ಲಾರ್ಡ್ಸ್ ಅಂಗಳದಲ್ಲಿ ಮತ್ತೆ ಕಾಣಿಸಿಕೊಂಡ ಕಿಚ್ಚ ಸುದೀಪ

Posted By:
Subscribe to Oneindia Kannada

ಲಂಡನ್, ಜುಲೈ 23: ಜನಪ್ರಿಯ ನಟ ಕಿಚ್ಚ ಸುದೀಪ್ ಅವರು ಮತ್ತೊಮ್ಮೆ ಲಾರ್ಡ್ಸ್ ಅಂಗಳಕ್ಕೆ ಕಾಲಿಡುತ್ತಿದ್ದಾರೆ. ಆದರೆ, ಈ ಬಾರಿ ಕ್ರಿಕೆಟ್ ಆಡುವ ಬದಲು ಕ್ರಿಕೆಟ್ ಆಟ ನೋಡಲು ಹೋಗುತ್ತಿದ್ದಾರೆ. ದಿ ವಿಲನ್ ಚಿತ್ರೀಕರಣ ಮುಗಿಸಿಕೊಂಡು, ಕ್ರಿಕೆಟ್ ಆಟ ನೋಡಲು ಹೋಗುವುದಾಗಿ ಸುದೀಪ್ ಟ್ವೀಟ್ ಮಾಡಿದ್ದಾರೆ.

ಲಾರ್ಡ್ಸ್ ಮೈದಾನದಲ್ಲಿ ಬ್ಯಾಟ್ ಬೀಸಲಿರುವ ನಮ್ಮ ಸುದೀಪ್!

ಬ್ರಿಟನ್ ಅಂಗಳದಲ್ಲಿ ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿದ ಭಾರತದ ವನಿತೆಯರ ತಂಡ ವಿಶ್ವಕಪ್ ಫೈನಲ್ ​ಗೆ ಲಗ್ಗೆ ಇಟ್ಟಿದೆ. ಫೈನಲ್​​ ನಲ್ಲಿ ಇಂಗ್ಲೆಂಡ್​ ತಂಡವನ್ನು ಅದರ ಅಂಗಳದಲ್ಲೇ ಎದುರಿಸಲಿದೆ.

Kichcha Sudeep to visit Lord's again, to watch Women's Cricket World cup

ವಿಶ್ವಕಪ್​ ಫೈನಲ್ ​​ನಲ್ಲಿ ಇಂಗ್ಲೆಂಡ್​ ವಿರುದ್ಧ ಭಾರತದ ಅವರ ಅಂಗಳದಲ್ಲೇ ಸೆಣಸಲಿದೆ. ಈ ಮಹತ್ವದ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ ಸ್ಯಾಂಡಲ್​ವುಡ್​ ನಟ ಸುದೀಪ್.

ವಿಶ್ವಕಪ್ ಫೈನಲ್ ಪಂದ್ಯದ ವರದಿ : ಭಾರತ ವಿರುದ್ಧ ಇಂಗ್ಲೆಂಡ್

ಸದ್ಯ ದಿ ವಿಲನ್ ಚಿತ್ರದ ಶೂಟಿಂಗ್​ಗಾಗಿ ಲಂಡನ್​ನಲ್ಲಿರುವ ಕಿಚ್ಚ ಈ ಲಾರ್ಡ್ಸ್​ನಲ್ಲಿ ನಡೆಯಲ್ಲಿ ನಡೆಯಲಿರುವ ವನಿತೆಯರ ಕ್ರಿಕೆಟ್​ನ ಅಂತಿಮ ಹಣಾಹಣಿ ಪಂದ್ಯವನ್ನು ಕಣ್ತುಂಬಿಕೊಳ್ಳಲಿದ್ದಾರೆ.

ಈ ವಿಷಯವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಸುದೀಪ್ ಎಲ್ಲ ಶೆಡ್ಯೂಲ್​​ಗಳು ಸಂತೋಷದಿಂದ ಕಳೆದಿದ್ದು, ವರ್ಲ್ಡ್ ಕಪ್​ನಲ್ಲಿ ಭಾರತೀಯ ವನಿತೆಯರ ಆಟವನ್ನು ನೋಡಲು ಕಾತುರದಲ್ಲಿದ್ದೇನೆ ಇಂತಹ ಅಪರೂಪದ ಹಾಗು ಹೆಮ್ಮೆಯ ಕ್ಷಣಗಳನ್ನು ತಪ್ಪಿಸಿಕೊಳ್ಳುವುದಾದ್ರು ಹೇಗೆ ಅಂತ ತಮ್ಮ ಟ್ವಿಟರ್​​ನಲ್ಲಿ ಹೇಳಿಕೊಂಡಿದ್ದಾರೆ.

ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯಿಸುತ್ತಿರುವ 'ದಿ ವಿಲನ್' ಚಿತ್ರದ ಶೂಟಿಂಗ್ ಲಂಡನ್ ನಲ್ಲಿ ನಡೆಯುತ್ತಿತ್ತು. ಸತತ ಒಂದು ವಾರದಿಂದ ಲಂಡನ್ ನಲ್ಲಿ ಬೀಡು ಬಿಟ್ಟಿದ್ದ ವಿಲನ್ ಬಳಗ ಈಗ ಲಂಡನ್ ನಿಂದ ಭಾರತಕ್ಕೆ ವಾಪಸ್ ಆಗಲಿದೆ. ಆದರೆ, ಸುದೀಪ್ ಮಾತ್ರ ಪಂದ್ಯ ನೋಡಿಕೊಂಡು ಬರುತ್ತಿದ್ದಾರೆ.

Virat kohli Back In RCB Team

ಇದೇ ವೇಳೆ ಲಂಡನ್ನಿನಲ್ಲಿರುವ ಕರ್ನಾಟಕದ ಹೆಮ್ಮೆಯ ಗಾಯಕ ರಘು ದೀಕ್ಷಿತ್ ಅವರು ತಮ್ಮ ಕಾರ್ಯಕ್ರಮಕ್ಕೆ ಬರುವಂತೆ ಟ್ವೀಟ್ ನಲ್ಲೇ ಆಹ್ವಾನ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Actor Kichcha Sudeep to visit Lord's again, to watch Women's Cricket World cup. Indian eves take on host England in final clash.Last time Sudeep visited Lords and played a match.
Please Wait while comments are loading...