ ಅವರು ಅಕ್ಟೋಬರ್ 2014ರಲ್ಲಿ ಕೊನೆಯ ಬಾರಿ ವಿಂಡೀಸ್ ಪರ ಏಕದಿನ ಪಂದ್ಯವನ್ನು ಆಡಿದ್ದರು. ವಿಂಡೀಸ್ ತಂಡದಿಂದ ಹೊರಬಿದ್ದರೂ ಕೋಲ್ಕತಾ ನೈಟ್ ರೈಡರ್ಸ್ ತಂಡ ಮಾತ್ರ ಸುನಿಲ್ ಕೈಬಿಟ್ಟಿರಲಿಲ್ಲ. ನರೇನ್ ಅವರು ನವೆಂಬರ್ 2015ರಲ್ಲಿ ಕೊನೆಯ ಬಾರಿ ವಿಂಡೀಸ್ ಪರ ಏಕದಿನ ಪಂದ್ಯ ಆಡಿದ್ದರು. [ಗಳಿಸಿದ ರನ್ ಗಳಿಗಿಂತ ಹೆಚ್ಚು ಹೆಣ್ಣುಗಳ ಜತೆ ಮಲಗಿದ್ದ ಕ್ರಿಕೆಟರ್]

Kieron Pollard returns in WI squad after two-year exile, World T20 quartet sidelined

ಜೂ.3 ರಂದು ಗಯಾನದಲ್ಲಿ ಆರಂಭವಾಗಲಿರುವ ತ್ರಿಕೋನ ಸರಣಿಗೆ ಆಯ್ಕೆಯಾಗಿರುವ 15 ಸದಸ್ಯರ ತಂಡಕ್ಕೆ ಯುವ ಆಟಗಾರ ಜಾಸನ್ ಹೋಲ್ಡರ್ ನಾಯಕರಾಗಿದ್ದು,, ಅಶ್ಲೇ ನರ್ಸ್ ಹಾಗೂ ಶಾನನ್ ಗಾಬ್ರಿಯೆಲ್ ತಂಡದಲ್ಲಿ ಹೊಸ ಮುಖಗಳಾಗಿವೆ.

ಕ್ರಿಸ್ ಗೇಲ್ ಹಾಗೂ ಡ್ವೇಯ್ನಿ ಬ್ರಾವೊಗೆ ಸ್ಥಾನ ಕಲ್ಪಿಸಲಾಗಿಲ್ಲ. ಇಬ್ಬರು ಐಪಿಎಲ್ ನಂತರ ವಿಶ್ರಾಂತಿ ಬಯಸಿದ್ದು, ಇತರೆ ಕ್ರಿಕೆಟ್ ಲೀಗ್ ಗಳಲ್ಲಿ ಪಾಲ್ಗೊಳ್ಳುವ ಉತ್ಸಾಹದಲ್ಲಿದ್ದಾರೆ. [ಮಂಡಳಿಯನ್ನು ಝಾಡಿಸಿದ ವೆಸ್ಟ್ ಇಂಡೀಸ್ ನಾಯಕ]

ವೆಸ್ಟ್‌ಇಂಡೀಸ್ ತಂಡ: ಜಾಸನ್ ಹೋಲ್ಡರ್(ನಾಯಕ), ಸುಲೇಮಾನ್ ಬೆನ್, ಕಾರ್ಲಸ್ ಬ್ರಾಥ್‌ವೈಟ್, ಡರೆನ್ ಬ್ರಾವೊ, ಜೋನಾಥನ್ ಕಾರ್ಟರ್, ಜಾನ್ಸನ್ ಚಾರ್ಲ್ಸ್, ಆಂಡ್ರೆ ಫ್ಲೆಚರ್, ಶಾನನ್ ಗಾಬ್ರಿಯೆಲ್, ಸುನೀಲ್ ನರೇನ್, ಅಶ್ಲೇ ನರ್ಸ್, ಕೀರನ್ ಪೊಲಾರ್ಡ್, ದಿನೇಶ್ ರಾಮ್ದೀನ್, ಮರ್ಲಾನ್ ಸ್ಯಾಮುಯೆಲ್ಸ್, ಜೆರೊಮಿ ಟೇಲರ್.

ಜೂನ್ 3 ರಿಂದ 26 ರ ತನಕ ಗಯಾನಾ, ಸೈಂಟ್ ಕಿಟ್ಸ್, ನೆವಿಸ್, ಬಾರ್ಬಡೋಸ್ ನಲ್ಲಿ ತ್ರಿಕೋನ ಏಕದಿನ ಸರಣಿ ನಡೆಯಲಿದೆ. (ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The West Indies selectors have named Kieron Pollard in a 14-man squad for next month's tri-nation series, ending the Trinidadian all-rounder's near two-year exile from the cricket team.
Please Wait while comments are loading...